ಸಾರಾಂಶ
ದಲಿತ ಸಮುದಾಯದ ಕನಗನಮರಡಿ ಬೊಮ್ಮರಾಜು(ಸಂಘಟನೆ), ಡಾ.ರವಿ(ವೈದ್ಯಕೀಯ), ನರಸಮ್ಮ(ಸೋಬಾನೆ), ಡಿ.ರಂಗ(ಪೌರಕಾರ್ಮಿಕ), ಪರಮೇಶ್ ಗಾನಸುಮ(ಸಂಗೀತ) ಹಾಗೂ ಜೈನ ಸಮುದಾಯದ ದಿವಂಗತ ಲಲಿತಾಂಗಕುಮಾರ್ ಸ್ಮರಣಾರ್ಥವಾಗಿ ಕುಶ್ವಂತ್‌ಲಾಲ್(ಸಂಘಟನೆ) ಶಂಕರ್‌ಲಾಲ್(ಸಮಾಜಸೇವೆ)ರನ್ನು ಅಭಿನಂದಿಸಲಾಯಿತು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಮಹಾವೀರ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳು, ಇಂತಹ ದೊಡ್ಡ ಸುಧಾರಕರ ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಮಗಿರಿ ಶಾಖಾಮಠದ ಕಾರ‍್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರು ಹೇಳಿದರು.ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್, ಮಹಾವೀರ ಜಯಂತಿ ಹಾಗೂ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ತಳಸಮುದಾಯದಲ್ಲಿ ಹುಟ್ಟಿಬೆಳೆದವರು. ದೀಪದ ಕೆಳಗೆ ಓದಿ ಹೆಚ್ಚು ಜ್ಞಾನ ಬೆಳೆಸಿಕೊಂಡು ದೇಶಕ್ಕೆ ದೊಡ್ಡ ಸಂವಿಧಾನವನ್ನು ಕೊಟ್ಟರು. ಸಂವಿಧಾನದ ಮೂಲಕ ಹಲವಾರು ಮೂಲಭೂತ ಹಕ್ಕುಗಳನ್ನು ದೊರಕಿಸಿಕೊಟ್ಟು ಸಮಾಜದಲ್ಲಿ ಸಾಕಷ್ಟು ಸುಧಾರಣೆ ತಂದರು. ಮಹಾವೀರರು ಸಮಾಜದ ಸುಧಾರಣೆಗಳಿಗಾಗಿ ಶ್ರಮಿಸಿದ ಮಹಾನ್ ನಾಯಕರು, ಮಕ್ಕಳು ಇಂತಹ ವ್ಯಕ್ತಿಗಳ ಆದರ್ಶಗಳ ಬಗ್ಗೆ ಅರಿವು ಮೂಡಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಹಾನ್ ನಾಯಕರ ಜಯಂತಿಯನ್ನು ಆಚರಣೆ ಮಾಡುವ ಜತೆಗೆ ಆಯಾ ಸಮುದಾಯದಲ್ಲಿನ ಹಲವು ಸಾಧಕರನ್ನು ಗುರುತಿಸಿ, ಅಭಿನಂದನೆ ಸಲ್ಲಿಸುತ್ತಿರುವುದಕ್ಕೆ ಸಂಸ್ಥೆಯ ಕಾರ‍್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಕ್ಕಳು ಇಂತಹ ಕಾರ‍್ಯಕ್ರಮಗಳಲ್ಲಿ ಪಾಲ್ಗೊಂಡು ಗಣ್ಯರು ನೀಡುವ ಮಾಹಿತಿಗಳನ್ನು ಅರ್ಥೈಸಿಕೊಳ್ಳಬೇಕು, ಜತೆಗೆ ಮಹಾತ್ಮರ ಜೀವನ ಚರಿತ್ರೆಯ ಪುಸ್ತಕಗಳನ್ನು ಓದುವ ಮೂಲಕ ಅವರ ಸಿದ್ದಾಂತಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.ದಲಿತ ಸಮುದಾಯದ ಕನಗನಮರಡಿ ಬೊಮ್ಮರಾಜು(ಸಂಘಟನೆ), ಡಾ.ರವಿ(ವೈದ್ಯಕೀಯ), ನರಸಮ್ಮ(ಸೋಬಾನೆ), ಡಿ.ರಂಗ(ಪೌರಕಾರ್ಮಿಕ), ಪರಮೇಶ್ ಗಾನಸುಮ(ಸಂಗೀತ) ಹಾಗೂ ಜೈನ ಸಮುದಾಯದ ದಿವಂಗತ ಲಲಿತಾಂಗಕುಮಾರ್ ಸ್ಮರಣಾರ್ಥವಾಗಿ ಕುಶ್ವಂತ್‌ಲಾಲ್(ಸಂಘಟನೆ) ಶಂಕರ್‌ಲಾಲ್(ಸಮಾಜಸೇವೆ)ರನ್ನು ಅಭಿನಂದಿಸಲಾಯಿತು.
ಸಮಾರಂಭದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಸಿ.ಮಂಜುನಾಥ್, ಉದ್ಯಮಿ ಹಾಳೇಗೌಡ, ಮುಖ್ಯಶಿಕ್ಷಕ ರಘು ಸೇರಿದಂತೆ ಹಲವರು ಇದ್ದರು.