ಸಾರಾಂಶ
ಇಲ್ಲಿಯ ರಾಮೇಶ್ವರಸ್ವಾಮಿ ದೇವಸ್ಥಾನದ ಕಾವೇರಿ ನದಿ ವಹ್ನಿ ಪುಕ್ಷರಣಿಯ ಎರಡು ಬದಿಯ ಒಂದು ಪರ್ಲಾಂಗ್  (200 ಮೀಟರ್ ) ನದಿಯನ್ನು ಮತ್ಸ್ಯ ಸಂರಕ್ಷಿತ ಪ್ರದೇಶ ಎಂದು ಮೈಸೂರು ಮೀನುಗಾರಿಕೆ ಇಲಾಖೆ  ಆರ್. ಗಣೇಶ್ ತಿಳಿಸಿದರು. ಈ ಕ್ಷೇತ್ರದಲ್ಲಿ ಬರುವ ಭಕ್ತರು ಸಂರಕ್ಷಿತ ಮೀನುಗಳಿಗೆ ಪುರಿ, ಕಡಲೆಕಾಯಿ, ಹಿಂಡಿ ಮುಂತಾದ ಅಹಾರವನ್ನು ಹಾಕಬಹುದು. ಈ ಸ್ಥಳದಲ್ಲಿ ಪ್ಲಾಸ್ಟಿಕ್, ಗೋಣಿಚೀಲ, ಕಸ ಕಡ್ಡಿ ಬಟ್ಟೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಹಾಕಬಾರದು. ಈ ನಿಯಮ ಉಲ್ಲಂಘನೆ ಮಾಡಿದರೆ ಶಿಕ್ಷಗೆ ಗುರಿ ಪಡಿಸಲಾಗುವುದು ಎಂದು ಗಣೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಮನಾಥಪುರ
ಇಲ್ಲಿಯ ರಾಮೇಶ್ವರಸ್ವಾಮಿ ದೇವಸ್ಥಾನದ ಕಾವೇರಿ ನದಿ ವಹ್ನಿ ಪುಕ್ಷರಣಿಯ ಎರಡು ಬದಿಯ ಒಂದು ಪರ್ಲಾಂಗ್ (200 ಮೀಟರ್ ) ನದಿಯನ್ನು ಮತ್ಸ್ಯ ಸಂರಕ್ಷಿತ ಪ್ರದೇಶ ಎಂದು ಮೈಸೂರು ಮೀನುಗಾರಿಕೆ ಇಲಾಖೆ ಜಂಟಿ ನಿರ್ಧಶಕರಾದ ಆರ್. ಗಣೇಶ್ ತಿಳಿಸಿದರು.ರಾಮನಾಥಪುರದ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿರುವ ವಹ್ನಿಪುಕ್ಷರಣಿಗೆ ಬುಧವಾರ ಹಾರಂಗಿಯಿಂದ 5 ಸಾವಿರ ಮಹಶೀರ್ ಮೀನು ಮರಿಗಳನ್ನು ಇಲ್ಲಿನ ಕಾವೇರಿ ನದಿಗೆ ಬಿಟ್ಟ ನಂತರ ಮಾತನಾಡಿದ ಅವರು, ಈ ಪ್ರದೇಶದಲ್ಲಿ ವಿಶ್ವವಿಖ್ಯಾತ ಬಿಳಿಮೀನು (ಮಹಶೀರ್) ಮತ್ತಿತರ ಅಪಾಯದ ಅಂಚಿನಲ್ಲಿರುವ ಮೀನುಗಳನ್ನು ಆ ವಾಸಸ್ಥಾನವಾಗಿದೆ. ಈ ನೈಸರ್ಗಿಕ ಪರಿಸರವನ್ನು ಮತ್ಸ್ಯ ಸಂಕುಲಗಳನ್ನು ಕಾಪಾಡುವುದು ನಮ್ಮಲ್ಲರ ಕರ್ತವ್ಯ. ಈ ಪ್ರದೇಶದಲ್ಲಿ ಮೀನು ಹಿಡಿಯುವುದನ್ನು ಸಿಡಿಮದ್ದು, ವಿಷಕಾರಕ ವಸ್ತುಗಳನ್ನು ನೀರು ಕಲುಷಿತ ಗೊಳಿಸುವುದನ್ನು ನಿಷೇಧಿಸಲಾಗಿದೆ. ಈ ಕ್ಷೇತ್ರದಲ್ಲಿ ಬರುವ ಭಕ್ತರು ಸಂರಕ್ಷಿತ ಮೀನುಗಳಿಗೆ ಪುರಿ, ಕಡಲೆಕಾಯಿ, ಹಿಂಡಿ ಮುಂತಾದ ಅಹಾರವನ್ನು ಹಾಕಬಹುದು. ಈ ಸ್ಥಳದಲ್ಲಿ ಪ್ಲಾಸ್ಟಿಕ್, ಗೋಣಿಚೀಲ, ಕಸ ಕಡ್ಡಿ ಬಟ್ಟೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಹಾಕಬಾರದು. ಈ ನಿಯಮ ಉಲ್ಲಂಘನೆ ಮಾಡಿದರೆ ಶಿಕ್ಷಗೆ ಗುರಿ ಪಡಿಸಲಾಗುವುದು ಎಂದು ಗಣೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಹಾಸನ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ನಂಜುಂಡಪ್ಪ, ಹಾರಂಗಿ ಮೀನುಗಾರಿಕೆ ಇಲಾಖೆ ನಿರ್ದೇಶಕರು ಸಚಿನ್. ಅರಕಲಗೂಡು ತಾಲೂಕಿನ ಸಹಾಯಕ ನಿರ್ದೇಶಕರು ರಾಮನಾಥಪುರ ಕೃಷ್ಣ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಜಿಲ್ಲಾಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಾಳಬೋಯಿ, ಖಜಾಂಚಿ ರಘ, ತಾಲೂಕು ಅಧ್ಯಕ್ಷರು ಸಿದ್ದರಾಜು, ಖಜಾಂಚಿ ಕೇಶವ ಮುಂತಾದವರು ನದಿಗೆ ಮೀನು ಮರಿಗಳನ್ನು ಬಿಟ್ಟರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))