ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಡೆಂಘೀ ಎದುರಿಸಲು ಸ್ವಚ್ಛತೆಗೆ ಆದ್ಯತೆ ನೀಡಿ, ಗಾಬರಿ ಬೇಡ, ಸುತ್ತ-ಮುತ್ತ ನೈರ್ಮಲ್ಯ ಕಾಪಾಡಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್.ಮಹೇಶ್ ಸಾರ್ವಜನಿಕರಿಗೆ ಮನವಿ ಮಾಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಾನಾ ಸಂಘ ಸಂಸ್ಥೆಗಳಿಂದ ನಗರದ ಎಸ್.ಎಸ್.ಇ.ಎ. ಪ.ಪೂ.ಕಾಲೇಜಿನ ಆವರಣದಲ್ಲಿ ಡೆಂಘೀ ನಿಯಂತ್ರಣ ಕುರಿತು ಆಯೋಜಿಸಿದ್ದ ಜಾಗೃತಿ ಜಾಥಾದಲ್ಲಿ ಅರು ಮಾತನಾಡಿದರು.
ತಾಲೂಕಿನಲ್ಲಿ 20 ಪ್ರಕರಣ ಪತ್ತೆಮನೆಯಲ್ಲಿ ನೀರಿನ ಸಂಗ್ರಹಗಳನ್ನು ವಾರಕ್ಕೆ ಎರಡು ಬಾರಿ ಬದಲಾಯಿಸಿ, ಹಳೆ ಟೈರುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಹಗಲು ವೇಳೆ ಕಚ್ಚುವ ಸೊಳ್ಳೆಗಳಿಂದಯಿಂದ ರಕ್ಷ ಣೆ ಪಡೆಯಿರಿ. ವ್ಯಾಪಾಕವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು. ತಾಲ್ಲೂಕಿನಲ್ಲಿ ಈಗಾಗಲೇ 20 ಕ್ಕೂ ಹೆಚ್ಚು ಡೆಂಗು ಪ್ರಕರಣಗಳು ದಾಖಲಾಗಿವೆ ಎಂದು ಎಚ್ಚರಿಸಿದರು. ತಾಲೂಕು ಆರೋಗ್ಯಾಧಿಕಾರಿ ಚಂದ್ರಮೋಹನ್ ರೆಡ್ಡಿ ಮಾತನಾಡಿ, ನಗರ ವ್ಯಾಪ್ತಿ ಸೇರಿದಂತೆ ಅಂಗನವಾಡಿ, ಆಶಾ ಕಾರ‍್ಯಕರ್ತೆಯರಿಂದ ಮನೆ ಮನೆಗೆ ಭೇಟಿ ನೀಡಿ, ಲಾರ್ವಾ ಸಮೀಕ್ಷೆ ನಡೆಸಿ, ಸೊಳ್ಳೆಗಳ ನಿಯಂತ್ರಣ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ಜ್ವರದ ಲಕ್ಷ ಣಗಳು ಕಾಣಿಸಿಕೊಂಡರೂ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಡೆಂಘೀ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಔಷಧೋಪಚಾರಗಳನ್ನು ಒದಗಿಸಲಾಗಿದೆ. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯುವುದರಿಂದ ಇಂತಹ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕೆಂದರು. ವಾರ್ಡ್‌ಗಳಲ್ಲಿ ಅರಿವು ಕಾರ್ಯಕ್ರಮಮಳೆ ಅಡಚಣೆಯ ನಡುವೆಯೂ ವಿದ್ಯಾರ್ಥಿಗಳು ಆಯ್ದ ಹತ್ತು ವಾರ್ಡ್ ಗಳಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಿದ್ದಾರೆ,ನಗರದ ಸಂತೆ ಮೈದಾನ,ಕಾಕನ ತೋಪು,ಶ್ರೀನಗರ ಕರೇಕಲ್ಲಹಳ್ಳಿ,ಉಪ್ಪಾರ ಕಾಲೋನಿ ವೀರಂಡ ಹಳ್ಳಿ, ನೆಹರೂಜಿ ಕಾಲೋನಿ,ಟಿಪ್ಪು ನಗರ,ಸೇರಿದಂತೆ ಹಲವು ವಾರ್ಡ್ ಗಳಲ್ಲಿ ಸಾರ್ವಜನಿಕರಿಗೆ ಡೆಂಗಿ ಜಾಗೃತಿ ಮೂಡಿಸಿದ್ದಾರೆ.ಹಂತ ಹಂತವಾಗಿ ನಗರದ ಎಲ್ಲಾ ಕಡೆಗಳಲ್ಲೂ ಈ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಲ್ದಾರ್ ಮಹೇಶ್ ಪತ್ರಿ, ಪೌರಾಯುಕ್ತೆ ಡಿ.ಎಂ.ಗೀತಾ, ಬಿ.ಇ.ಒ ಶ್ರೀನಿವಾಸ ಮೂರ್ತಿ, ವಲಯ ಅರಣ್ಯಧಿಕಾರಿ ಹಂಸವಿ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಎಸ್.ಎಸ್. ಮತ್ತು ಕಾಲೇಜಿನ ವಿದ್ಯಾರ್ಥಿಗಳು,ಅಂಗನವಾಡಿ, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು ಪಾಲ್ಗೊಂಡಿದ್ದರು.