ಗ್ರಾಪಂ ಅಭಿವೃದ್ಧಿಯ ಶಕ್ತಿ ಕೇಂದ್ರ: ಗೋಪಾಲಗೌಡ

| Published : Jul 20 2024, 12:51 AM IST

ಗ್ರಾಪಂ ಅಭಿವೃದ್ಧಿಯ ಶಕ್ತಿ ಕೇಂದ್ರ: ಗೋಪಾಲಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ಆಡಳಿತದ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಅಧಿಕಾರದ ಅವಕಾಶ ಸಿಕ್ಕಿದ್ದು, ಮಹಿಳೆಯರು ಶಿಕ್ಷಣ, ವ್ಯಾಪಾರ, ಅಭಿವೃದ್ಧಿ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಸಬಲರಾಗಲು ಸಾಧ್ಯ. ಮಹಿಳಾ ಸಂಘಗಳ ಮೂಲಕ ಸ್ವಯಂ ಉದ್ಯೋಗಗಳಿಂದ ಸಮಾಜದ ಮುಂಚೂಣಿಗೆ ಬರುವ ಅವಕಾಶಗಳಿವೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು.

ಸೂಲಿಬೆಲೆ: ಗ್ರಾಪಂಗಳು ಅಭಿವೃದ್ಧಿಯ ಶಕ್ತಿಕೇಂದ್ರಗಳಾಗಿದ್ದು ಸದಸ್ಯರು ಸೇವಾ ಅವಕಾಶವನ್ನು ಸದ್ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಗೋಪಾಲಗೌಡ ಹೇಳಿದರು.

ಲಕ್ಕೊಂಡಹಳ್ಳಿ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಜನತೆಯ ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ಸರ್ಕಾರಗಳು ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಜನಸ್ಪಂದನಾ ಕಾರ್ಯಕ್ರಮ ಮಾಡುತ್ತಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದರು.

ಗ್ರಾಪಂ ಅಧ್ಯಕ್ಷೆ ಭಾರತಿ ಮಾತನಾಡಿ, ಸ್ಥಳೀಯ ಆಡಳಿತದ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಅಧಿಕಾರದ ಅವಕಾಶ ಸಿಕ್ಕಿದ್ದು, ಮಹಿಳೆಯರು ಶಿಕ್ಷಣ, ವ್ಯಾಪಾರ, ಅಭಿವೃದ್ಧಿ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಸಬಲರಾಗಲು ಸಾಧ್ಯ. ಮಹಿಳಾ ಸಂಘಗಳ ಮೂಲಕ ಸ್ವಯಂ ಉದ್ಯೋಗಗಳಿಂದ ಸಮಾಜದ ಮುಂಚೂಣಿಗೆ ಬರುವ ಅವಕಾಶಗಳಿವೆ. ಅವುಗಳನ್ನು ಸದುಪಯೋಗ ಮಾಡಿಕೊಲ್ಳಬೇಕು ಎಂದು ಹೇಳಿದರು.

ಇದೇ ವೇಳೆ ಮಹಿಳೆಯರಿಗೆ ಮತ್ತು ವಿಶೇಷಚೇತನರಿಗೆ ಹೋಲಿಗೆ ಯಂತ್ರ, ಗ್ರಾಪಂ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಹೇಮಲತಾ, ಆರೋಗ್ಯ ಇಲಾಖೆ ವನಿತಾ, ರೇಷ್ಮೆ ಇಲಾಖೆ ಸುರೇಶ್, ಹಿಂದುಳಿದ ವರ್ಗಗಳ ಇಲಾಖೆ ಶರಣಪ್ಪ ಪಾಟೀಲ್‌, ಪಿಡಿಒ ಸುರೇಶ್, ಕಾರ್ಯದರ್ಶಿ ಗೋವಿಂದೇಗೌಡ, ಉಪಾಧ್ಯಕ್ಷೆ ಪಾರ್ವತಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಆನಂದ್, ಬೈರೇಗೌಡ, ರಾಧಾಕೃಷ್ಣ, ಪದ್ಮಾವತಿ, ತಾಪಂ ಮಾಜಿ ಸದಸ್ಯ ಮಂಜುನಾಥ್, ಸದಸ್ಯರಾದ ಮುನಿಯಮ್ಮ, ಮಂಜುಳಾ, ಪದ್ಮಾವತಿ, ನಾರಾಯಣಸ್ವಾಮಿ, ಲಕ್ಷ್ಮಣ, ವಿನಯ್, ಹೇಮಣ್ಣ, ರಾಜಣ್ಣ, ಸುನೀತಾ ಇತರರಿದ್ದರು.