ಲಯನ್ಸ್ ಕ್ಲಬ್ ಸೆಂಚುರಿ ಬೆಳ್ಮಣ್ಣು ಹಾಗೂ ಲಯನ್ಸ್ ಕ್ಲಬ್ ಕಿನ್ನಿಗೋಳಿ ಆಶ್ರಯದಲ್ಲಿ ಕಿನ್ನಿಗೋಳಿ ಮುಖ್ಯ ಅಂಚೆ ಕಚೇರಿಗೆ ಕುಡಿಯುವ ನೀರಿನ ಶುದ್ಧ ಜಲ ಘಟಕ ಹಸ್ತಾಂತರ ಹಾಗೂ ಲೋಕಾರ್ಪಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮೂಲ್ಕಿ
ಲಯನ್ಸ್ ಸಂಸ್ಥೆ ಹಲವಾರು ಜನೋಪಯೋಗಿ ಯೋಜನೆ ಹಮ್ಮಿಕೊಂಡಿದ್ದು, ಸುಮಾರು 50ಕ್ಕೂ ಹೆಚ್ಚು ಶುಧ್ದ ಜಲ ಘಟಕ, ಸೂರಿಲ್ಲದರಿಗೆ ಮನೆ ಹಸ್ತಾಂತರ ನಡೆದಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಸ್ವಪ್ನಾ ಸುರೇಶ್ ಹೇಳಿದರು.ಲಯನ್ಸ್ ಕ್ಲಬ್ ಸೆಂಚುರಿ ಬೆಳ್ಮಣ್ಣು ಹಾಗೂ ಲಯನ್ಸ್ ಕ್ಲಬ್ ಕಿನ್ನಿಗೋಳಿ ಆಶ್ರಯದಲ್ಲಿ ಕಿನ್ನಿಗೋಳಿ ಮುಖ್ಯ ಅಂಚೆ ಕಚೇರಿಗೆ ಕುಡಿಯುವ ನೀರಿನ ಶುದ್ಧ ಜಲ ಘಟಕ ಹಸ್ತಾಂತರ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಜಿಲ್ಲಾ ಯೋಜನಾ ನಿರ್ದೆಶಕ ರಂಜನ್ ಕಲ್ಕೂರ ಮಾತನಾಡಿ, ಅಂಚೆ ಕಚೇರಿಯು ಸ್ವಚ್ಚ ಸೇವೆ ನೀಡುತ್ತಿದ್ದು, ಇಲ್ಲಿನ ಅಗತ್ಯವಾದ ಕುಡಿಯುವ ನೀರಿನ ಘಟಕ ನೀಡಲಾಗಿದೆ ಎಂದು ಹೇಳಿದರು.ಅಂಚೆ ಇಲಾಖೆಯ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲ ಭಟ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶಿಬರೂರು, ಕಿನ್ನಿಗೋಳಿ ಅಂಚೆ ಕಚೇರಿಯ ಪೋಸ್ಟ್ ಮಾಸ್ತರ್ ಹರಿಣಾಕ್ಷಿ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ಸುನೀತ ಶೆಟ್ಟಿ , ಶೈಲಜಾ ಪಾಟ್ಕರ್, ಸುಧಾಕರ ಶೆಟ್ಟಿ, ಮೋಹನ್‌ದಾಸ್ ಶೆಟ್ಟಿ, ಪ್ರೇಮಲತಾ ಶೆಟ್ಟಿ, ಸದಾನಂದ ಶೆಟ್ಟಿಗಾರ್, ಫ್ರಾನ್ಸಿಸ್ ಸೆರಾವೂ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ಮಣ್ಣು ಲಯನ್ಸ್ ಕ್ಲಬ್ ಅಧ್ಯಕ್ಷೆ ಸುನೀತಾ ಬಾಲಚಂದ್ರ ಶೆಟ್ಟಿ ಸ್ವಾಗತಿಸಿದರು. ವಲಯಾಧ್ಯಕ್ಷ ವಿಶ್ವನಾಥ ಪಾಟ್ಕರ್ ಪ್ರಸ್ತಾವನೆಗೈದರು. ರಾಮಚಂದ್ರ ಕಾಮತ್ ಬೆಳ್ಳಣ್ಣು ವಂದಿಸಿದರು. ರಘುನಾಥ ಕಾಮತ್ ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು.