ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಎಪಿಎಂಸಿಯಲ್ಲಿ ತೆರೆಯಲಿದ್ದು, ಎಪಿಎಂಸಿಯ ನೋಂದಾಯಿತ ವರ್ತಕರು ಮೆಕ್ಕೆಜೋಳ ಖರೀದಿಗೆ ಮುಂದೆ ಬರಬೇಕು. ಜತೆಗೆ ರೈತರು ತಾವು ಬೆಳೆದ ಮೆಕ್ಕೆಜೋಳವನ್ನು ಪಟ್ಟಣದ ಕೃಷಿ ಮಾರುಕಟ್ಟೆಗೆ ಮಾರಾಟಕ್ಕಾಗಿ ತರುವ ಮೂಲಕ ಈ ‍ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಎಪಿಎಂಸಿಯಲ್ಲಿ ತೆರೆಯಲಿದ್ದು, ಎಪಿಎಂಸಿಯ ನೋಂದಾಯಿತ ವರ್ತಕರು ಮೆಕ್ಕೆಜೋಳ ಖರೀದಿಗೆ ಮುಂದೆ ಬರಬೇಕು. ಜತೆಗೆ ರೈತರು ತಾವು ಬೆಳೆದ ಮೆಕ್ಕೆಜೋಳವನ್ನು ಪಟ್ಟಣದ ಕೃಷಿ ಮಾರುಕಟ್ಟೆಗೆ ಮಾರಾಟಕ್ಕಾಗಿ ತರುವ ಮೂಲಕ ಈ ‍ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಪಟ್ಟಣದ ಕೃಷಿ ಮಾರುಕಟ್ಟೆ (ಎಪಿಎಂಸಿ) ಸಭಾಂಗಣದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, 2025-26ನೇ ಸಾಲಿಗೆ ಮುಂಗಾರು ಹಂಗಾಮಿಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಲ್ಲಿ ಮೆಕ್ಕೆಜೋಳವನ್ನು ನಿಯಂತ್ರಿತ ಮಾರುಕಟ್ಟೆಗಳಲ್ಲಿ ಅಗುವ ವಹಿವಾಟಿನ ಧಾರಣೆ ಅಧಾರದ ಮೇಲೆ ರೈತರಿಗೆ ಬೆಲೆ ವೈತ್ಯಾಸದ ಮೊತ್ತವನ್ನು ಪಾವತಿಸಲು ಸರ್ಕಾರ ಸೂಚಿಸಿದೆ ಎಂದರು.

ಮೆಕ್ಕೆಜೋಳವನ್ನು ಮಾರುಕಟ್ಟೆ ಅಥವಾ ಉಪಮಾರುಕಟ್ಟೆಗಳಲ್ಲಿ ಮೆಕ್ಕಜೋಳ ಉತ್ಪಾದನೆ ಅಧಾರದ ಮೇಲೆ ಗರಿಷ್ಠ 4 ಲಕ್ಷ ಮೆಟ್ರಿಕ್ ಟನ್ ಪ್ರಮಾಣದಲ್ಲಿ ಮಾತ್ರ ರಾಜ್ಯದ 12 ಜಿಲ್ಲೆಗಳಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅನುಷ್ಠಾಗೊಳಿಸಲು ಸರ್ಕಾರ ಮುಂದಾಗಿದ್ದು, ಇತರೆ ಜಿಲ್ಲೆಗಳಲ್ಲಿ ಜಿಲ್ಲಾ ಟಾಸ್ಕ್‌ಪೋರ್ಸ ಸಮಿತಿಗಳಿಂದ ಶಿಫಾರಸು ಸ್ವೀಕೃತವಾದಲ್ಲಿ ಆ ಜಿಲ್ಲೆಗಳಿಗೆ ಸಹ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖವಾಗಿದೆ ಎಂದ ಮಾಹಿತಿ ನೀಡಿದರು.

ಮೆಕ್ಕೆಜೋಳಕ್ಕೆ ಸರ್ಕಾರ ಸರಾಸರಿಯಾಗಿ ಕ್ವಿಂಟಲ್‌ಗೆ ₹2150 ಬೆಂಬಲ ಬೆಲೆ ನಿಗದಿಪಡಿಸಿದ್ದು, ಈಗಾಗಲೇ ಪ್ರತಿ ಕ್ವಿಂಟಲ್‌ಗೆ 1900 ರೈತರಿಂದ ಮಾರಾಟ ವಹಿವಾಟು ಆಗಿದ್ದು, ಇದೀಗ ಸಹಕಾರ ಮಂಡಳಿಯಲ್ಲಿ ಅಧಾರ್‌ ಕಾರ್ಡ್‌, ಪಹಣೆ ,ಕೃಷಿ ಇಲಾಖೆ ನೀಡಿರುವ ಎಫ್‌ಐಡಿ ನಂಬರ್, ದಾಖಲೆಗಳನ್ನುಕೊಟ್ಟು ರೈತರು ನೊಂದಾಯಿಸಿಕೊಳ್ಳಬೇಕು. ನೋಂದಾವಣೆಯಾದ ನಂತರ ಮೆಕ್ಕೆಜೋಳದ ಧಾರಣೆಗೆ ನಿಯಂತ್ರಿತ ಮಾರುಕಟ್ಟೆಗಳಲ್ಲಿ ಅಗುವ ವಹಿವಾಟಿನ ಅಧಾರದ ಮೇಲೆ ರೈತರಿಗೆ ದರ ವ್ಯತ್ಯಾಸದ ಮೊತ್ತವನ್ನು ಪಾವತಿಸಲಾಗುವುದು ಎಂದು ತಿಳಿಸಿದರು

ಈ ಯೋಜನೆಯಡಿ.ಖರೀದಿ ಪ್ರಕ್ರಿಯೆ ಜನವರಿ 12ರಿಂದ ಒಂದು ತಿಂಗಳ ಕಾಲಾವಧಿಯವರೆಗೆ ನಡೆಯಲಿದೆ ಎಂದು ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಎ.ಜಿ.ಪ್ರಕಾಶ್, ಓಬಿಸಿ ರಾಜ್ಯ ಉಪಾಧ್ಯಕ್ಷ ಎಚ್.ಎ.ಉಮಾಪತಿ, ತಾಲೂಕು ಕಾಂಗ್ರೇಸ್ ಅಧ್ಯಕ್ಷ ಸಣ್ಣಕ್ಕಿ ಬಸನಗೌಡ, ಸಾಸ್ವೇಹಳ್ಳಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆರ್. ನಾಗಪ್ಪ, ಕೆಪಿಸಿಸಿ ಸದಸ್ಯ ಡಾ.ಈಶ್ವರನಾಯ್ಕ, ಎಪಿಎಂಸಿ ಕಾರ್ಯದರ್ಶಿ ಮಂಜುನಾಥ ಇತರರು ಇದ್ದರು.