ಸಾರಾಂಶ
ಪಟ್ಟಣದ ಎಲ್ಲ ವಾರ್ಡ್ಗಳ ಮನೆ ಮನೆಗೆ ಹೋಗಿ ಪ್ರತಿಯೊಬ್ಬರನ್ನು ಬಿಜೆಪಿ ಸದಸ್ಯರನ್ನಾಗಿ ಮಾಡುವ ಮೂಲಕ ಪಕ್ಷ ಸಂಘಟನೆ ಮುಂದಾಗಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪಟ್ಟಣದ ಎಲ್ಲ ವಾರ್ಡ್ಗಳ ಮನೆ ಮನೆಗೆ ಹೋಗಿ ಪ್ರತಿಯೊಬ್ಬರನ್ನು ಬಿಜೆಪಿ ಸದಸ್ಯರನ್ನಾಗಿ ಮಾಡುವ ಮೂಲಕ ಪಕ್ಷ ಸಂಘಟನೆ ಮುಂದಾಗಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.ಸ್ಥಳೀಯ ಕೆಎಚ್‌ಡಿಸಿ ಕಾಲೋನಿಯಲ್ಲಿ ಬೆಳಗ್ಗೆ ಮನೆ ಮನೆಗೆ ಹೋಗಿ ಬಿಜೆಪಿ ಸದಸ್ಯತ್ವದ ಬಗ್ಗೆ ಮತ್ತು ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತೀಳಿ ಹೇಳಿದರು. ನಂತರ ಅವರ ಮೊಬೈಲ್‌ನಲ್ಲಿ ಸದಸ್ಯತ್ವವನ್ನು ತಾವೆ ಖುದ್ದಾಗಿ ಮತದಾರರ ಮನೆಗೆ ತೆರಳಿ ಮಾಡಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯು ಬಡವರ, ದೀನ ದಲಿತರ, ನೇಕಾರ, ರೈತ ಹೀಗೆ ಇನ್ನೂ ಹತ್ತು ಹಲವಾರು ಜನಾಂಗದವರ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತ ಬಂದಿದೆ. ಆದ್ದರಿಂದ ಮುಂದೆ ಬರುವ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಗಳಿಸುವಂತೆ ಈಗಿನಿಂದಲೇ ಮತದಾರರಿಗೆ ಪಕ್ಷದ ಸಿದ್ಧಾಂತಗಳನ್ನು ತಿಳಿಸಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸದಸ್ಯತ್ವ ಮಾಡುವ ಗುರಿ ನಿಮ್ಮದಾಗಿರಲಿ ಎಂದು ಕಾರ್ಯಕರ್ತರಿಗೆ ಹೇಳಿದರು.ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ, ಪುರಸಭೆ ಸದಸ್ಯ ಚನಬಸು ಯರಗಟ್ಟಿ ಮಾತನಾಡಿ, ಬಿಜೆಪಿ ಸರ್ಕಾರ ಇದ್ದಾಗ ಎಲ್ಲರೂ ಒಂದಲ್ಲ ಒಂದು ಯೋಜನೆಗಳನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನಮ್ಮ ಸರ್ಕಾರದ ಇದ್ದಾಗಿನ ಆಡಳಿತದ ಬಗ್ಗೆ ಜನರಲ್ಲಿ ವಿಶ್ವಾಸವಿದೆ. ಹೀಗಾಗಿ ಎಲ್ಲರೂ ಬಿಜೆಪಿ ಸದಸ್ಯತ್ವ ಮಾಡುವ ಮೂಲಕ ನಮಗೆ ಸಹಕರಿಸುತ್ತಿದ್ದಾರೆ ಎಂಬ ನಂಬಿಕೆ ಇದೆ. ಈ ಬಾರಿ ಅತಿ ಹೆಚ್ಚು ಸದಸ್ಯತ್ವ ಮಾಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಈರಪ್ಪ ದಿನ್ನಿಮನಿ, ಮಹಾಲಿಂಗಪ್ಪ ಕುಳ್ಳೋಳ್ಳಿ, ಶಿವಾನಂದ ಅಂಗಡಿ, ಶಂಕರಗೌಡ ಪಾಟೀಲ, ಮನೋಹರ ಶಿರೋಳ, ವಿಷ್ಣುಗೌಡ ಪಾಟೀಲ, ಶ್ರೀಮಂತ ಹಳ್ಳಿ, ಚನ್ನಪ್ಪ ಪಟ್ಟಣಶೆಟ್ಟಿ, ಮುತ್ತಪ್ಪ ದಲಾಲ, ಗುರುಪಾದ ಅಂಬಿ, ಮಹೇಶ ಜಿಡ್ಡಿಮನಿ, ಬಸವರಾಜ ಮಡಿವಾಳ, ತಿಪ್ಪಣ್ಣ ಬಂಡಿವಡ್ಡರ, ಮಹಾಲಿಂಗ ಬುದ್ನಿ, ವೀರೇಶ ಮುಂಡಗನೂರ, ಮಲ್ಲಪ್ಪ ಚಮಕೇರಿ, ಸಿದ್ದಪ್ಪ ಸಗರಿ, ಸೇರಿದಂತೆ ಹಲವರು ಇದ್ದರು.