ಸಾರಾಂಶ
ಕುಷ್ಟಗಿ: ತಾಲೂಕಿನ ದೋಟಿಹಾಳ ಹಾಗೂ ಗುಮಗೇರಿ ಗ್ರಾಮದಲ್ಲಿ ನೂತನ ಅಂಚೆ ಕಚೇರಿ ಕಟ್ಟಡಗಳಿಗೆ ಸಂಸದ ರಾಜಶೇಖರ ಹಿಟ್ನಾಳ ಭೂಮಿ ಪೂಜೆ ನೆರವೇರಿಸಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು185 ಪೋಸ್ಟ್ ಆಫೀಸ್‌ಗಳನ್ನು ಸಿಎಸ್ಆರ್ ಅನುದಾನದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದು, ಮೊದಲನೇಯ ವರ್ಷದಲ್ಲಿ 50 ಅಂಚೆ ಕಚೇರಿಯ ಕಟ್ಟಡ ನಿರ್ಮಾಣ ಕೆಲಸ ಕೈಗೆತ್ತಿಕೊಂಡಿದೆ ಎಂದ ಅವರು, ಅಂಚೆ ಕಚೇರಿಯು ಬ್ಯಾಂಕಿಂಗ್ ಸೇವೆ ಸೇರಿದಂತೆ ಅನೇಕ ಸೇವೆ ನೀಡುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಕೊಪ್ಪಳ ವಿಭಾಗೀಯ ಅಂಚೆ ಕಚೇರಿಯ ಅಧಿಕಾರಿ ಜಿ.ಎನ್.ಹಳ್ಳಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ನೂರಾರು ಅಂಚೆ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕೆಲಸ ಮಾಡುವ ಮೂಲಕ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆಗಳ ಜತೆಗೆ ಇನ್ಶೂರೆನ್ಸ್ ಸೇವೆ,ಅಂಚೆ ಸೇವೆಗಳನ್ನು ಸಮರ್ಪಕವಾಗಿ ಒದಗಿಸುತ್ತಿವೆ ಆದರೆ ಸ್ವಂತ ಕಟ್ಟಡ ಇಲ್ಲ ಎಂಬ ಕೊರಗು ಇತ್ತು ಇಂತಹ ಪರಿಸ್ಥಿತಿ ಅರಿತುಕೊಂಡು ನಾವು ಸಂಸದರಿಗೆ ಮನವಿ ಮಾಡಿಕೊಂಡಾಗ ಅವರು ಅನೇಕ ಸಭೆಗಳನ್ನು ನಡೆಸುವದರ ಮೂಲಕ ಸಿಎಸ್ಆರ್ ಅನುದಾನದಡಿಯಲ್ಲಿ ಕಟ್ಟಡಗಳ ನಿರ್ಮಾಣದ ಕೈಗೆತ್ತಿಕೊಳ್ಳಬೇಕು ಎಂದು ನಿರ್ಣಯ ಮಾಡುವ ಮೂಲಕ ಕಟ್ಟಡ ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಾರೆ ಇದು ನಮ್ಮ ಕೊಪ್ಪಳ ಜಿಲ್ಲೆಯಲ್ಲಿಯೆ ಮೊದಲ ಪ್ರಯೋಗಕ್ಕೆ ಮುಂದಾಗಿರುವದು ಸಂಸದರ ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಅಂಚೆ ಕಚೇರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅನೇಕ ತರಹದ ಸೇವೆ ಒದಗಿಸುತ್ತಿದ್ದು ಸಾರ್ವಜನಿಕರು ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ, ಶೇಖರಗೌಡ ಮಾಲಿಪಾಟೀಲ, ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ, ಸುರೇಶ ಕುಂಟನಗೌಡ್ರು, ಶಿವಶಂಕರಗೌಡ ಪಾಟೀಲ, ರುದ್ರಮುನಿಸ್ವಾಮಿ ದೇವಾಂಗಮಠ, ಪಿಡಿಒ ನಾಗರತ್ನ ಮ್ಯಾಳಿ, ಗ್ರಾಪಂ ಉಪಾಧ್ಯಕ್ಷರು, ಸದಸ್ಯರು, ಅಂಚೆ ಕಚೇರಿಯ ಸಿಬ್ಬಂದಿ, ಗ್ರಾಮಸ್ಥರು ಇದ್ದರು.ದೋಟಿಹಾಳ ಹಾಗೂ ಕೇಸೂರು ಗ್ರಾಮದ ನಿವಾಸಿಗಳು ದೋಟಿಹಾಳ ಗ್ರಾಮದ ಆರಾಧ್ಯ ದೇವರಾದ ಶ್ರೀಶುಖಮುನಿ ಸ್ವಾಮಿ ದೇವಸ್ಥಾನದ ಮುಖ್ಯದ್ವಾರ ಬಾಗಿಲು ನಿರ್ಮಿಸಿಕೊಡುವಂತೆ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮುತ್ತಣ್ಣ ಕಾಟಾಪೂರ, ಪರಶುರಾಮ ಈಳಗೇರ, ಶೇಖಪ್ಪ, ಭರಮಗೌಡ, ಮುತ್ತಪ್ಪ, ಜಾವಿದ ಕಾಟೇವಾಡಿ ಸೇರಿದಂತೆ ಅನೇಕರು ಇದ್ದರು.
ಬಳೂಟಗಿ ಗ್ರಾಮಸ್ಥರು ಬಳೂಟಗಿ ಗ್ರಾಮದಲ್ಲಿ ಅರ್ಧಕ್ಕೆ ನಿಂತಿರುವ ಸಮುದಾಯ ಭವನದ ಕಟ್ಟಡಕ್ಕೆ ಹತ್ತು ಲಕ್ಷ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.ಈ ವೇಳೆ ಮುತ್ತಣ್ಣ ಮೇಟಿ, ರಮೇಶ ಮದ್ನಾಳ, ಶೇಖರಗೌಡ, ಪಂಪಣ್ಣ ಸಾಹುಕಾರ, ಸಂಗಪ್ಪ ಮೇಟಿ ಸೇರಿದಂತೆ ಇತರರು ಇದ್ದರು.