ಸಾರಾಂಶ
ಹೆಣ್ಣು ಹೆತ್ತವರು ತಮ್ಮ ಮಕ್ಕಳನ್ನು ನೌಕರಿಯವರಿಗೆ ಕೊಡುವ ಮನಸ್ಥಿತಿಯಿಂದ ಹೊರಗಡೆ ಬಂದು ರೈತರ ಮಕ್ಕಳಿಗೆ ಕನ್ಯೆ ಕೊಡುವ ಮನಸ್ಸು ಮಾಡಬೇಕು
ಕನ್ನಡಪ್ರಭ ವಾರ್ತೆ ಹುನಗುಂದ
ಜಗತ್ತಿಗೆ ಅನ್ನ ನೀಡುವ ರೈತರಿಗೆ ಇಂದಿನ ದಿನಗಳಲ್ಲಿ ಕನ್ಯೆ ಕೊಡುತ್ತಿಲ್ಲದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಕೋಲ್ಹಾರದ ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥ ಸ್ವಾಮೀಜಿ ನುಡಿದರು.ತಾಲೂಕಿನ ಹಗೇದಾಳ ಗ್ರಾಮದಲ್ಲಿ ವೆಂಕಟೇಶ್ವರ ಜಾತ್ರಾ ಮಹೋತ್ಸವ ಹಾಗೂ ನವರಾತ್ರಿ ಉತ್ಸವದ ನಿಮಿತ್ತ ಆಯೋಜಿಸಿದ ದೇವಿ ಪುರಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಈ ದೇಶದಲ್ಲಿ ಎಂತಹ ದೊಡ್ಡ ಅಧಿಕಾರದಲ್ಲಿದ್ದವರು ಸಹ ಅವರು ರೈತರು ಬೆಳೆದ ಆಹಾರವನ್ನು ಸೇವಿಸಲ್ಲೇ ಬೇಕು. ಹೆಣ್ಣು ಹೆತ್ತವರು ತಮ್ಮ ಮಕ್ಕಳನ್ನು ನೌಕರಿಯವರಿಗೆ ಕೊಡುವ ಮನಸ್ಥಿತಿಯಿಂದ ಹೊರಗಡೆ ಬಂದು ರೈತರ ಮಕ್ಕಳಿಗೆ ಕನ್ಯೆ ಕೊಡುವ ಮನಸ್ಸು ಮಾಡಬೇಕು ಎಂದರು.
ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಸರಿಯಾದ ಶಿಕ್ಷಣ ನೀಡುವುದರಿಂದ ಉತ್ತಮ ಆದರ್ಶ ಸಮಾಜ ನಿರ್ಮಾಣವಾಗುತ್ತದೆ. ಮನುಷ್ಯನಾದ ಮೇಲೆ ಭೂಮಿಯಲ್ಲಿರುವ ಪ್ರತಿಯೊಬ್ಬರಿಗೆ ಕಷ್ಟ ಬರುತ್ತದೆ. ಹಸಿದವರಿಗೆ ಊಟ, ಕಷ್ಟದಲ್ಲಿದ್ದವರಿಗೆ ಕೈಲಾದಷ್ಟು ಸಹಾಯ ಮತ್ತು ದಾನ ಮಾಡಬೇಕು. ತಂದೆ-ತಾಯಿಗಳಿಗೆ ಮಕ್ಕಳು ಗೌರವ, ಪ್ರೀತಿ, ವಾತ್ಸಲ್ಯದಿಂದ ಕಾಣಬೇಕು ಎಂದರು.ವೇದಮೂರ್ತಿ ಗುರುಶಾಂತಯ್ಯ ಹಿರೇಮಠ, ಶಿವಯೋಗಿ ಅಯ್ಯಪ್ಪಸ್ವಾಮಿ ಶಾಸ್ತ್ರೀಮಠ, ಪುರಾಣ ಪ್ರವಚನಕಾರ ಹಿರೇಮಠದ ದೊಡ್ಡಬಸಯ್ಯಶಾಸ್ತ್ರಿ ಹಿರೇಮಠ, ಸಂಗೀತಗಾರ ಯುವರಾಜ ಹಿರೇಮಠ, ವೀರಭದ್ರಯ್ಯ ತಬಲವಾದಕ ವೀರಭದ್ರಯ್ಯ ಗುಡದೂರಕಲ್ಮಠ, ವೆಂಕಟೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿಯ ಬಾನಪ್ಪ ಹಗೇದಾಳ ಇದ್ದರು.