ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯದ ಸಾರಥ್ಯ ಬ್ಲಾಕ್ ಹಾರ್ಸ್ ಕೈಗೆ ಸಿಗಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಫೋಟಕ ಹೇಳಿಕೆ ನೀಡಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಆಗಲಿ, ಸತೀಶ ಜಾರಕಿಹೊಳಿಯಾಗಲಿ ಮುಖ್ಯಮಂತ್ರಿ ಆಗುವುದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ಒಮ್ಮೆ ಸಿಎಂ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದಾರೆ. ಸಿಎಂ ಪುತ್ರ ಕೂಡ ಬೆಳಗಾವಿಗೆ ಬಂದು ಸತೀಶ್ ಜಾರಕಿಹೊಳಿ ಹೆಸರು ಹೇಳಿ ಹೋಗಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಆಗಲಿದೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.ಒಂದು ವೇಳೆ ವಿಜಯೇಂದ್ರ ಮತ್ತೆ ಬಿಜೆಪಿ ಅಧ್ಯಕ್ಷರಾದರೇ ನಾನು ಜೆಸಿಬಿ (ಜನತಾದಳ, ಕಾಂಗ್ರೆಸ್, ಬಿಜೆಪಿ) ಪಕ್ಷ ಕಟ್ಟುತ್ತೇನೆ. ಜೆಸಿಬಿ ಪಾರ್ಟಿ ರಚನೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿದ್ದೇವೆ. ನೇಮಿಸಿದ ಮರುದಿನವೇ ಪಕ್ಷ ಆ್ಯಕ್ಟಿವ್ ಆಗಲಿದೆ. ನಾನು ಹೋದ ಕಡೆಗಳಲ್ಲಿ ಜನಬೆಂಬಲ ಸಿಗುತ್ತಿದೆ. ಹಿಂದೂತ್ವದ ಆಧಾರದ ಮೇಲೆ ಪಕ್ಷ ಕಟ್ಟುವೆ ಎಂದರು.ನರೇಂದ್ರ ಮೋದಿ ಜನರಿಂದ ಆದ ನಾಯಕ. ದೇಶದಲ್ಲಿ ಒಂದು ಸಂಚಲನ ಆಗಿದೆ. ಮೋದಿಯವರ ನಂತರ ಯೋಗಿ ಆದಿತ್ಯನಾಥ ಪಿಎಂ ಆಗಬೇಕು ಎಂದು ಜನ ಬಯಸಿದ್ದಾರೆ. ಹಾಗೆಯೇ ರಾಜ್ಯದ ಜನರ ಆಶಾವಾದವಿದೆ. ಜನರಲ್ಲಿ ಯತ್ನಾಳ ಸಿಎಂ ಆಗಬೇಕು ಎನ್ನುವುದಿದೆ. ಇಲ್ಲವಾದರೆ ನಂದು ಜೆಸಿಬಿ ಪಾರ್ಟಿ ರೆಡಿ ಇದೆ ಎಂದ ಅವರು, ಮುಂದಿನ ಚುನಾವಣೆಯೊಳಗೆ ಹೈಕಮಾಂಡ್ ಕರೆಯಬೇಕು. ಕರೆಯದಿದ್ದರೆ ಜೆಸಿಬಿ ಪಾರ್ಟಿ ರೆಡಿ ಇದೆ. ಜೆ ಎಂದರೆ ಜೆಡಿಎಸ್, ಸಿ ಎಂದರೆ ಕಾಂಗ್ರೆಸ್, ಬಿ ಎಂದರೆ ಬಿಜೆಪಿ. ಎಲ್ಲ ಕಡೆಯಿಂದ ನಾನು ಜನರನ್ನು ಕರೆದು ಪಾರ್ಟಿ ಕಟ್ಟುತ್ತೇನೆ. ಎಲ್ಲ ಪಕ್ಷದಲ್ಲೂ ಅತೃಪ್ತರು ಇದ್ದಾರೆ. ಅವರನ್ನು ಕರೆದುಕೊಂಡು ನಾನು ಪಕ್ಷ ಕಟ್ಟುತ್ತೇನೆ ಎಂದರು.ವಿಜಯಪುರದಿಂದ ಜನರನ್ನು ಕರೆದುಕೊಂಡು ಹೋಗಿ ಬೆಂಗಳೂರಿನಲ್ಲಿ ಸಮಾವೇಶ ಮಾಡಿದರು. ಸತೀಶ್ ಜಾರಕಿಹೊಳಿಯನ್ನು ಸಿಎಂ ಮಾಡುವ ಭಯ ಸಿಎಂ ಸಿದ್ದರಾಮಯ್ಯಗೆ ಇದೆ. ಹೀಗಾಗಿ ಎಂ.ಬಿ.ಪಾಟೀಲ್ ರನ್ನು ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ ಎಂದರು.ನವೆಂಬರ್‌ನಲ್ಲಿ ರಾಜ್ಯದಲ್ಲಿ ಕ್ರಾಂತಿ ಆಗಲಿದೆ. ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ. ಡಿಕೆಶಿಯನ್ನು ಸಿಎಂ ಮಾಡುತ್ತೇವೆ ಎಂದು ನೀವು ಡಿಸೈಡ್ ಮಾಡಿದರೆ ನಾನು ಸತೀಶ ಪರವಾಗಿ ನಿಲ್ಲುತ್ತೇನೆ ಎಂದು ಸಿದ್ದರಾಮಯ್ಯ ಸಂದೇಶ ಕೊಟ್ಟಿದ್ದಾರೆ. ತಮ್ಮ ಮಗನನ್ನು ಕಳಿಸಿ ಸಂದೇಶ ಸಾರಿದ್ದಾರೆ ಎಂದು ಟೀಕಿಸಿದರು. ಬಬಲೇಶ್ವರದಲ್ಲಿ ಸಮಾವೇಶ:
ವಿಜಯಪುರದ ಬಬಲೇಶ್ವರ ಕ್ಷೇತ್ರದಲ್ಲಿ ಸಮಾವೇಶ ಮಾಡುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ್ ಸವಾಲನ್ನು ಸ್ವೀಕಾರ ಮಾಡಿದ್ದೇವೆ.ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇವೆ. ಬಸವಣ್ಣನವರ ಹೆಸರು ಹೇಳಿ ನಾಟಕ ಮಾಡಬೇಡಿ. ಬಸವಣ್ಣನವರ ಹೆಸರು ಹೇಳಿ ಪಾದಪೂಜೆ ಮಾಡಿಸಿಕೊಳ್ಳಬಾರದು. ಕಾವಿ ಬದಲಾಗಿ ಹಸಿರು ಬಟ್ಟೆ ಧರಿಸಿ ಎಂದು ಶ್ರೀಗಳಿಗೆ ಅವರು ಸಲಹೆ ನೀಡಿದರು.ಲಿಂಗಾಯತ ಧರ್ಮ ಸ್ಥಾಪನೆಯ ಬಗ್ಗೆ ದಾಖಲೆ ಎಲ್ಲಿದೆ. ಹಿಂದು ಸಮಾಜದಲ್ಲಿರುವ ಮೂಢನಂಬಿಕೆ ವಿರುದ್ಧ ಹೋರಾಟ ಮಾಡಿದರು. ಬಸವಣ್ಣನವರ ಜೊತೆಗೆ ಎಲ್ಲಾ ಸಮಾಜದರು ಇದ್ದರು. ನಿಮ್ಮ ಭೀಮ, ಬಸವ ಆರ್ಮಿ ಬರಲಿ ನಿಮ್ಮ ಭಾಷೆಯಲ್ಲಿಯೇ ನಾವು ಉತ್ತರ ಕೊಡುತ್ತೇವೆ ಎಂದು ಎಂ.ಬಿ.ಪಾಟೀಲ ಅವರಿಗೆ ತಿರುಗೇಟು ನೀಡಿದರು.
;Resize=(128,128))
;Resize=(128,128))