ಮಂಡ್ಯ ಮಹಿಳಾ ಸರ್ಕಾರಿ ಕಾಲೇಜು ಕುಸ್ತಿ ಚಾಂಪಿಯನ್

| Published : Nov 19 2025, 01:00 AM IST

ಮಂಡ್ಯ ಮಹಿಳಾ ಸರ್ಕಾರಿ ಕಾಲೇಜು ಕುಸ್ತಿ ಚಾಂಪಿಯನ್
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ವಿಶ್ವವಿದ್ಯಾನಿಲಯದ 2025-26ನೇ ಸಾಲಿನ ಅಂತರ ಕಾಲೇಜುಗಳ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನ ತಂಡವು ಈ ಬಾರಿಯ ಚಾಂಪಿಯನ್ ಶಿಪ್ ತಂಡವಾಗಿ ಹೊರಹೊಮ್ಮಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾನಿಲಯದ 2025-26ನೇ ಸಾಲಿನ ಅಂತರ ಕಾಲೇಜುಗಳ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನ ತಂಡವು ಈ ಬಾರಿಯ ಚಾಂಪಿಯನ್ ಶಿಪ್ ತಂಡವಾಗಿ ಹೊರಹೊಮ್ಮಿದೆ.

ಅ.18ರಂದು ಮಂಡ್ಯ ವಿಶ್ವವಿದ್ಯಾನಿಲಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಲ್‌ನಲ್ಲಿ ನಡೆದ ಅಂತರ ಕಾಲೇಜುಗಳ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ 4 ಪ್ರಥಮ ಸ್ಥಾನ, 1 ದ್ವಿತೀಯ ಸ್ಥಾನ ಹಾಗೂ 6 ತೃತೀಯ ಸ್ಥಾನ ಗಳಿಸಿ, ಒಟ್ಟು 11 ಪದಕಗಳನ್ನು ಮಹಿಳಾ ಸರ್ಕಾರಿ ಕಾಲೇಜಿನ ತಂಡವು ಪಡೆದಿದ್ದು, ಇದರೊಂದಿಗೆ ಒಟ್ಟು 29 ಅಂಕಗಳನ್ನ ಗಳಿಸುವ ಮೂಲಕ ಈ ಬಾರಿಯ ಮಂಡ್ಯ ವಿಶ್ವವಿದ್ಯಾನಿಲಯದ ಮಹಿಳಾ ವಿಭಾಗದ ಕುಸ್ತಿ ಚಾಂಪಿಯನ್ಸ್ ತಂಡವಾಗಿ ಹೊರಹೊಮ್ಮಿದೆ.

ಪದಕ ವಿಜೇತರಿಗೆ ಹಾಗೂ ಚಾಂಪಿಯನ್ ಶಿಪ್‌ಗೆ ಕಾರಣರಾದ ತಂಡದ ಎಲ್ಲಾ ಮಹಿಳಾ ಕುಸ್ತಿಪಟುಗಳಿಗೆ, ತರಬೇತುದಾರರಾದ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಆರ್ ಲೋಕೇಶ್ ಅವರಿಗೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಗುರುರಾಜ್ ಪ್ರಭು, ಗೆಜೆಟೆಡ್ ಮ್ಯಾನೇಜರ್ ಕೆ.ಪಿ.ರವಿಕಿರಣ್, ಕ್ರೀಡಾ ಸಮಿತಿಯ ಸದಸ್ಯರು ಹಾಗೂ ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

ನ.29ರಂದು ಭಗವದ್ಗೀತಾ ಕಂಠಪಾಠ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಮಂಡ್ಯ

ಬನ್ನಂಜೆ ಗೋವಿಂದಾಚಾರ್ಯರವರ ಶಿಷ್ಯವೃಂದದ ಸಹಯೋಗದೊಂದಿಗೆ ಭಗವದ್ಗೀತಾ ಕಂಠಪಾಠ ಸ್ಪರ್ಧೆ ನ.29ರಂದು ತಾಲೂಕಿನ ಮರಲಿಂಗನದೊಡ್ಡಿ ಗ್ರಾಮದ ಶ್ರೀಮಾಧವ ವಿದ್ಯಾಲಯದಲ್ಲಿ ನಡೆಯಲಿದೆ. ಪ್ರೌಢಶಾಲಾ ವಿಭಾಗದ 7ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಭಗವದ್ಗೀತಾ ಅಧ್ಯಾಯದ 15 (ಶ್ಲೋಕ 1 ರಿಂದ 20) ಹಾಗೂ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಅಧ್ಯಾಯ 15 (ಶ್ಲೋಕ 1 ರಿಂದ 10)ರವರೆಗೆ ಕಂಠಪಾಠ ಸ್ಪರ್ಧೆ ನಡೆಯಲಿದೆ.

ಪ್ರಥಮ ಬಹುಮಾನ 3 ಸಾವಿರ ರು., ದ್ವಿತೀಯ ಬಹುಮಾನ 2500 ರು., ತೃತೀಯ ಬಹುಮಾನ 2 ಸಾವಿರ ರು. ನೀಡಲಾಗುತ್ತದೆ. ಒಂದು ಶಾಲೆಗೆ ಒಂದು ವಿಭಾಗಕ್ಕೆ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಶಾಲಾ ಶಿಕ್ಷಕರು, ಪೋಷಕರು ಮಕ್ಕಳನ್ನು ಕರೆತರಬೇಕು. ಶಾಲಾ ಬಿಳಿ ಸಮವಸ್ತ್ರ ಮತ್ತು ಗುರುತಿನ ಚೀಟಿಯೊಂದಿಗೆ ಬಂದವರಿಗೆ ಮಾತ್ರ ಪ್ರವೇಶ. ಸ್ಪರ್ಧಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಹೆಚ್ಚು ಅಂಕ ಪಡೆದ ಶಾಲೆಗೆ ಪಾರಿತೋಷಕ, ಪ್ರಶಸ್ತಿ ಫಲಕ ವಿತರಿಸಲಾಗುತ್ತದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು, ನ. 20ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಕೃಪೇಷ್ ಬಿ.ಎಂ. 8660811345, ವೀಣಾ 9980261888, ರಾಘವಿ 8970887715 ಸಂಖ್ಯೆಯನ್ನು ಸಂಪರ್ಕಿಸಬಹುದು.