ನೆಟ್ವರ್ಕ್ ಸಮಸ್ಯೆ: ಪೊನ್ನಾಚಿ ಗ್ರಾಮಸ್ಧರ ಪ್ರತಿಭಟನೆ

| Published : Nov 19 2025, 12:45 AM IST

ನೆಟ್ವರ್ಕ್ ಸಮಸ್ಯೆ: ಪೊನ್ನಾಚಿ ಗ್ರಾಮಸ್ಧರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ತಿಂಗಳಿಂದ ನೆಟ್ವರ್ಕ್ ಸಮಸ್ಯೆಯಿಂದ ಕೆಲವೊಂದು ತುರ್ತು ಪರಿಸ್ಥಿತಿಯಲ್ಲಿ ನೆಟ್ವರ್ಕ್ ಸಮಸ್ಯೆ ಇಂದ ತುರ್ತು ಆಂಬುಲೆನ್ಸ್ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿದ್ದು, ಕರೆ ಮಾಡಲು ಸಹ ಸಮಸ್ಯೆಯಾಗುತ್ತಿದೆ ಎಂದು ಅಸ್ತೂರು ಗ್ರಾಮದ ಯುವಕರು ಧಿಡೀರ್ ಪ್ರತಿಭಟನೆ ನಡೆಸಿ ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದ್ದಾರೆ.

ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿಯ ಅಸ್ತೂರು ಗ್ರಾಮದ ಯುವಕರು ಸಾಕಷ್ಟು ದಿನಗಳಿಂದಲೂ ಸಹ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇದ್ದು, ಸಾಕಷ್ಟು ಬಾರಿ ಮನವಿ ಮಾಡಿದ್ದರು ಪ್ರಯೋಜನ ಆಗಿಲ್ಲ ಎಂದು ದೂರಿದ್ದಾರೆ.ಪಡಿತರ ಆಹಾರ ಪಡೆಯಲು ಸಮಸ್ಯೆ:

ಹಲವು ತಿಂಗಳಿಂದ ನೆಟ್ವರ್ಕ್ ಸಮಸ್ಯೆಯಿಂದ ಕೆಲವೊಂದು ತುರ್ತು ಪರಿಸ್ಥಿತಿಯಲ್ಲಿ ನೆಟ್ವರ್ಕ್ ಸಮಸ್ಯೆ ಇಂದ ತುರ್ತು ಆಂಬುಲೆನ್ಸ್ ಸೇವೆ ಪಡೆಯಲು ಸಾಧ್ಯವಾಗದೆ ಬೇರೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗುವಷ್ಟರಲ್ಲಿ ಪ್ರಾಣ ಹೋಗಿ ಬಂದಂತಾಗಿದೆ ಎಂದು ನಿವಾಸಿಗಳು ತಿಳಿಸಿದರು.

ರೇಷನ್ ಕಾರ್ಡ್ ಬೆರಳು ಮಡಗಿ ರೇಷನ್ ಪಡೆಯಲು ಕೂಡ ಕೆಲವೊಂದು ಗ್ರಾಮಗಳಲ್ಲಿ ನೆಟ್ವರ್ಕ್ ಸಿಗುತ್ತಿಲ್ಲ, ಗ್ರಾಮದಿಂದ ಒಂದು ಕಿಲೋಮೀಟರ್ ಬಂದು ಬೆರಳು ಮಡಗಬೇಕು ಬಿಸಿಲು ಮಳೆ ಅನ್ನದೆ ಸರದಿಯಲ್ಲಿ ನಿಂತು ಕಾಡಂಚಿನ ಪ್ರಾಣಿಗಳ ಭಯದಲ್ಲಿ ನಿಲ್ಲಬೇಕು. ಕಳೆದ ಒಂದು ವಾರದಿಂದ ನೆಟ್ವರ್ಕ್ ಬೆಳಗ್ಗೆ ಹೋದರೆ ಸಂಜೆ ಬರುತ್ತಿದೆ, ಈಗೇ ಕಾಡಂಚಿನ ಗ್ರಾಮಗಳಲ್ಲಿ ಈ ರೀತಿಯ ನೆಟ್ವರ್ಕ್ ಸಮಸ್ಯೆ ಇದ್ದು ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಕೂಡಲೇ ಸರಿಪಡಿಸಬೇಕಾಗಿ ಎಂದು ಗ್ರಾಮದ ಮುಖಂಡರಾದ ಅಸ್ತೂರು ರವಿಕುಮಾರ್ ಹಾಗೂ ಮಲಿಂಗಸ್ವಾಮಿ ಅಗ್ರಹಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ರವಿಕುಮಾರ್ ಅಸ್ತೂರು, ಮಹಾಲಿಂಗ, ಮಹಾದೇವ್ ಪ್ರಸಾದ್, ಜಗದೀಶ್, ಅಭಿ, ಶಿವಪ್ಪ, ಇನ್ನಿತರರು ಇದ್ದರು.

----------

18ಸಿಎಚ್ಎನ್20

ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿದ್ದು, ಕರೆ ಮಾಡಲು ಸಹ ಸಮಸ್ಯೆಯಾಗುತ್ತಿದೆ ಎಂದು ಅಸ್ತೂರು ಗ್ರಾಮದ ಯುವಕರು ಧಿಡೀರ್ ಪ್ರತಿಭಟನೆ ನಡೆಸಿ ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದ್ದಾರೆ.