ಇಂದು ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಅಗ್ನಿಹೋತ್ರ

| Published : Oct 05 2025, 01:00 AM IST

ಸಾರಾಂಶ

ಹಾಸನಾಂಬೆ ದೇವಾಲಯದ ರಸ್ತೆ, ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಸಹಯೋಗ, ವೇದಭಾರತೀ ಹಾಗೂ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯ ಸಮಿತಿ ಸಹಯೋಗದಲ್ಲಿ ಅಕ್ಟೋಬರ್ 5ರ ಭಾನುವಾರದಂದು ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಅಗ್ನಿಹೋತ್ರ ಮತ್ತು ಅಗ್ನಿಹೋತ್ರ ಕಾರ್ಯಾಗಾರವನ್ನು ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು. ಪ್ರಮುಖವಾಗಿ ಎಲ್ಲರಿಗಾಗಿ ಯೋಗ, ಎಲ್ಲರಿಗಾಗಿ ಯಜ್ಞ, ಎಲ್ಲರಿಗೂ ಆರೋಗ್ಯ ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಅಗ್ನಿಹೋತ್ರ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಯೋಗ ಪೀಠದ ರಾಜ್ಯ ಯಜ್ಞ ಪ್ರಭಾರಿ ಮತ್ತು ವೇಧ ಭಾರತಿಯ ರಾಜ್ಯ ಸಂಯೋಜಕ ಹರಿಹರಪುರ ಶ್ರೀಧರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಾಸನಾಂಬೆ ದೇವಾಲಯದ ರಸ್ತೆ, ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಸಹಯೋಗ, ವೇದಭಾರತೀ ಹಾಗೂ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯ ಸಮಿತಿ ಸಹಯೋಗದಲ್ಲಿ ಅಕ್ಟೋಬರ್ 5ರ ಭಾನುವಾರದಂದು ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಅಗ್ನಿಹೋತ್ರ ಮತ್ತು ಅಗ್ನಿಹೋತ್ರ ಕಾರ್ಯಾಗಾರವನ್ನು ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು. ಪ್ರಮುಖವಾಗಿ ಎಲ್ಲರಿಗಾಗಿ ಯೋಗ, ಎಲ್ಲರಿಗಾಗಿ ಯಜ್ಞ, ಎಲ್ಲರಿಗೂ ಆರೋಗ್ಯ ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಅಗ್ನಿಹೋತ್ರವು ಪುರಾತನ ಯಜ್ಞ ವಿಧಾನವಾಗಿದ್ದು, ವಾತಾವರಣ ಶುದ್ಧೀಕರಣ, ಮಾನಸಿಕ ಶಾಂತಿ, ದೈಹಿಕ ಆರೋಗ್ಯ ಹಾಗೂ ಸಾಮಾಜಿಕ ಏಕತೆಗಾಗಿ ಬಹುಮುಖ್ಯವಾಗಿದೆ. ಸಾಮೂಹಿಕ ಅಗ್ನಿಹೋತ್ರದ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾದ ಚೈತನ್ಯ ವಾತಾವರಣ ಸೃಷ್ಟಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶ್ರೀ ಭವರಲಾಲ್ ಆರ್ಯ, ವರಿಷ್ಠ ರಾಜ್ಯ ಪ್ರಭಾರಿಗಳು, ಪತಂಜಲಿ ಯೋಗಪೀಠ ಕರ್ನಾಟಕ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಬಿ. ಎಚ್. ವಿಶ್ವನಾಥ ಶ್ರೇಷ್ಠಿ, ಅಧ್ಯಕ್ಷರು, ಆರ್ಯ ವೈಶ್ಯ ಮಂಡಳಿ, ಹಾಸನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಗ್ನಿಹೋತ್ರದಲ್ಲಿ ಭಾಗವಹಿಸುವವರಿಗೆ ವಸ್ತ್ರಸಂಹಿತೆ ರೂಪದಲ್ಲಿಯೇ ಉಡುಪಿನ ಸೂಚನೆ ನೀಡಲಾಗಿದೆ. ಪುರುಷರು ಬಿಳಿ ಪಂಚೆ-ಶಲ್ಯ ಹಾಗೂ ಮಹಿಳೆಯರು ಹಳದಿ ಸೀರೆ, ಕೆಂಪು ರವಿಕೆ ಧರಿಸಬೇಕೆಂದು ಸೂಚಿಸಲಾಗಿದೆ. ಆದಾಗ್ಯೂ, ಅಗತ್ಯವಿದ್ದಲ್ಲಿ ಯಾವುದೇ ಭಾರತೀಯ ಸಾಂಪ್ರದಾಯಿಕ ಉಡುಗೆಯನ್ನು ಧರಿಸಬಹುದಾಗಿದೆ. ಅಗ್ನಿಹೋತ್ರ ನಡೆಸಲು ಅಗತ್ಯವಿರುವ ೬೫೦ ಮೌಲ್ಯದ ಸೆಟ್ ಅನ್ನು ವಿಶೇಷ ರಿಯಾಯಿತಿ ದರದಲ್ಲಿ 500ಕ್ಕೆ ಕಾರ್ಯಕ್ರಮದ ಸ್ಥಳದಲ್ಲೇ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸುವ ಎಲ್ಲರೂ ಬೆಳಿಗ್ಗೆ 8 ಗಂಟೆಯೊಳಗೆ ಸ್ಥಳಕ್ಕೆ ಆಗಮಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಮನ್ವಯಕರಾಗಿ ಪತಂಜಲಿ ಯೋಗ ಪರಿವಾರ ಜಿಲ್ಲಾ ಸಂರಕ್ಷಕರು ಲೋಕನಾಥ್, ಪತಂಜಲಿ ಯೋಗಾ ಸಮಿತಿ ಮಹಿಳಾ ಜಿಲ್ಲಾ ಪ್ರಭಾರಿ ಶಾರದ ಧರ್ಮಾನಂದ್, ಹೇಮಂತ್ ಕುಮಾರ್, ಯೋಗಪಟು ನಾಗರಾಜು ಇತರರು ಉಪಸ್ಥಿತರಿದ್ದರು.