ಚಾಮರಾಜನಗರದ ಜೆಎಸ್‌ಎಸ್ ಕಾಲೇಜು ಕ್ಯಾಂಪಸಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ

| Published : Jun 22 2024, 12:49 AM IST

ಚಾಮರಾಜನಗರದ ಜೆಎಸ್‌ಎಸ್ ಕಾಲೇಜು ಕ್ಯಾಂಪಸಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ಜೆಎಸ್‌ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿ ಹಾಗೂ ಯೋಗ ಬಂಧುಗಳು ಜೆಎಸ್‌ಎಸ್ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಪ್ರತಿ ವರ್ಷದಂತೆ ಈ ಬಾರಿ ೧೪ನೇ ವರ್ಷದ ಬೃಹತ್ ಸಾಮೂಹಿಕ ೧೦೮ ಸೂರ್ಯ ನಮಸ್ಕಾರಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ರಥಸಪ್ತಮಿ ಅಂಗವಾಗಿ ಚಾಮರಾಜನಗರ ಜೆಎಸ್‌ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿ ಹಾಗೂ ಯೋಗ ಬಂಧುಗಳು ಜೆಎಸ್‌ಎಸ್ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ನಗರದ ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿ ಸಹಯೋಗದೊಂದಿಗೆ ಪ್ರತಿ ವರ್ಷದಂತೆ ಈ ಬಾರಿ ೧೪ನೇ ವರ್ಷದ ಬೃಹತ್ ಸಾಮೂಹಿಕ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ದಾನೇಶ್ವರಿ ಅವರು ನೆರವೇರಿಸಿದರು.

ಬೆಳಗಿನ ಜಾವ 6ಕ್ಕೆ ಆರಂಭವಾದ ಕಾರ್ಯಕ್ರಮವನ್ನು ರಾಜಯೋಗಿನಿ ದಾನೇಶ್ವರಿ ಅವರು ಚಾಲನೆ ನೀಡಿ ಮಾತನಾಡಿ, ರಥಸಪ್ತಮಿಯ ದಿನ ಸೂರ್ಯ ತನ್ನ ಪಥ ಬದಲಾಯಿಸುತ್ತಿದ್ದು, ಎಲ್ಲರೂ ಆರೋಗ್ಯವಂತ ಜೀವನಕ್ಕೆ ಯೋಗಾಭ್ಯಾಸ ಅಗತ್ಯ. ಇಡೀ ವಿಶ್ವಕ್ಕೆ ಯೋಗ ಪರಿಚಯ ಮಾಡಿಕೊಟ್ಟಿದ್ದು ಭಾರತ ದೇಶ. ಪ್ರತಿನಿತ್ಯ ಕನಿಷ್ಠ ಒಂದು ಗಂಟೆ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಿದೆ. ಇಂಥ ಯೋಗವನ್ನು ಯುವ ಪೀಳಿಗೆ ಅಭ್ಯಾಸದಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಕಂಡುಕೊಳ್ಳಬಹುದು ಎಂದರು.

ಸಮಿತಿಯ ಅಧ್ಯಕ್ಷ ಯೋಗ ಪ್ರಕಾಶ್ ಮಾತನಾಡಿ ಪ್ರತಿದಿನ ಲವಲವಿಕೆ ಮತ್ತು ಚೈತನ್ಯದಿಂದ ಇರಬೇಕಾದರೆ ಯೋಗಾಭ್ಯಾಸ ಅವಶ್ಯಕ ಎಂದು ೧೦೮ ಸೂರ್ಯ ನಮಸ್ಕಾರ ಆಸನಗಳ ಮಹತ್ವವನ್ನು ತಿಳಿಸಿಕೊಟ್ಟರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿಯು ಸಂಸ್ಕಾರ ಸಂಘಟನೆ ಮತ್ತು ಸೇವೆ ಎಂಬ ಮೂರು ಧ್ಯೇಯಗಳನ್ನಿಟ್ಟುಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ. ಈ ಸಮಿತಿಯು ಹಲವಾರು ವರ್ಷಗಳಿಂದ ಉಚಿತವಾಗಿ ಯೋಗ ಶಿಕ್ಷಣವನ್ನು ನೀಡುತ್ತಿದೆ. ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಏನೆಲ್ಲಾ ಲಾಭಗಳು ಮನುಷ್ಯನಿಗೆ ದೊರಕುತ್ತಿದೆ ಎಂಬುದನ್ನು ತಿಳಿಸಿದರು.

ವಕೀಲ ಎ.ಎಸ್. ಸಿದ್ದರಾಜು ಮಾತನಾಡಿ, ಬಸವಣ್ಣ ಅವರ ವಚನವನ್ನು ಉಲ್ಲೇಖಿಸುವ ಮೂಲಕ ಕಾನೂನಿನ ಅರಿವು ಮೂಡಿಸಿ, ನಿತ್ಯ ಯೋಗಾಭ್ಯಾಸ ಮಾಡಿದರೆ ತಮ್ಮ ದೈನಂದಿನ ಎಲ್ಲಾ ಕೆಲಸ ಕಾರ್ಯಗಳನ್ನು ಲವಲವಿಕೆಯಿಂದ ಇರಬಹುದು ಎಂದು ತಿಳಿಸಿದರು. ಸಮಿತಿಯ ಗೌರವ ಅಧ್ಯಕ್ಷ ಶ್ರೀನಿವಾಸಣ್ಣ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆಗೆ ಯೋಗ ಅತ್ಯಂತ ಪರಿಣಾಮಕಾರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿ ಉಪಾಧ್ಯಕ್ಷ ಎನ್. ದೊರೆಸ್ವಾಮಿ, ಗೌರವಾಧ್ಯಕ್ಷ ಶ್ರೀನಿವಾಸಣ್ಣ, ಗೌರವ ಕಾನೂನು ಸಲಹೆಗಾರ ಎ.ಎಸ್. ಸಿದ್ದರಾಜಣ್ಣ, ಪ್ರಧಾನ ಸಂಚಾಲಕ ಶ್ರೀ ಯೋಗಪ್ರಕಾಶ್, ಖಜಾಂಚಿ ಶ್ರೀ ಸಂತೋಷಕುಮಾರ್, ಜೆಎಸ್‌ಎಸ್ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್, ಪೊಲೀಸ್ ಇಲಾಖೆಯ ಸ್ವಾಮಿ, ಸಂಚಾಲಕ ಶ್ರೀನಿವಾಸಮೂರ್ತಿ, ಯೋಗ ಶಿಕ್ಷಕರಾದ ದೊರೆಸ್ವಾಮಿ, ಶ್ರೀನಿವಾಸಮೂರ್ತಿ, ಸುನಿತಾ, ರಾಜಶೇಖರಮೂರ್ತಿ, ಭಜನೆ ಮಹೇಶ್, ರಜನೀಕಾಂತ್, ಸ್ವಾಮಿ, ರವಿ, ನಾಗಮಣಿ, ಪ್ರಸಾದ್, ಬಸವರಾಜು, ವೆಂಡರ್ ರವಿ, ಕುಮಾರಣ್ಣ, ರಮೇಶ್, ರಮ್ಯ, ನಾಗರಾಜು, ಯೋಗೀಶ್ ಮತ್ತು ವಿದ್ಯಾರ್ಥಿಗಳು ಹಾಗೂ ಸಹ ಶಿಕ್ಷಕರ ವೃಂದದವರು ಭಾಗವಹಿಸಿದ್ದರು.