ಸಾರಾಂಶ
ಮಡಿಕೇರಿಯಲ್ಲಿ ಈ ವರ್ಷ ನಾಡಹಬ್ಬವನ್ನು ವಿಜೃಂಭಣೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಶಾಸಕ ಡಾ. ಮಂತರ್‌ಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯಲ್ಲಿ ಈ ವರ್ಷ ನಾಡಹಬ್ಬವನ್ನು ವಿಜೃಂಭಣೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದ್ದಾರೆ.ಮಡಿಕೇರಿಯಲ್ಲಿ ನಾಡಹಬ್ಬ ದಸರಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಮಡಿಕೇರಿ ದಸರಾಕ್ಕೆ ಉತ್ತಮ ಅನುದಾನ ದೊರಕುವ ನಿರೀಕ್ಷೆಯಿದೆ. ಮಕ್ಕಳ ದಸರಾ, ಮಹಿಳಾ ದಸರಾ, ಜಾನಪದ ಮತ್ತು ಯುವ ದಸರಾದೊಂದಿಗೆ ಈ ಬಾರಿ ಕಾಫಿ ಜಿಲ್ಲೆಯನ್ನು ಪ್ರತಿಬಿಂಬಿಸುವ ಕಾಫಿ ದಸರಾವನ್ನೂ ಕೂಡ ಆಯೋಜಿಸಲಾಗಿದೆ. ಕಾಫಿ ಕೃಷಿಕರಿಂದ ಇದಕ್ಕೆ ಉತ್ತಮ ಸ್ಪಂದನೆ ಕೂಡ ದೊರಕಿದೆ ಎಂದರು.
ದಶಮಂಟಪಗಳ ಶೋಭಾಯಾತ್ರೆಯೊಂದಿಗೆ 9 ದಿನಗಳ ಕಾಲ ನಗರದಲ್ಲಿ ವಿಜೃಂಭಣೆಯ ದಸರಾ ಉತ್ಸವ ಆಯೋಜನೆಗಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಡಾ. ಮಂತರ್ ಗೌಡ ಹೇಳಿದರು.ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ.ವೈ., ಖಜಾಂಚಿ ಅರುಣ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ., ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್, ನಗರಸಭೆಯ ಪೌರಾಯುಕ್ತ ರಮೇಶ್, ನಗರಸಭಾ ಸದಸ್ಯರಾದ ಅನಿತಾ ಪೂವಯ್ಯ, ಸವಿತಾ ರಾಕೇಶ್, ಮಹೇಶ್ ಜೈನಿ, ಶ್ವೇತಾ ಪ್ರಶಾಂತ್, ಸಬಿತಾ, ಅಮೀನ್ ಮೊಯಿಸಿನ್, ಶ್ವೇತಾ, ಮನ್ಸೂರ್, ದಸರಾ ಸಮಿತಿ ಪ್ರಮುಖರಾದ ಬಿ.ಎಂ. ರಾಜೇಶ್, ಎ.ಸಿ. ದೇವಯ್ಯ, ಪಿ.ಡಿ. ಪೊನ್ನಪ್ಪ, ವೀಣಾಕ್ಷಿ, ಮೀನಾಜ್, ತೆನ್ನೀರ ಮೈನಾ ಮತ್ತಿತರರಿದ್ದರು.
ಶ್ರೀಕೃಷ್ಣ ಉಪಾಧ್ಯಾಯ ಗಣಪತಿ ಮತ್ತು ದುರ್ಗಾ ಪೂಜೆಯ ಕೈಂಕರ್ಯ ನೆರವೇರಿಸಿದರು.