ನವೋದಯ ವಿದ್ಯಾ ಸಂಘದ ಸದಸ್ಯತ್ವ ನವೀಕರಣದ ಸಲುವಾಗಿ ಕಳೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಒಂದು ಸಾವಿರ ರುಪಾಯಿ ಹೆಚ್ಚುವರಿ ಹಣವನ್ನು ಸಂದಾಯ ಮಾಡಬೇಕು ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ನೀಡಿ ನವೀಕರಿಸಬೇಕು ಒಟ್ಟು ೨,೫೮೩ ಜನ ಸದಸ್ಯರನ್ನು ಒಳಗೊಂಡಂತೆ ನವೋದಯ ವಿದ್ಯಾ ಸಂಸ್ಥೆಯು ಸದಸ್ಯರನ್ನು ಹೊಂದಿದೆ ಎಂದು ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣನವೋದಯ ವಿದ್ಯಾಸಂಘದ ಸದಸ್ಯತ್ವ ನವೀಕರಣ ಶುಲ್ಕವನ್ನು ೧,೦೦೦ ರುಪಾಯಿಗಳಿಗೆ ಹೆಚ್ಚಳ ಮಾಡಿರುವ ಹಿನ್ನೆಲೆ ಸರ್ವ ಸದಸ್ಯರು ಈ ಹಣವನ್ನು ನಿಗದಿತ ದಿನಾಂಕದ ಒಳಗೆ ಪಾವತಿಸುವಂತೆ ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.ಪಟ್ಟಣದ ಕಾಳಿಕಾಂಬೆ ದೇವಸ್ಥಾನದ ರಸ್ತೆಯಲ್ಲಿರುವ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೋದಯ ವಿದ್ಯಾ ಸಂಘದ ಸದಸ್ಯತ್ವ ನವೀಕರಣದ ಸಲುವಾಗಿ ಕಳೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಒಂದು ಸಾವಿರ ರುಪಾಯಿ ಹೆಚ್ಚುವರಿ ಹಣವನ್ನು ಸಂದಾಯ ಮಾಡಬೇಕು ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ನೀಡಿ ನವೀಕರಿಸಬೇಕು ಒಟ್ಟು ೨,೫೮೩ ಜನ ಸದಸ್ಯರನ್ನು ಒಳಗೊಂಡಂತೆ ನವೋದಯ ವಿದ್ಯಾ ಸಂಸ್ಥೆಯು ಸದಸ್ಯರನ್ನು ಹೊಂದಿದೆ ಎಂದರು.ತಾಲೂಕಿನಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ಸಲುವಾಗಿ ಈಗಾಗಲೇ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ವಿದ್ಯಾಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮತ್ತು ಶಿಕ್ಷಕ ವೃಂದದವರು ಬಹಳಷ್ಟು ಶ್ರಮವಹಿಸುತ್ತಿದ್ದಾರೆ ಈ ಶ್ರಮಕ್ಕೆ ಪೋಷಕರ ಸಹಕಾರವು ಪ್ರಮುಖವಾಗಿದೆ ಹಾಗೂ ಪೂರ್ವ ಪ್ರಾಥಮಿಕ ಶಾಲೆಯನ್ನು ೨೦೨೬-೨೭ನೇ ಶೈಕ್ಷಣಿಕ ಸಾಲಿನಲ್ಲಿ ತೆರೆಯಲು ಮುಂದಾಗಿದ್ದೇವೆ ಆದ್ದರಿಂದ ಸಾರ್ವಜನಿಕರು ತಮ್ಮ ಮಕ್ಕಳನ್ನು ಈ ವಿದ್ಯಾಸಂಸ್ಥೆಗೆ ಸೇರಿಸುವ ಮೂಲಕ ಈ ವಿದ್ಯಾಸಂಸ್ಥೆಯನ್ನು ಇನ್ನು ಹೆಚ್ಚಿನ ಬಲವಧನೆಗೆ ಪ್ರೋತ್ಸಾಹಿಸಬೇಕು ಎಂದರು.ಇದೇ ಸಂದರ್ಭದಲ್ಲಿ. ನವೋದಯ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶರತ್ ಕೆಂಬಾಳು, ಗೌರವಾಧ್ಯಕ್ಷ ಶೇಷಶಯನ, ಸಹಕಾರ್ಯದರ್ಶಿ ಸಂತೋಷ್ ಮರುವನಹಳ್ಳಿ, ಕಾರ್ಯಕಾರಿ ಮಂಡಳಿಯ ಸದಸ್ಯರಾದ ಆನಂದ್ ಕಾಳೇನಹಳ್ಳಿ, ಗಿರೀಶ್ ಗನ್ನಿ, ಆದರ್ಶ್ ಹಾಜರಿದ್ದರು.