ಬೆಟ್ಟದ ಭೈರವೇಶ್ವರ ಸ್ವಾಮಿಗೆ ಶಾಸಕ ಶ್ರೀನಿವಾಸ್ ವಿಶೇಷ ಪೂಜೆ

| Published : May 28 2024, 01:02 AM IST

ಬೆಟ್ಟದ ಭೈರವೇಶ್ವರ ಸ್ವಾಮಿಗೆ ಶಾಸಕ ಶ್ರೀನಿವಾಸ್ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಟ್ಟದ ಭೈರವ ಸ್ವಾಮಿ, ಸೋಮನಾಥೇಶ್ವರ, ಗಣೇಶನಿಗೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಶಾಸಕ ಎನ್.ಶ್ರೀನಿವಾಸ್, ಶಾಸಕರ ಪತ್ನಿ ಪ್ರಿಯಾ ಹರ್ಷಿತಾ, ತಾಯಿ ವೆಂಕಟಲಕ್ಷ್ಮಮ್ಮ ಸೇರಿ ಕುಟುಂಬ ಸದಸ್ಯರಾದ ಚೇತನ್, ಅನೇಕರು ಪೂಜೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಪುರಾಣ ಪ್ರಸಿದ್ಧ ಶಕ್ತಿ ದೇವರ ಆಶೀರ್ವಾದದಿಂದ ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು, ಕುಟುಂಬ ಸಮೇತ ಬಂದು ದೇವರಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿಟ್ಟಸಂದ್ರದ ಪುರಾಣ ಪ್ರಸಿದ್ಧ ಬೆಟ್ಟದ ಭೈರವೇಶ್ವರ ಸ್ವಾಮಿಗೆ ತಾಯಿ, ಪತ್ನಿ, ಮಗನೊಂದಿಗೆ ಆಗಮಿಸಿದ ಶಾಸಕ ಎನ್.ಶ್ರೀನಿವಾಸ್ ರವರು ಪೂಜೆ ಸಲ್ಲಿಸಿ ಮಾತನಾಡಿದರು.

ನೆಲಮಂಗಲ ಪವಿತ್ರ ಪುಣ್ಯಭೂಮಿಯಾಗಿದ್ದು,ಇಲ್ಲಿ ಪುರಾಣ ಪ್ರಸಿದ್ಧ ದೇವಸ್ಥಾನ ಹಾಗೂ ಮಠಗಳಿವೆ. ಚುನಾವಣೆ ಪ್ರಚಾರದ ವೇಳೆ ಅನೇಕ ಗ್ರಾಮಗಳಲ್ಲಿ ಜನರು ನಿಮಗೆ ಒಳ್ಳೆಯದಾಗಲಿ ಎಂದು ನನಗೆ ಆಶೀರ್ವಾದ ಮಾಡಿ ಶಾಸಕನನ್ನಾಗಿಸಿದರು. ಆದ್ದರಿಂದ ಕ್ಷೇತ್ರದ ಪ್ರಮುಖ ಪುರಾಣ ಪ್ರಸಿದ್ಧ ದೇವರಿಗೆ ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿ, ಮತ್ತಷ್ಟು ಶಕ್ತಿ ನೀಡಲು ಪ್ರಾರ್ಥಿಸಿದ್ದೇನೆ ಎಂದರು.

ವಿಶೇಷ ಪೂಜೆ: ಬೆಟ್ಟದ ಭೈರವ ಸ್ವಾಮಿ, ಸೋಮನಾಥೇಶ್ವರ, ಗಣೇಶನಿಗೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಶಾಸಕ ಎನ್.ಶ್ರೀನಿವಾಸ್, ಶಾಸಕರ ಪತ್ನಿ ಪ್ರಿಯಾ ಹರ್ಷಿತಾ, ತಾಯಿ ವೆಂಕಟಲಕ್ಷ್ಮಮ್ಮ ಸೇರಿ ಕುಟುಂಬ ಸದಸ್ಯರಾದ ಚೇತನ್, ಅನೇಕರು ಪೂಜೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು.

2 ಕೋಟಿ ಕಾಮಗಾರಿ:

ಬಿಟ್ಟಸಂದ್ರ ಗ್ರಾಮದ ಮುಂಭಾಗದಿಂದ ಬೆಟ್ಟದ ಭೈರವೇಶ್ವರ ಸ್ವಾಮಿಯ ದೇವಾಲಯದವರೆಗೂ ಇರುವ ರಸ್ತೆಯ ಅಭಿವೃದ್ಧಿಗೆ ಶಾಸಕರು 2 ಕೋಟಿ ರು. ಅನುದಾನದಲ್ಲಿ ಕಾಂಕ್ರೀಟ್ ಹಾಗೂ ಡಾಂಬರೀಕರಣ ಮಾಡುವ ಭರವಸೆ ನೀಡಿದ್ದರು, ಅದರಂತೆ ಶೀಘ್ರದಲ್ಲಿ ರಸ್ತೆ ಕಾಮಗಾರಿ ಕೆಲಸ ಮಾಡುವುದಾಗಿ ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಎನ್ ಡಿಎ ಅಧ್ಯಕ್ಷ ನಾರಾಯಣಗೌಡ, ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್, ನೆಲಮಂಗಲ ನಗರಸಭೆ ಅಧ್ಯಕ್ಷೆ ಲತಾ ಹೇಮಂತ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್, ಬಿಟ್ಟಸಂದ್ರ ಗ್ರಾಪಂ ಅಧ್ಯಕ್ಷ ಗಂಗರಂಗಯ್ಯ, ಮುಖಂಡರಾದ ಎಂ.ಕೆ.ನಾಗರಾಜು, ಟಿ.ನಾಗರಾಜು, ತಟ್ಟೆಕೆರೆಬಾಬು, ಕಾಂತರಾಜು, ರಂಗಸ್ವಾಮಿ, ಜಗದೀಶ್, ನಾರಾಯಣ್, ಬಿ.ಟಿ ರಾಮಚಂದ್ರ, ಮಿಲ್ಟ್ರೀಮೂರ್ತಿ, ಕೆ.ಕೃಷ್ಣಪ್ಪ, ಮುನಿಯಪ್ಪ, ಸಿ.ಎಂ.ಗೌಡ, ನಟರಾಜು, ಬೆಟ್ಟಸ್ವಾಮಿ, ಶಂಕರಪ್ಪ ಮತ್ತಿತರರಿದ್ದರು.