ಲೋಕಾರ್ಪಣೆಯಾಗಿರುವುದು ಮೋದಿ ಕೊಡುಗೆ: ಸಂಸದ ರಮೇಶ

| Published : Jan 24 2024, 02:02 AM IST

ಸಾರಾಂಶ

ಇಂದು ರಾಮಮಂದಿರ ಲೋಕಾರ್ಪಣೆಯಾಗಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೊಡುಗೆಯಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಇಂದು ರಾಮಮಂದಿರ ಲೋಕಾರ್ಪಣೆಯಾಗಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೊಡುಗೆಯಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದಲ್ಲಿ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣದ 500 ವರ್ಷಗಳ ಕನಸು ನನಸಾಗಿದೆ. ಇದು ನಮ್ಮೆಲ್ಲರ ಯೋಗವಾಗಿದೆ ಎಂದರು.

ರಾಮ ಮಂದಿರ ವಿಚಾರದಲ್ಲಿ ಕೆಲವರು ಹುಡುಗಾಟಿಕೆ ಕೆಲಸ ಮಾಡ್ತಿದ್ದಾರೆ. ಮೋದಿ ತಾವಾಗಿಯೇ ಅಲ್ಲಿ ಹೋಗಿಲ. ಅಲ್ಲಿನ ಟ್ರಸ್ಟ್‌ನವರು ಬಹಳ ಒತ್ತಾಯ ಮಾಡಿದ್ದಕ್ಕೆ ಮೋದಿ ಹೋಗಿದ್ದಾರೆ ಎಂದರು.

ಯೋಗಿ ಆದಿತ್ಯನಾಥ, ನರೇಂದ್ರ ಮೋದಿ ಇಬ್ಬರು ಯೋಗಿಗಳು. ರಾಮ ಮಂದಿರ ಅಲ್ಲ, ದೇಶದ ಮಂದಿರ. ಯಾರು ಕುಚೇಷ್ಟೆ ಕೆಲಸ ಮಾಡಬಾರದು. ರಾಮ ಅಂತವರಿಗೆ ಒಳ್ಳೆ ಬುದ್ಧಿ ಕೊಡಲಿ ಎಂದು ತಿಳಿಸಿದರು.

ಅಡ್ವಾಣಿ ಗೈರು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಿಗಜಿಣಗಿ ಅವರು, ಮತ್ತೊಬ್ಬ ಅಡ್ವಾಣಿ ಆಗೋಕೆ ಸಾಧ್ಯವಿಲ್ಲ. ಅವರು ರಾಮ ಮಂದಿರಕ್ಕಾಗಿ ಹೋರಾಟ ಮಾಡಿದ್ದಾರೆ. ಮೋದಿಯನ್ನು ಅಡ್ವಾಣಿ ಹೊಗಳಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ರಜೆ ನೀಡದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರು ಬುದ್ಧಿಗೇಡಿ ಜನರಾಗಿದ್ದಾರೆ. ರಜೆ ಕೊಡದವರು ಬುದ್ದಿಗೇಡಿಗಳು ಎಂದರು.