ಕನ್ನಡಪ್ರಭ ವಾರ್ತೆ ಬೈಲಹೊಂಗಲ ಮಠಗಳು ನಿರಂತರವಾಗಿ ಸಮಾಜದ ಅಭ್ಯುದಯಕ್ಕಾಗಿ ಪರಿಶ್ರಮಿಸುತ್ತಿದ್ದು ಭಕ್ತರ ಸಹಕಾರವಿದ್ದರೆ ಮಾತ್ರ ಪ್ರತಿಯೊಂದು ವ್ಯವಸ್ಥೆ ಸಾಧನೆಯಾಗಲಿದೆ ಎಂದು ಕಬ್ಬೂರಿನ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಮಠಗಳು ನಿರಂತರವಾಗಿ ಸಮಾಜದ ಅಭ್ಯುದಯಕ್ಕಾಗಿ ಪರಿಶ್ರಮಿಸುತ್ತಿದ್ದು ಭಕ್ತರ ಸಹಕಾರವಿದ್ದರೆ ಮಾತ್ರ ಪ್ರತಿಯೊಂದು ವ್ಯವಸ್ಥೆ ಸಾಧನೆಯಾಗಲಿದೆ ಎಂದು ಕಬ್ಬೂರಿನ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ರಾಯಣ್ಣನ ಸಂಗೊಳ್ಳಿಯ ಹಿರೇಮಠದ ಗುರು ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ, ಲಿಂಗಕ್ಯೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳ 21ನೇ ಪುಣ್ಯ ಸ್ಮರಣೋತ್ಸವ, ಜನ ಜಾಗೃತಿ ಧರ್ಮಸಭೆಯಲ್ಲಿ ಮಾತನಾಡಿದರು. ಮಠ, ಮಾನ್ಯಗಳು ಸಂಸ್ಕಾರ, ಸಂಸ್ಕೃತಿ ಕಲಿಸುವ ಅಧ್ಯಾತ್ಮದ ಕೇಂದ್ರಗಳಾಗಿವೆ. ಯುವಕರು ದುಶ್ಚಟಗಳ ದಾಸರಾಗದೇ ಸಭ್ಯವಂತರಾಗಿ ಬದುಕಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಹೂಲಿಯ ಸಾಂಬಯ್ಯನವರ ಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೂರರ ಆಳಿದ ಸಂಗೊಳ್ಳಿ ಗ್ರಾಮದ ನೆಲದಲ್ಲಿ ಅನೇಕ ಮಠಗಳಲ್ಲಿ ಹಿರೇಮಠವು ಸತ್ಕಾರ್ಯಗಳಿಂದ ಹೆಸರಾಗಿದೆ ಎಂದರು.

ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಪೀಠಾಧೀಶ ಗುರುಲಿಂಗ ಶಿವಾಚಾರ್ಯ ಶ್ರೀಗಳು, ರಾಯನಾಳದ ಅಭಿನವ ರೇವಣಸಿದ್ದೇಶ್ವರ ಶ್ರೀಗಳು, ಏಣಗಿಯ ಬಂಗಾರಜ್ಜನ ಮಠದ ವೀರುಪಾಕ್ಷಯ್ಯ ಸ್ವಾಮೀಜಿ, ಬೆಳಗಾವಿಯ ನಿಶ್ಚಲ ಸ್ವರೂಪ ಸ್ವಾಮೀಜಿ, ಕಾದರವಳ್ಳಿ ಚರಂತಿಮಠದ ಜಗದೀಶ ಅಜ್ಜ, ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಕೊಡ್ಲಿ, ಗುತ್ತಿಗೆದಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಹಿರೇಮಠ, ಡಾ.ಬಸವರಾಜ ಹಿರೇಮಠ, ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಹಾಂತೇಶ ಮತ್ತಿಕೊಪ್ಪ, ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಗುರು ಮೆಟಗುಡ್ಡ, ಬಿಜೆಪಿ ಮಂಡಳ ಅಧ್ಯಕ್ಷ ಸುಭಾಶ ತುರಮರಿ, ಇಂಜನೀಯರ್‌ ಸುಮಂತ ಸೇಶನೂರ, ನಿಂಗಪ್ಪ ಮಂಡಿಹಾಳ, ಸಿದ್ದಲಿಂಗಯ್ಯ ವಕ್ಕುಂದಮಠ, ಮಲ್ಲಿಕಾರ್ಜುನ ಕುಡೊಳ್ಳಿ ವೇದಿಕೆ ಮೇಲಿದ್ದರು.ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಕೊಡ್ಲಿ ಸ್ವಾಗತಿಸಿದರು. ಉಪನ್ಯಾಸಕ ಚನ್ನಪ್ಪ ಹಕ್ಕಿ ನಿರೂಪಿಸಿದರು. ಮಹೇಶ ಹಿರೇಮಠ ವಂದಿಸಿದರು.