ತಾಯಿ ಅಕಾಲಿಕ ಮರಣ: ನೊಂದ ಪುತ್ರ ಆತ್ಮಹತ್ಯೆ

| Published : Oct 27 2024, 02:21 AM IST

ಸಾರಾಂಶ

ತಾಯಿಯ ಅಕಾಲಿಕ ಮರಣದಿಂದ ಮನನೊಂದ ಯುವಕ ನೇಣಿಗೆ ಶರಣಾದ ಘಟನೆ ನಡೆದಿದೆ. ವಿರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ತಾಯಿಯ ಅಕಾಲಿಕ ಮರಣದಿಂದ ಮನನೊಂದ ಯುವಕ ನೇಣಿಗೆ ಶರಣಾದ ಘಟನೆ ನಗರದ ಮೈಕ್ರೋ ಸ್ಟೇಷನ್ ಚಿಕ್ಕಪೇಟೆಯಲ್ಲಿ ನಡೆದಿದೆ. ವಿರಾಜಪೇಟೆ ನಗರದ ಚಿಕ್ಕಪೇಟೆ ಮೈಕ್ರೋ ಸ್ಟೇಷನ್‌ ನಿವಾಸಿ ದಿ.ಮೋಹನ್ ಕುಮಾರ್ ಮತ್ತು ಪಟ್ಟು ದಂಪತಿ ಪುತ್ರ ಕ್ಯಾಟರಿಂಗ್ ಕೆಲಸ ಮಾಡುತಿದ್ದ ಎಸ್.ಎಂ. ಮಧುಸೂದನ್ (೨೪) ಮೃತರು.

ಚಿಕ್ಕಪೇಟೆ ಮೈಕ್ರೋ ಸ್ಟೇಷನ್ ನಿವಾಸಿಯಾಗಿದ್ದ ದಿವಂಗತ ಮೋಹನ್ ಕುಮಾರ್ ಅವರಿಗೆ ಇಬ್ಬರು ಪುತ್ರಿಯರು, ನಾಲ್ವರು ಪುತ್ರರು. ಮಧುಸೂದನ್‌ ಐದನೆಯವನು. ಕೆಲವು ತಿಂಗಳ ಹಿಂದೆ ತಾಯಿ ಪಟ್ಟು ವಯೋಸಹಜ ಕಾಯಿಲೆಗೆ ತುತ್ತಾಗಿ ಮರಣಹೊಂದಿದ್ದರು. ತಾಯಿಯ ಅಕಾಲಿಕ ಮರಣನಿಂದ ಮಧುಸೂದನ್‌ ಘಾಸಿಗೊಂಡಿದ್ದು, ಮಾನಸಿಕವಾಗಿಯೂ ಕುಗ್ಗಿದ್ದರು.

ಶುಕ್ರವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಕೋಣೆಯ ಮೇಲ್ಚಾವಣಿಗೆ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಅಣ್ಣ ಮಂಜುನಾಥ್ ಅವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.