ಸಾರಾಂಶ
ಉಪಾಧ್ಯಕ್ಷ ಚುನಾವಣೆ । ಮುನಿಸು ಮರೆತರೆ ಬಿಜೆಪಿಯಿಂದ ರಾಣಿ ಲಕ್ಷ್ಮೀದೇವಿಗೆ ಛಾನ್ಸ್ । ಉಪಾಧ್ಯಕ್ಷ ಸ್ಥಾನ ಬೇಡ ಎಂದ ಎಸ್.ಕುಮಾರ್, ರಂಗಸ್ವಾಮಿ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಇಲ್ಲಿನ ಪುರಸಭೆ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಗೊಂಡಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಪುರುಷ ಸದಸ್ಯರು ಸ್ಪರ್ಧಿಸುವ ಮನಸ್ಸು ಮಾಡಿಲ್ಲ. ಇದರಿಂದ ಮಹಿಳಾ ಸದಸ್ಯರಿಗೆ ಉಪಾಧ್ಯಕ್ಷ ಸ್ಥಾನ ಸಿಗುವ ಅವಕಾಶ ಹೆಚ್ಚಾಗಿದೆ.
ಮಹಿಳಾ ಸದಸ್ಯರಿಗೆ ಛಾನ್ಸ್!:ಪುರಸಭೆಯ ೨೩ ಸದಸ್ಯರಲ್ಲಿ ಬಿಜೆಪಿ ೧೩ ಸದಸ್ಯರು ಗೆದ್ದಿದ್ದಾರೆ. ಬಿಜೆಪಿ ಸದಸ್ಯರಾದ ರಮೇಶ್, ರಾಣಿ ಲಕ್ಷ್ಮೀ ದೇವಿ ಬಿಜೆಪಿಯಿಂದ ದೂರ ಸರಿದಿದ್ದಾರೆ. ಇದರಿಂದ ಬಿಜೆಪಿಗೆ ಭಾರಿ ಹೊಡೆತವಾಗಿದೆ.
ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ಬಂದಿದೆ. ಕಳೆದ ಅವಧಿಯಲ್ಲಿ ಪುರಸಭೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿ ಬಿಜೆಪಿ ಸದಸ್ಯೆ ದೀಪಿಕಾ ಅಶ್ವಿನ್ ಉಪಾಧ್ಯಕ್ಷರಾಗಿದ್ದರು. ಆದರೆ ಈ ಬಾರಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೂ, ಬಿಜೆಪಿ ಸದಸ್ಯರಾದ ನಾಗೇಶ್, ಕಿರಣ್ ಗೌಡ ಪುರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇನ್ನುಳಿದ ಬಿಜೆಪಿ ಸದಸ್ಯರಾದ ಎಸ್.ಕುಮಾರ್, ರಂಗಸ್ವಾಮಿ (ಪಟ್ಟಾಭಿ) ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ನಿರಾಕರಣೆ ವ್ಯಕ್ತಪಡಿಸಿದ್ದಾರೆ.ಮೂವರಲ್ಲಿ ಪೈಪೋಟಿ:
ಪುರಸಭೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೂ, ಪುರುಷ ಸದಸ್ಯರಾದ ಎಸ್. ಕುಮಾರ್, ರಂಗಸ್ವಾಮಿ (ಪಟ್ಟಾಭಿ) ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.ಪುರಸಭೆ ಬಿಜೆಪಿ ಸದಸ್ಯರಾದ ವೀಣಾ ಮಂಜುನಾಥ್ ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿಯಾಗಿದ್ದೇನೆ. ಬಿಜೆಪಿ ವರಿಷ್ಠರು ಅವಕಾಶ ಕೊಡಲಿ ಎಂಬ ಬೇಡಿಕೆ ಇಟ್ಟಿದ್ದಾರೆ.
ಬಿಜೆಪಿ ಸದಸ್ಯೆ ಹೀನಾ ಕೌಶರ್ ಕೂಡ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಪುರುಷ ಸದಸ್ಯರು ಉಪಾಧ್ಯಕ್ಷ ಸ್ಥಾನ ಬೇಡ ಎಂದಿರುವ ಕಾರಣ ನನಗೂಂದು ಅವಕಾಶ ಕೊಡಿ ಎಂದು ಕೋರಿದ್ದೇನೆ ಎನ್ನುತ್ತಾರೆ ಹೀನಾ ಕೌಶರ್.ಕೇಳೋ ಮಾತೇ ಇಲ್ಲ!
ಬಿಜೆಪಿ ಮತ್ತೊಬ್ಬ ಸದಸ್ಯೆ ಪುಷ್ಪ ವೆಂಕಟೇಶ್ ಉಪಾಧ್ಯಕ್ಷ ಸ್ಥಾನ ಕೇಳುವ ಮಾತೇ ಇಲ್ಲ. ಸದಸ್ಯರಾಗಿಯೇ ಇರುತ್ತೇನೆ ಎಂದು ಪುಷ್ಪ ವೆಂಕಟೇಶ್ ಹೇಳಿದ್ದಾರೆ. ಬಾಕ್ಸ್ರಾಣಿ ಲಕ್ಷ್ಮೀ ದೇವಿಗೂ ಛಾನ್ಸ್!
ಗುಂಡ್ಲುಪೇಟೆ: ಪುರಸಭೆ ಸದಸ್ಯರಾದ ರಾಣಿ ಲಕ್ಷ್ಮೀ ದೇವಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೂ ಬಿಜೆಪಿಯೊಂದಗಿನ ಮುನಿಸು ಮರೆತರೆ ಪುರಸಭೆ ಬಿಜೆಪಿ ಸದಸ್ಯೆ ರಾಣಿ ಲಕ್ಷ್ಮೀ ದೇವಿಗೆ ಉಪಾಧ್ಯಕ್ಷ ಸ್ಥಾನ ಸಿಗುವ ಚಾನ್ಸ್ ಇದೆ!ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯರಾದ ವೀಣಾ ಮಂಜುನಾಥ್, ಹೀನಾ ಕೌಶರ್ ಬೇಡಿಕೆ ಇಟ್ಟಿದ್ದಾರೆ. ಬಿಜೆಪಿಯಿಂದ ಬೇಸರಗೊಂಡ ಸದಸ್ಯೆ ರಾಣಿ ಲಕ್ಷ್ಮೀದೇವಿ ಒಪ್ಪಿದರೆ ಉಪಾಧ್ಯಕ್ಷ ಸ್ಥಾನ ಸಿಗಲಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ. ೨೫ಜಿಪಿಟಿ೨
ಗುಂಡ್ಲುಪೇಟೆ ಪುರಸಭೆ ಕಾರ್ಯಾಲಯ