ಚಾಕುವಿನಿಂದ ಇರಿದು ತಮ್ಮನ ಕೊಲೆ

| Published : Dec 21 2023, 01:15 AM IST

ಸಾರಾಂಶ

ಹುಬ್ಬಳ್ಳಿ ಚಂದ್ರನಾಥನಗರದಲ್ಲಿ ಅಣ್ಣ ತಮ್ಮನನ್ನು ಚಾಕುವಿನಿಂದ ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಪವನ ಕಟವಟೆ (30) ಕೊಲೆಯಾದವರು. ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಲ್ಲಿನ ಚಂದ್ರನಾಥನಗರದಲ್ಲಿ ಅಣ್ಣ ತಮ್ಮನನ್ನು ಚಾಕುವಿನಿಂದ ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಪವನ ಕಟವಟೆ (30) ಕೊಲೆಯಾದವರು. ಪ್ರಕರಣ ಸಂಬಂಧ ಖಾಸಗಿ ಕಂಪನಿ ಉದ್ಯೋಗಿ ರಾಜು ಕಟವಟೆಯನ್ನು (34) ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜು ತನ್ನ ತಾಯಿಯೊಂದಿಗೆ ಇಲ್ಲಿನ ಉದಯನಗರದಲ್ಲಿ ವಾಸವಾಗಿದ್ದಾನೆ. ಆಟೋ ಚಾಲಕನಾಗಿದ್ದ ಪವನ ಕುಟುಂಬದವರೊಂದಿಗೆ ಜಗಳ ಮಾಡಿಕೊಂಡು ನಾಲ್ಕು ತಿಂಗಳ ಹಿಂದೆ, ಚಂದ್ರನಾಥ ನಗರದಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದ. ಹಣದ ವಿಚಾರವಾಗಿ ಪವನ ತಾಯಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಮಂಗಳವಾರವೂ ಜಗಳ ನಡೆದಿದ್ದು, ಬಳಿಕ ಆತ ಮನೆಗೆ ಹೋಗಿ ಮಲಗಿದ್ದ. ರಾತ್ರಿ ಅವರ ಮನೆಗೆ ಹೋಗಿದ್ದ ರಾಜು ಮತ್ತು ಪವನ ನಡುವೆ ಮತ್ತೆ ಜಗಳವಾಗಿದೆ. ಅದು ವಿಕೋಪಕ್ಕೆ ಹೋಗಿ ಆತ ಚಾಕುವಿನಿಂದ ಇರಿದಿದ್ದಾನೆ. ಪವನ ಸ್ಥಳದಲ್ಲೇ ಸಾವನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.