ಸಾರಾಂಶ
ಉತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು. ಈ ಸಂದರ್ಭ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ತುಲಾಭಾರ ಸೇವೆ ನೆರವೇರಿಸಿ ಪುನೀತರಾದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.ಉತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು. ಈ ಸಂದರ್ಭ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ತುಲಾಭಾರ ಸೇವೆ ನೆರವೇರಿಸಿ ಪುನೀತರಾದರು.
ನಂತರ ದೇವಾಲಯದಲ್ಲಿ ಎತ್ತುಪೋರಾಟ, ಮಹಾಪೂಜೆ ಮಹಾಮಂಗಳಾರತಿ ಜರುಗಿತು. ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ದೇವರ ಪ್ರದರ್ಶನ ನೃತ್ಯ ಸೇವೆ ಜರುಗಿತು. ತಂತ್ರಿ ಸಂತೋಷ್ ಹೆಬ್ಬಾರ್, ಅರ್ಚಕ ವಿಜಯಕುಮಾರ್ ಹಾಗೂ ಜಯಚಂದ್ರ (ಪುಂಡ) ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.ನಂತರ ಇಗ್ಗುತ್ತಪ್ಪ ದೇವರ ಆದಿ ಸ್ಥಳವಾದ ಮಲ್ಮ ಬೆಟ್ಟಕ್ಕೆ ಎತ್ತುಪೋರಾಟದೊಂದಿಗೆ ತೆರಳಿ, ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಈ ಸಂದರ್ಭ ಉತ್ಸವದಲ್ಲಿ ತಕ್ಕಮುಖ್ಯಸ್ಥರಾದ ಬದಂ ಜೆಟ್ಟೀರ ನಾಣಯ್ಯ, ನಾಪನೆರವಂಡ ಪೊನ್ನಪ್ಪ, ಬಾಳೆಯಡ ರಾಜ ಕುಂಞಪ್ಪ, ಕೈಯಂದಿರ ರಮೇಶ್ ಉತ್ತಯ್ಯ, ದೇವಾಲಯದ ಆಡಳಿತ ಮಡಳಿ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ, ಉಪಾಧ್ಯಕ್ಷ ಮಂಡಿರ ಜಯ ದೇವಯ್ಯ, ಕಾರ್ಯದರ್ಶಿ ಮುಕ್ಕಾಟಿರ ವಿನಯ್, ಖಜಾಂಚಿ ಮನವಟ್ಟಿರ ಪಾಪು ಚಂಗಪ್ಪ, ಆಡಳಿತ ಮಡಳಿ ನಿರ್ದೇಶಕ ಚೇಕ್ ಪೂವಂಡ ಅಪ್ಪಚ್ಚು, ಮಾಲೆಯಂಡ ಅಯ್ಯಪ್ಪ, ಅಪ್ಪುಮಣಿಯಂಡ ಸನ್ನುಸೋಮಣ್ಣ, ಬದಂಜೆಟ್ಟಿರ ದೇವಿ ದೇವಯ್ಯ, ಬಾಳೆಯಡ ಶಿವಕುಮಾರ್, ನಾಪನೆರವಂಡ ದೇವಯ್ಯ, ಅಪ್ಪುಮಣಿಯಂಡ ಪ್ರವೀಣ್ ಉತ್ತಪ್ಪ, ಆಡಳಿತ ಮಂಡಳಿಯ ಮಾಜಿ ಪದಾಧಿಕಾರಿಗಳು, ಸದಸ್ಯರು, ಊರಿನ ಹಿರಿಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗ ಪಾಲ್ಗೊಂಡಿದ್ದರು.