ಕುದೂರು ಗ್ರಾಪಂ ಅಧ್ಯಕ್ಷೆ ಕುಸುಮಾ ವಿರುದ್ಧ ಅವಿಶ್ವಾಸ ಮಂಡನೆಗೆ ಜಯ

| Published : Jan 11 2025, 12:46 AM IST

ಸಾರಾಂಶ

ಕುದೂರು: ಕುದೂರು ಗ್ರಾಪಂ ಅಧ್ಯಕ್ಷೆ ಕುಸುಮಾ ಹೊನ್ನರಾಜು ವಿರುದ್ಧ ಸದಸ್ಯರು ಮಂಡಿಸಿದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಜಯ ಸಿಕ್ಕಿದೆ. ನೂತನ ಅಧ್ಯಕ್ಷರು ಆಯ್ಕೆಯಾಗುವ ತನಕ ಖಾಲಿ ಅಧ್ಯಕ್ಷ ಸ್ಥಾನವನ್ನು ಹಾಲಿ ಉಪಾಧ್ಯಕ್ಷೆ ರಮ್ಯಜ್ಯೋತಿ ಪ್ರಭಾರ ಅಧ್ಯಕ್ಷರನ್ನಾಗಿ ರಾಮನಗರ ಉಪವಿಭಾಗಾಧಿಕಾರಿ ಬಿನೋಯ್ ಘೋಷಿಸಿದರು.

ಗ್ರಾಪಂನಲ್ಲಿ ಒಟ್ಟು 24 ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ 16 ಸದಸ್ಯರು ಕುಸುಮಾ ಹೊನ್ನರಾಜು ವಿರುದ್ದ ಅವಿಶ್ವಾಸ ಮಂಡಿಸಿದರು. ಸದಸ್ಯರೆಲ್ಲರೂ ಒಟ್ಟಾಗಿರಬೇಕೆಂಬ ಮುನ್ನೆಚ್ಚರಿಕೆಯಿಂದ ಎರಡು ದಿನ ಮುಂಚೆಯೇ ಸದಸ್ಯರು ಮಡಿಕೇರಿ ಪ್ರವಾಸ ಕೈಗೊಂಡಿದ್ದರು.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ಅವಿಶ್ವಾಸ ಮಂಡನೆ ಆಗಬೇಕಾಗಿತ್ತು. 12 ಗಂಟೆಯಾದರೂ ಉಪವಿಭಾಗಾಧಿಕಾರಿ ಸಭೆಗೆ ಬರದ ಕಾರಣ ಜೆಡಿಎಸ್ ಸದಸ್ಯ ಬಾಲಕೃಷ್ಣ ಮಾತನಾಡಿ ಸಭೆಗೆ ಅಧಿಕಾರಿಗಳು ಇನ್ನೂ ಬಂದಿಲ್ಲ. ಈಗಾಗಲೇ ಒಂದು ಗಂಟೆಗಿಂತ ಹೆಚ್ಚು ತಡವಾಗಿದೆ. ಆದ್ದರಿಂದ ಸಭೆ ಮುಂದೂಡಿ, ಅವಿಶ್ವಾಸ ನಿರ್ಣಯ ನಿಗದಿಯಾಗಿರುವ ಸಮಯಕ್ಕಿಂತ ಅರ್ಧ ಗಂಟೆಯಷ್ಟು ಮಾತ್ರ ಕಾಯಬೇಕು. ಅದಕ್ಕಿಂತ ಹೆಚ್ಚಿನ ಸಮಯವಾದರೆ ಸಭೆ ರದ್ದು ಮಾಡಿ ಇನ್ನೊಂದು ದಿನಾಂಕವನ್ನು ಸೂಚಿಸಿ ಎಂದು ಒತ್ತಾಯಿಸಿದರು. ಇದಕ್ಕೆ ಅಧಿಕಾರಿಗಳು ಒಪ್ಪದ ಕಾರಣ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯಿತು.

ನೂತನ ಅಧ್ಯಕ್ಷರ ಕುರಿತು ಇನ್ನೂ ನಿರ್ಣಯವಾಗಿಲ್ಲ. ಇಬ್ಬರು ಸದಸ್ಯರು ರೇಸಿನಲ್ಲಿರುವುದರಿಂದ ಮತ್ತು ಹನ್ನೊಂದು ತಿಂಗಳು ಮಾತ್ರ ಅವಕಾಶ ಇರುವುದರಿಂದ ಆರು ತಿಂಗಳಿಗೊಬ್ಬರಂತೆ ಇಬ್ಬರನ್ನು ಆಯ್ಕೆ ಮಾಡಲು ಮಾತುಕತೆ ನಡೆಯುತ್ತಿದೆ. ಈ ಕುರಿತು ಶಾಸಕರ ನಿರ್ಣಯವೇ ಅಂತಿಮವಾಗಿರುತ್ತದೆ ಎಂದು ಸದಸ್ಯರು ತಿಳಿಸಿದ್ದಾರೆ.

10ಕೆಆರ್ ಎಂಎನ್ 2.ಜೆಪಿಜಿ

ಕುದೂರು ಗ್ರಾಪಂ ಅಧ್ಯಕ್ಷರ ಬದಲಾವಣೆಗೆ ಅವಿಶ್ವಾಸ ಮಂಡಿಸಿ ಗೆಲುವಿನ ನಗೆ ಬೀರಿದ ಸದಸ್ಯರು.