ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಪರಿಸರ ಸೂಕ್ಷ್ಮ ವಲಯದಂಚಿನ ಜಮೀನಿನಲ್ಲಿ ಅಕ್ರಮವಾಗಿ ಹಂದಿ ಸಾಕಾಣಿಕೆ ಕೇಂದ್ರ ತೆರವು ಸಂಬಂಧ ಹಂದಿ ಸಾಕಾಣಿಕೆದಾರರಿಗೆ ತಹಸೀಲ್ದಾರ್ ಎಂ.ಎಸ್.ತನ್ಮಯ್ ವಿಚಾರಣೆಗೆ ನೋಟೀಸ್ ಜಾರಿ ಆದೇಶ ಹೊರಡಿಸಿದ್ದಾರೆ.
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಪರಿಸರ ಸೂಕ್ಷ್ಮ ವಲಯದಂಚಿನ ಜಮೀನಿನಲ್ಲಿ ಅಕ್ರಮವಾಗಿ ಹಂದಿ ಸಾಕಾಣಿಕೆ ಕೇಂದ್ರ ತೆರವು ಸಂಬಂಧ ಹಂದಿ ಸಾಕಾಣಿಕೆದಾರರಿಗೆ ತಹಸೀಲ್ದಾರ್ ಎಂ.ಎಸ್.ತನ್ಮಯ್ ವಿಚಾರಣೆಗೆ ನೋಟೀಸ್ ಜಾರಿ ಆದೇಶ ಹೊರಡಿಸಿದ್ದಾರೆ.
ಕಳೆದ ಡಿ.೪ ರ ಕನ್ನಡಪ್ರಭ ಪತ್ರಿಕೆಯಲ್ಲಿ ಓಂಕಾರ ಸೂಕ್ಷ್ಮ ಪರಿಸರ ವಲಯದಲ್ಲಿ ಅಕ್ರಮ ಹಂದಿ ಸಾಕಾಣಿಕೆ ಎಂದು ವರದಿ ಪ್ರಕಟಿಸಿ ತಾಲೂಕು ಆಡಳಿತ ಗಮನ ಸೆಳೆದಿತ್ತು. ತಹಸೀಲ್ದಾರ್ ಎಂ.ಎಸ್.ತನ್ಮಯ್ ರಾಜಸ್ವ ನಿರೀಕ್ಷಕರ ವರದಿ ಆಧರಿಸಿ ಡಿ.೧೬ ರಂದು ತಹಸೀಲ್ದಾರ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಹಂದಿ ಸಾಕಾಣಿಕೆದಾರ ಸಂತೋಷ್, ರಂಗಸ್ವಾಮಿ ನಾಯಕಗೆ ನೋಟೀಸ್ ಜಾರಿ ಮಾಡಿದ್ದಾರೆ.ಬೇಗೂರು ರಾಜಸ್ವ ನಿರೀಕ್ಷಕರ ವರದಿ ಪ್ರಕಾರ ಹಂದಿ ಸಾಕಾಣಿಕೆ ಮಾಡುವ ಸ್ಥಳ ಸೂಕ್ಷ್ಮ ಪರಿಸರ ವಲಯದಂಚಿನಲ್ಲಿದೆ. ಕಾಡು ಪ್ರಾಣಿಗಳು ಸಂಚರಿಸುವ ಸ್ಥಳವಾಗಿದ್ದು,ಆಹಾರಕ್ಕಾಗಿ ಹೊರ ಬರುತ್ತವೆ ಹಾಗಾಗಿ ಹಂದಿ ಸಾಕಾಣಿಕೆ ಕೇಂದ್ರ ತೆರವುಗೊಳಿಸಬೇಕಿರುವ ಕಾರಣ ಓಂಕಾರ ವಲಯ ಅರಣ್ಯಾಧಿಕಾರಿ,ದೂರುದಾರ ರವಿಕುಮಾರ್ ದೂರಿನ ಮೇರೆಗೆ ತಹಸೀಲ್ದಾರ್ ಕ್ರಮ ಕೈಗೊಂಡು ವಿಚಾರಣೆಗೆ ಮುಂದಾಗಿದ್ದಾರೆ.