ಆ್ಯಂಬುಲೆನ್ಸ್‌ನಲ್ಲಿ ಕಾಲೇಜಿಗೆ ತೆರಳಿದ ನರ್ಸಿಂಗ್ ವಿದ್ಯಾರ್ಥಿಗಳು
KannadaprabhaNewsNetwork | Published : Oct 04 2023, 01:00 PM IST
ಆ್ಯಂಬುಲೆನ್ಸ್‌ನಲ್ಲಿ ಕಾಲೇಜಿಗೆ ತೆರಳಿದ ನರ್ಸಿಂಗ್ ವಿದ್ಯಾರ್ಥಿಗಳು
ಸಾರಾಂಶ
ಕರ್ನಾಟಕ ಬಂದ್ ಹಿನ್ನೆಲೆ ರಜೆ ನೀಡದಿದ್ದರಿಂದ ಎರಡು ತಾಸಿಗೂ ಅಧಿಕ ಕಾಲ ಬಸ್‌ಗಾಗಿ ಕಾದು ವಿದ್ಯಾರ್ಥಿಗಳು ಸುಸ್ತಾದರು. ಎರಡು ತಾಸಿನ ಬಳಿಕ ಸಿಮ್ಸ್‌ನಿಂದ ಆ್ಯಂಬುಲೆನ್ಸ್ ಕಳುಹಿಸಿದ್ದರಿಂದ ಆಂಬುಲೆನ್ಸ್‌ನಲ್ಲೇ ರೋಗಿಗಳ ಬದಲು ನರ್ಸಿಂಗ್ ವಿದ್ಯಾರ್ಥಿಗಳ ಪಯಣಿಸಿದರು
ಬಂದ್ ಹಿನ್ನೆಲೆ ಸಾರಿಗೆ ಸ್ಥಗಿತ | ಬಸ್ ಇಲ್ಲದೇ ಪರದಾಟ ಕನ್ನಡಪ್ರಭ ವಾರ್ತೆ ಚಾಮರಾಜನಗರ ಕರ್ನಾಟಕ ಬಂದ್ ಹಿನ್ನೆಲೆ ಚಾಮರಾಜನಗರದಲ್ಲಿ ಬೆಳಿಗ್ಗೆಯಿಂದ ಪ್ರತಿಭಟನೆ ತೀವ್ರ ಸ್ವರೂಪದಲ್ಲಿ ನಡೆಯಿತು. ಪರಿಣಾಮ ಸಾರಿಗೆ ಸಂಸ್ಥೆ ಬಸ್‌ಗಳು ರಸ್ತೆಗಿಳಿಯಲಿಲ್ಲ. ಇದರಿಂದಾಗಿ ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ತೆರಳಲು ಬಸ್‌ಗಳಿಲ್ಲದೇ ವಿದ್ಯಾರ್ಥಿಗಳು ಮತ್ತು ರೋಗಿಗಳು ಪರದಾಡಿದರು. ಬಂದ್ ಇದ್ದರೂ ಕೂಡ ರಜೆ ನೀಡದಿದ್ದರಿಂದ ಎರಡು ತಾಸಿಗೂ ಅಧಿಕ ಕಾಲ ಬಸ್‌ಗಾಗಿ ಕಾದು ವಿದ್ಯಾರ್ಥಿಗಳು ಸುಸ್ತಾದರು. ಎರಡು ತಾಸಿನ ಬಳಿಕ ಸಿಮ್ಸ್‌ನಿಂದ ಆ್ಯಂಬುಲೆನ್ಸ್ ಕಳುಹಿಸಿದ್ದರಿಂದ ಆಂಬುಲೆನ್ಸ್‌ನಲ್ಲೇ ರೋಗಿಗಳ ಬದಲು ನರ್ಸಿಂಗ್ ವಿದ್ಯಾರ್ಥಿಗಳ ಪಯಣಿಸಿದರು. ಆಂಬುಲೆನ್ಸ್‌ನಲ್ಲಿ ಒಬ್ಬರ ಮೇಲೆ ಒಬ್ಬರು ಕುಳಿತು ನರ್ಸಿಂಗ್ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಿದರು. ಆಸ್ಪತ್ರೆಗೆ ತೆರಳಲು ಪರದಾಟ ಬಸ್ ಇಲ್ಲದ ಚಾಮರಾಜನಗರ ಆಸ್ಪತ್ರೆಗೆ ತೆರಳಲು ಮಾದೇಗೌಡ ಎಂಬ ವ್ಯಕ್ತಿಯ ಪರದಾಡಬೇಕಾಯಿತು.ಹನೂರು ತಾಲೂಕಿನ ಗುಂಡಾಪುರ ನಿವಾಸಿ ಮಾದೇಗೌಡ. ಸಿಮ್ಸ್‌ಗೆ ತೆರಳಲು ಬಸ್ ಹತ್ತಿದ್ದರು. ಬಸ್ ನಿಲ್ದಾಣದದಿಂದ ಹೋಗುತ್ತಿದ್ದ ಬಸ್ ಅನ್ನು ಹೋರಾಟಗಾರರು ತಡೆದರು.ಹೋರಾಟಗಾರರಿಗೆ ಆಸ್ಪತ್ರೆಗೆ ಕಳಿಸಿಕೊಡುವಂತೆ ಮಾದೇಗೌಡ ಮನವಿ ಮಾಡಿದರು. ತಾವು ತೆಗೆದುಕೊಂಡು ಹೋಗುತ್ತಿದ್ದ ಮಾತ್ರೆ, ಆಸ್ಪತ್ರೆ ಚೀಟಿ ತೋರಿಸಿದ್ದರಿಂದ ಕನ್ನಡಪರ ಹೋರಾಟಗಾರರೇ ಮಾದೇಗೌಡ ಅವರನ್ನು ಆಟೋದಲ್ಲಿ ಕಳಿಸಿಕೊಟ್ಟರು. ಸಾರಿಗೆ ಸಂಸ್ಥೆ ಬಸ್ ಗಳು ರಸ್ತೆಗಿಳಿದಿಲ್ಲ. ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ತೆರಳಲು ಬಸ್ ಗಳಿಲ್ಲದೇ ಪರದಾಡಿದರು