ಹೊಲದಲ್ಲಿ ವೃದ್ದೆ ಸಂಶಯಾಸ್ಪದ ಸಾವು

| Published : Nov 12 2023, 01:00 AM IST

ಸಾರಾಂಶ

ದೊಡ್ಡಬಳ್ಳಾಪುರ: ರಾಗಿ ಹೊಲವನ್ನು ನೋಡಿಕೊಂಡು ಬರಲು ಹೋದ ವೃದ್ಧೆ ಹೊಲದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗುಂಜೂರು ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ದೊಡ್ಡಬಳ್ಳಾಪುರ: ರಾಗಿ ಹೊಲವನ್ನು ನೋಡಿಕೊಂಡು ಬರಲು ಹೋದ ವೃದ್ಧೆ ಹೊಲದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗುಂಜೂರು ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಮೃತರನ್ನು ಚೌಡಮ್ಮ(70) ಎಂದು ಗುರುತಿಸಲಾಗಿದೆ. ಮೃತ ಚೌಡಮ್ಮ ಬೆಳಗ್ಗೆ ರಾಗಿ ಹೊಲವನ್ನ ನೋಡಿಕೊಂಡು ಬರಲು ಹೋದಾಗ ಘಟನೆ ನಡೆದಿದೆ ಎನ್ನಲಾಗಿದ್ದು, ಹೊಲದಲ್ಲಿ ಬಿದ್ದಿದ್ದ ವೃದ್ಧೆಯನ್ನ ಗ್ರಾಮಸ್ಥರು ನೋಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವದ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಕೊಲೆ ಸಂಶಯ ವ್ಯಕ್ತವಾಗಿದೆ.