ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಅಣಬೆ ಬೆಳೆಸುವ ಪ್ರದೇಶದ ಸುತ್ತಮುತ್ತ ಬೀರುವ ದುರ್ನಾತದಿಂದ ಮಕ್ಕಳು, ವೃದ್ಧರು ಅನಾರೋಗ್ಯ, ಅಸ್ತಮಾದಂತಹ ರೋಗಕ್ಕೆ ತುತ್ತಾಗುತ್ತಿದ್ದು, ತತ್‍ಕ್ಷಣ ಫ್ಯಾಕ್ಟರಿಯನ್ನು ಮುಚ್ಚಲು ಮುಂದಾಗಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ವಾಮಂಜೂರಿನಲ್ಲಿ ಶನಿವಾರ ವೈಟ್ ಗ್ರೋ ಅಣಬೆ ಫ್ಯಾಕ್ಟರಿಯಿಂದ ಜನರಿಗೆ ಆಗುತ್ತಿರುವ ಸಮಸ್ಯೆ ವಿರುದ್ಧ ಹಾಗೂ ಅದನ್ನು ಮುಚ್ಚುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೇಸಿಗೆ ಹೆದರೋಲ್ಲ:ಅಣಬೆ ಫ್ಯಾಕ್ಟರಿಯಿಂದ ಮಗು ಅಸ್ವಸ್ಥವಾಗಿದ್ದು ಈ ಬಗ್ಗೆ ಪ್ರಶ್ನಿಸಿದವರ ಹಲವರ ಮೇಲೆ ಕೇಸು ದಾಖಲಾಗಿದೆ. ಬಲವಂತವಾಗಿ ಹೋರಾಟ ಹತ್ತಿಕ್ಕಲು, ಜನರ ಬಾಯಿ ಮುಚ್ಚಿಸಲು ಆಡಳಿತ ಯಂತ್ರದ ಬಳಕೆಯಾಗುತ್ತಿದೆ. ಇದಕ್ಕೆಲ್ಲಾ ಬೆದರುವ ಪ್ರಶ್ನೆಯಿಲ್ಲ. ಜನರ ಜೀವನದ ಪ್ರಶ್ನೆ ಇದು. ನ್ಯಾಯಕ್ಕಾಗಿ ಹೋರಾಟ ಮಾಡಿದವರ ಮೇಲೆ ಕೇಸು ದಾಖಲಿಸುವುದಾದರೆ ದಾಖಲಿಸಲಿ. ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದು ಡಾ.ಭರತ್ ಶೆಟ್ಟಿ ಹೇಳಿದರು.
ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ, ಸ್ಥಳೀಯ ಹೇಮಲತಾ ರಘು ಸಾಲಿಯಾನ್ ಮಾತನಾಡಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಠಾರಿ, ಉಪಮೇಯರ್ ಸುನಿತಾ, ಸಂದೀಪ್ ಪಚ್ಚನಾಡಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಲೋಹಿತ್ ಅಮೀನ್, ವರುಣ್ ಚೌಟ, ಮಾಜಿ ಮೇಯರ್ ಜಯಾನಂದ ಅಂಚನ್ ಮತ್ತಿತರರಿದ್ದರು. ಉಮೇಶ್ ಕೋಟ್ಯಾನ್ ಸ್ವಾಗತಿಸಿ ನಿರೂಪಿಸಿದರು.
--------------------;Resize=(128,128))
;Resize=(128,128))
;Resize=(128,128))