ಸಾರಾಂಶ
ಹಾಸನಾಂಬ ಕಲಾಕ್ಷೇತ್ರದಲ್ಲಿ ನ.10ರಂದು ಭಾನುವಾರ ಸಂಜೆ 5 ಗಂಟೆಗೆ ಅದ್ಧೂರಿ ಕನ್ನಡ ರಾಜ್ಯೋತ್ಸವ ಮತ್ತು ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜಣ್ಣ ಫಿಟ್ನೆಸ್‌ನ ಆನಂದ್ ತಿಳಿಸಿದರು. ಈ ಸ್ಪರ್ಧೆಗೆ ಬಂದವರಿಗೆಲ್ಲಾ ಒಂದು ಬಹುಮಾನವನ್ನು ವಿಶೇಷವಾಗಿ ಕೊಡುತ್ತಿದ್ದೇವೆ. ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ದೆಯಲ್ಲಿ ಪ್ರಥಮ ಬಹುಮಾನವಾಗಿ ಯುವರತ್ನ ಪ್ರಶಸ್ತಿ ನೀಡಿ ಒಂದು ಕೆ.ಜಿಯ ಬೆಳ್ಳಿ ಗದೆ ಹಾಗೂ ನಗದು ಕೊಡಲಾಗುವುದು ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನ.10ರಂದು ಭಾನುವಾರ ಸಂಜೆ 5 ಗಂಟೆಗೆ ಅದ್ಧೂರಿ ಕನ್ನಡ ರಾಜ್ಯೋತ್ಸವ ಮತ್ತು ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜಣ್ಣ ಫಿಟ್ನೆಸ್‌ನ ಆನಂದ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಗಿರುವುದರಿಂದ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಒಟ್ಟು 200ರಿಂದ 250 ಜನ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧೆಯು ಎತ್ತರದ ಮೇಲೆ ನಡೆಸಲಾಗುತ್ತಿದ್ದು, ಎಚ್.ಪಿ. ಧ್ರುವಕುಮಾರ್ ಈ ಸ್ಪರ್ಧೆಗೆ ಹೆಚ್ಚಿನ ಸಹಕಾರ ಕೊಟ್ಟಿದ್ದಾರೆ. ರಾಯಪುರದ ಆರ್.ಟಿ. ಕೃಷ್ಣೇಗೌಡ, ಕ್ರಷರ್ ಅನಂತಣ್ಣ ಕೂಡ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ ಎಂದರು.
ಈ ಸ್ಪರ್ಧೆಯಲ್ಲಿ ಪಾಲ್ಗೊಂಡವರಲ್ಲಿ ಸೋಲು ಗೆಲುವು ಇರಲಿ, ಬಂದವರಿಗೆಲ್ಲಾ ಒಂದು ಬಹುಮಾನವನ್ನು ವಿಶೇಷವಾಗಿ ಕೊಡುತ್ತಿದ್ದೇವೆ. ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ದೆಯಲ್ಲಿ ಪ್ರಥಮ ಬಹುಮಾನವಾಗಿ ಯುವರತ್ನ ಪ್ರಶಸ್ತಿ ನೀಡಿ ಒಂದು ಕೆ.ಜಿಯ ಬೆಳ್ಳಿ ಗದೆ ಹಾಗೂ ನಗದು ಕೊಡಲಾಗುವುದು. ಎರಡನೇ ಬಹುಮನವಾಗಿ 15 ಸಾವಿರ ನಗದು, ಟ್ರೋಫಿ, ಸರ್ಟಿಫಿಕೇಟ್ ಇತರೆ ಕೊಡಲಾಗುವುದು. ಮೂರನೇ ಬಹುಮಾನವಾಗಿ 10 ಸಾವಿರ ನಗದು, ಟ್ರೋಫಿ, ಸರ್ಟಿಫಿಕೇಟ್ ನೀಡಿ ಗೌರವಿಸಲಾಗುವುದು ಹಾಗೂ ಗ್ರೂಪ್ ವಿನ್ನರ್ ಆಗಿ ಕೂಡ ಹಲವಾರು ಬಹುಮಾನವನ್ನು ಕೊಡುವುದಾಗಿ ಎಂದು ಹೇಳಿದರು.ಬಂದ ಸ್ಪರ್ಧಾಳುಗಳಿಗೆ ಉಳಿದುಕೊಳ್ಳಲು ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧೆ ಜೊತೆಗೆ ಅದ್ಧೂರಿ ಕನ್ನಡ ರಾಜ್ಯೋತ್ಸವವನ್ನು ಕೂಡ ಹಮ್ಮಿಕೊಂಡಿದ್ದು, ಕನ್ನಡಪರ ಹೋರಾಟಗಾರರಿಗೆ ಮತ್ತು ಸಂಘಟನೆಯ ಮುಖಂಡರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವು ಸರಿಯಾಗಿ ಇದೇ ಭಾನುವಾರ ಸಂಜೆ 5 ಗಂಟೆಗೆ ಆರಂಭವಾಗಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಾಧ್ಯಮ ವಕ್ತಾರ ಸ್ವರೂಪ್, ಶಿವಕುಮಾರ್ ಇತರರು ಉಪಸ್ಥಿತರಿದ್ದರು.