ಯೋಗೀನ ಜತೆಯಲ್ಲಿಟ್ಟುಕೊಂಡು ಅಳಿಯನ್ನ ಎಂಪಿ ಮಾಡಿಕೊಂಡರು

| Published : Nov 09 2024, 01:05 AM IST

ಸಾರಾಂಶ

ಚನ್ನಪಟ್ಟಣ: ಯೋಗೇಶ್ವರ್ ಅವರನ್ನು ಜತೆಯಲ್ಲಿಟ್ಟುಕೊಂಡು ಅಳಿಯನ್ನ ಎಂಪಿ ಮಾಡಿಕೊಂಡರು. ಎನ್‌ಡಿಎ ಟಿಕೆಟ್ ಕೊಡುತ್ತಾರೆಂದು ಯೋಗಿ ಕಾಯುತ್ತಲೇ ಇದ್ದರು. ಆದರೆ, ಟಿಕೆಟ್ ಕೊಡಲಿಲ್ಲ. ಈಗ ದೇವೇಗೌಡರು, ಕುಮಾರಸ್ವಾಮಿ, ನಿಖಿಲ್, ಯಡಿಯೂರಪ್ಪ ಎಲ್ಲರೂ ಸೇರಿ ಯೋಗೇಶ್ವರ್ ಮೇಲೆ ದಾಳಿ ಮಾಡ್ತಿದ್ದಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಆರೋಪಿಸಿದರು.

ಚನ್ನಪಟ್ಟಣ: ಯೋಗೇಶ್ವರ್ ಅವರನ್ನು ಜತೆಯಲ್ಲಿಟ್ಟುಕೊಂಡು ಅಳಿಯನ್ನ ಎಂಪಿ ಮಾಡಿಕೊಂಡರು. ಎನ್‌ಡಿಎ ಟಿಕೆಟ್ ಕೊಡುತ್ತಾರೆಂದು ಯೋಗಿ ಕಾಯುತ್ತಲೇ ಇದ್ದರು. ಆದರೆ, ಟಿಕೆಟ್ ಕೊಡಲಿಲ್ಲ. ಈಗ ದೇವೇಗೌಡರು, ಕುಮಾರಸ್ವಾಮಿ, ನಿಖಿಲ್, ಯಡಿಯೂರಪ್ಪ ಎಲ್ಲರೂ ಸೇರಿ ಯೋಗೇಶ್ವರ್ ಮೇಲೆ ದಾಳಿ ಮಾಡ್ತಿದ್ದಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಆರೋಪಿಸಿದರು.

ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಗನನ್ನು ಎಂಪಿ ಮಾಡಿ ಕೇಂದ್ರ ಮಂತ್ರಿ ಮಾಡ್ಕೊಂಡಿರಿ. ಅಳಿಯನನ್ನು ಎಂಪಿ ಮಾಡಿದ್ರಿ, ಇಲ್ಲಿ ಬಂದು ಅಬ್ಬರಿಸುತ್ತಿದ್ದೀರಲ್ಲ ದೇವೇಗೌಡರೇ..? ಯಾಕೆ ಯೋಗೆಶ್ವರ್‌ನ ಎಂಎಲ್‌ಎ ಮಾಡಿಲಿಲ್ಲ. ಮೊಮ್ಮಗನ ಎಂಎಲ್‌ಎ ಮಾಡ್ಕೊಲ್ಲೋಕೆ ಬಂದಿದ್ದೀರಿ ಎಂದರು.

ಎರಡು ಸಲ ಯೋಗೆಶ್ವರ್‌ಗೆ ಅನ್ಯಾಯ ಆಗಿದೆ. ಈ ಬಾರಿ ಮೋಸ ಮಾಡಬೇಡಿ. ಕುಮಾರಸ್ವಾಮಿ ಅವರೇ ಚಕ್ಕೆರೆ ಅಭಿವೃದ್ಧಿ ಆಗಿಲ್ಲ ಅಂತೀರಲ್ಲ. ನೀವೇ ಅಲ್ವಾ ಇಲ್ಲಿ ಶಾಸಕರಾಗಿದ್ದು, ಅಭಿವೃದ್ಧಿ ಆಗಿಲ್ಲ ಅಂದ್ರೆ ಅದು ನಿಮ್ಮ ತಪ್ಪು. ಕುಮಾರಣ್ಣ ಸಿಎಂ ಆಗ್ತಾರೆ ಅಂತಾ ವೋಟ್ ಹಾಕಿದ್ರಲ್ಲ. ಕುಮಾರಸ್ವಾಮಿ ಶಾಸಕರಾದ ಮೇಲೆ ಎಷ್ಟು ಬಾರಿ ಚಕ್ಕೆರೆಗೆ ಬಂದಿದ್ದರು. ಈಗ ಮಗನನ್ನು ಗೆಲ್ಲಿಸಿಕೊಳ್ಳೊಕೆ ಊರೂರು ಕೇರಿಕೇರಿ ಸುತ್ತುತ್ತಾ ಇದ್ದೀರಲ್ಲ ಎಂದು ಟೀಕಿಸಿದರು.

ಅವರ ಮೊಮ್ಮಗನನ್ನು ಎಂಎಲ್‌ಎ ಮಾಡೋವರೆಗೂ ದೇವೇಗೌಡ್ರು ನಿದ್ದೆ ಮಾಡಲ್ಲ ಅಂತಾರೆ. ಇದಕ್ಕೆಲ್ಲಾ ನೀವು ಉತ್ತರ ಕೊಡಬೇಕು. ಸುಮಲತಾ ಮಂಡ್ಯದಲ್ಲಿ ನಿಂತು ಸೆರೆಗೊಡ್ಡಿ ಮತ ಕೇಳಿದ್ರು. ಮಂಡ್ಯದ ಜನ ಸ್ವಾಭಿಮಾನಿ ಮತ ಕೊಟ್ಟು ಗೆಲ್ಲಿಸಿದರು. ನೀವು ನಿಮ್ಮ ಮನೆ ಮಗನಿಗೆ ಮತ ಕೊಟ್ಟು ಸ್ವಾಭಿಮಾನ ಮೆರೆಯಿರಿ ಎಂದರು.

ನಾವು ಬೇರೆ ಊರಿಂದ ಬಂದಿಲ್ಲ. ಹಾಸನ, ಮಂಡ್ಯ, ರಾಮನಗರದಿಂದ ಬಂದಿಲ್ಲ. ನಿಮ್ಮೂರಿನ ಮನೆ ಮಗನಿಗೆ ವೋಟ್ ಕೇಳೋಕೆ ಬಂದಿದ್ದೀವಿ. ನಿಮ್ಮ ಮನೆ ಮಗನಿಗೆ ಆಶೀರ್ವಾದ ಮಾಡಿ. ಕಾಂಗ್ರೆಸ್ ಸರ್ಕಾರ ಬಡವರ ಬದುಕನ್ನು ಹಸನಾಗಿಸಲು ಐದು ಗ್ಯಾರಂಟಿ ಯೋಜನೆ ಕೊಟ್ಟಿದೆ ಎಂದರು.

ಅಳುವವನು ನಾಯಕ ಅಲ್ಲ: ಬಾಲಕೃಷ್ಣ

ಟೂರಿಂಗ್ ಟಾಕೀಸ್‌ನವರು ಕಥೆ ಹೇಳೋಕೆ ಬಂದವರೆ, ಯಾರೂ ಮರುಳಾಗಬೇಡಿ. ಅಳುವವನು ನಾಯಕನೇ ಅಲ್ಲ, ಕಣ್ಣೀರು ಒರೆಸುವ ನಾಯಕರಿಗೆ ಮತ ಹಾಕಬೇಕು. ಕಳೆದ ೧೪ ತಿಂಗಳಿನಿಂದ ಬಾರದ ನಿಖಿಲ್ ಈಗ ಚುನಾವಣೆಗೆ ಬಂದವರೆ. ಏನೋ ಫ್ಯಾಕ್ಟರಿ ಮಾಡೋಕೆ ಜಾಗ ಕೊಡಲಿಲ್ಲ ಅಂತ ಎಚ್‌ಡಿಕೆ ಹೇಳಿದ್ದಾರೆ. ಅದೆಲ್ಲಿ ಜಾಗ ಕೇಳಿದ್ದಾರೋ ಗೊತ್ತಿಲ್ಲ. ಡಿಸಿಎಂ ಅವ್ರು ಜಾಗ ಕೊಡಲಿ ಅದೆಲ್ಲಿ ಫ್ಯಾಕ್ಟರಿ ಕಟ್ಟಿ ಕೆಲಸ ಕೊಡ್ತಾರೋ ನೋಡೊಣ ಎಂದರು.

(ಶಾಸಕ ಬಾಲಕೃಷ್ಣ ಮಗ್‌ಶಾಟ್‌ ಬಳಸಿ ಸಾಕು)