ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ

| Published : Sep 29 2025, 03:02 AM IST

ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ
Share this Article
  • FB
  • TW
  • Linkdin
  • Email

ಸಾರಾಂಶ

ನಶಿಸಿ ಹೋಗುತ್ತಿರುವ ಜಾನಪದ ಕಲೆಗಳ ಉಳಿಸಲು ಸಂಘಟನೆಗಳ ಪಾತ್ರ ಬಹಳ ಅವಶ್ಯವೆಂದು ಗಣಿ ಉದ್ಯಮಿ ಹಾಗೂ ಕಲಾ ಪ್ರೇಮಿ ಎಂ.ಎಂ.ವಿರಕ್ತಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ನಶಿಸಿ ಹೋಗುತ್ತಿರುವ ಜಾನಪದ ಕಲೆಗಳ ಉಳಿಸಲು ಸಂಘಟನೆಗಳ ಪಾತ್ರ ಬಹಳ ಅವಶ್ಯವೆಂದು ಗಣಿ ಉದ್ಯಮಿ ಹಾಗೂ ಕಲಾ ಪ್ರೇಮಿ ಎಂ.ಎಂ.ವಿರಕ್ತಮಠ ಹೇಳಿದರು.

ಪಟ್ಟಣದ ವಿದ್ಯಾಚೇತನ ಪ್ರಾಥಮಿಕ ಶಾಲೆಯಲ್ಲಿ ಕಜಾಪ ನೂತನ ಮಹಿಳಾ ಘಟಕದ ಪದಗ್ರಹಣ ಮತ್ತು ತಾಲೂಕು ಮಟ್ಟದ ಮಹಿಳಾ ಜಾನಪದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಶಿಸಿ ಹೋಗುತ್ತಿರುವ ಜನಪದ ಹಾಡು ಹಾಡುತ್ತಿರುವ ಎಲೆಮರೆ ಕಾಯಿಯಂತಿರುವ ಜಾನಪದ ಕಲಾವಿದರನ್ನು ಬೆಳಕಿಗೆ ತರುವ ಕೆಲಸ ಮಾಡಬೇಕಿದೆ. ಜಾನಪದ ಎಂಬುದು ನಮ್ಮ ನಾಡಿನ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಅನರ್ಘ್ಯ ರತ್ನವಿದ್ದಂತೆ. ಅದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.ಕಸಾಪ ವಲಯ ಘಟಕದ ಅಧ್ಯಕ್ಷ ಎಸ್.ಎಂ. ರಾಮದುರ್ಗ ಮಾತನಾಡಿ, ನಶಿಸುತ್ತಿರುವ ಜಾನಪದ ಕಲೆ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.ತಾಲೂಕು ಕಜಾಪ ಅಧ್ಯಕ್ಷೆ ಲಕ್ಷ್ಮೀ ಹಾರುಗೊಪ್ಪ ಮಾತನಾಡಿ, ಜಾನಪದ ಸಂಸ್ಕೃತಿ ನಮ್ಮ ಹಿರಿಯರ ಬಳುವಳಿಯಾಗಿದ್ದು, ಕಣ್ಮರೆಯಾಗುತ್ತಿರುವ ಜನಪದ ಕಲೆ ಉಳಿಸಿ ಬೆಳೆಸಬೇಕಿದೆ ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಕಜಾಪ ವಲಯ ಘಟಕದ ಮಹಿಳಾ ಅಧ್ಯಕ್ಷೆ ರೇಖಾ ನರಹಟ್ಟಿ ಮಾತನಾಡಿ, ಇಂದು ನಾವೆಲ್ಲ ಆಧುನಿಕ ಭರಾಟೆ ಹಾಗೂ ಒತ್ತಡದ ಬದುಕಿನಲ್ಲಿ ಜೀವನ ನಡೆಸುತ್ತಿದ್ದೇವೆ. ಇಂತಹ ಸಂದಿಗ್ಧ ಪರಿಸ್ಥಿತಿಯ ನಡುವೆ ಸಂಸ್ಕಾರ, ಸಂಬಂಧಗಳನ್ನು ಗಟ್ಟಿಗೊಳಿಸಲು ಜನಪದ ಸಾಹಿತ್ಯ ಹಾಗೂ ಕಲೆಗಳು ಅವಶ್ಯವಾಗಿದೆ ಎಂದರು.ನಿವೃತ್ತ ಶಿಕ್ಷಕ ಚಂದ್ರಕಾಂತ ರಂಗಣ್ಣವರ, ವಿ.ಎಂ. ತೆಗ್ಗಿ, ರವಿ ಬೋಳಿಶೆಟ್ಟಿ, ಸಂಗಮೇಶ ನೀಲಗುಂದ, ಗೋವಿಂದ ಕೌಲಗಿ, ವಿ.ಎ. ವರ್ಚಗಲ್, ರವಿ ಕೋಲಾರ, ಮಹಿಳಾ ಸಂಘಟನೆ ಕುರಿತು ಮಾತನಾಡಿದರು.ಈ ವೇಳೆ ರಮೇಶ ನಿಡೋಣಿ, ಎಸ್.ಎಸ್.ವಿರಕ್ತಮಠ, ಸಂಗಮೇಶ ಶಿರಗುಪ್ಪಿ, ಅಲ್ಲಾಬಕ್ಷ ಬಾಗವಾನ, ಪ್ರಭು ಬೋಳಿಶೆಟ್ಟಿ, ತಾಲೂಕಾ ಕಜಾಪ ಅಧ್ಯಕ್ಷೆ ಲಕ್ಷ್ಮೀ ಹಾರುಗೊಪ್ಪ, ಕಜಾಪ ವಲಯ ಘಟಕದ ಮಹಿಳಾ ಅಧ್ಯಕ್ಷೆ ರೇಖಾ ನರಹಟ್ಟಿ, ಶಕುಂತಲಾ ಹುಲ್ಲನ್ನವರ, ರಾಜೇಶ್ವರಿ ಮೋದಿ, ಕವಿತಾ ಮುದಕವಿ, ಮಂಜುಳಾ ಸಂಬಾಳದ, ಸುಧಾ ಗಸ್ತಿ, ಸವಿತಾ ಗಂಗಾವತಿ, ತುಂಗವ್ವ ಪಾಟೀಲ, ಶಾರದಾ ಲಿಂಗದಮಠ ಮತ್ತು ಶಿಕ್ಷಕವೃಂದ ಇದ್ದರು. ವಿವೇಕ ಮರಾಠಿ ನಿರೂಪಿಸಿದರ. ಚಿದಾನಂದ ಮುಂಡಾಸದ ವಂದಿಸಿದರು.