ಖಾಸಗಿ ಬಸ್, ರೈಲುಗಳ ಮೊರೆ ಹೋದ ಪ್ರಯಾಣಿಕರು

| Published : Aug 05 2025, 11:45 PM IST

ಸಾರಾಂಶ

ದಾಬಸ್‍ಪೇಟೆ: ಹಿಂಬಾಕಿ ವೇತನ ಪಾವತಿ, ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ಕರೆನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸರ್ಕಾರಿ ಬಸ್‌ಗಳಿಲ್ಲದೆ ಜನರು ಪರದಾಡುವಂತಾಯಿತು.

ದಾಬಸ್‍ಪೇಟೆ: ಹಿಂಬಾಕಿ ವೇತನ ಪಾವತಿ, ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ಕರೆನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸರ್ಕಾರಿ ಬಸ್‌ಗಳಿಲ್ಲದೆ ಜನರು ಪರದಾಡುವಂತಾಯಿತು.

ಬೆಳಿಗ್ಗೆಯಿಂದಲೇ ಶಾಲಾ ಕಾಲೇಜುಗಳಿಗೆ, ಕೆಲಸಗಳಿಗೆ ಪಟ್ಟಣದಿಂದ ನಿತ್ಯ ಸಾವಿರಾರು ಜನರು ಬೆಂಗಳೂರು, ತುಮಕೂರು, ಮಧುಗಿರಿ, ದೊಡ್ಡಬಳ್ಳಾಪುರ ಪ್ರದೇಶಗಳಿಗೆ ಹೋಗುತ್ತಾರೆ. ಆದರೆ ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಖಾಸಗಿ ಬಸ್ ಗಳ ಮೊರೆ ಹೋಗಬೇಕಾಯಿತು.

ಖಾಸಗಿ ಬಸ್‌ಗಳ ಆರ್ಭಟ: ಸರ್ಕಾರ ಶಕ್ತಿಯೋಜನೆ ಘೋಷಿಸಿದ್ದರಿಂದ ಬಹುತೇಕ ಮಹಿಳೆಯರು ಸರ್ಕಾರಿ ಬಸ್ ಗಳನ್ನು ಅವಲಂಬಿಸಿ ಖಾಸಗಿ ಬಸ್ ಗಳಿಗೆ ಗುಡ್ ಬೈ ಹೇಳಿದ್ದರು. ಇದರ ಪರಿಣಾಮ ಭಾರಿ ನಷ್ಟದಲ್ಲಿದ್ದ ಖಾಸಗಿ ಬಸ್ ಗಳು ಮೂಲೆ ಸೇರಿದ್ದವು, ಇಂದು ಸರ್ಕಾರಿ ಬಸ್‌ಗಳು ಬಾರದ ಪರಿಣಾಮ ಪಟ್ಟಣದ ತುಮಕೂರು ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳು ಇರುವೆ ಸಾಲಿನಂತೆ ನಿಂತು ಪ್ರಯಾಣಿಕರನ್ನು ಹತ್ತುವಂತೆ ಕೂಗುತ್ತಿದ್ದ ದೃಶ್ಯ ಕಂಡುಬಂತು.

ಬಿಎಂಟಿಸಿ ಬಸ್ ಗೆ ಹತ್ತದ ಪ್ರಯಾಣಿಕರು:

ಪಟ್ಟಣಕ್ಕೆ ನಿತ್ಯ ನೂರಾರು ಕೆಎಸ್‌ಆರ್‌ಟಿಸಿ ಬಸ್‌ಗಳು ತುಮಕೂರು ಡಿಪೋ ಸೇರಿದಂತೆ ವಿವಿಧ ಡಿಪೋಗಳಿಂದ ಬರುತ್ತಿದ್ದವು. ಮುಷ್ಕರದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಗಳು ಬಾರದ ಹಿನ್ನಲೆಯಲ್ಲಿ ಹೆಚ್ಚಾಗಿ ಬಿಎಂಟಿಸಿ ಬಸ್‌ಗಳನ್ನು ನಿಯೋಜಿಸಲಾಗಿತ್ತು. ಆದರೆ ಪ್ರಯಾಣಿಕರು ಬಿಎಂಟಿಸಿ ಬಸ್ ಹತ್ತದೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಕಾಯುತ್ತಾ ನಿಂತಿದ್ದರು..ರೈಲನ್ನು ಅವಲಂಬಿಸಿದ ಜನತೆ: ಬಸ್ ನೌಕರರು ಮುಷ್ಕರ ಮಾಡುತ್ತಾರೆಂದು ಮೊದಲ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಬೆಂಗಳೂರು, ತುಮಕೂರಿಗೆ ಪ್ರಯಾಣಸುವ ಜನತೆ ಪಟ್ಟಣದ ಜನತೆ ರೈಲನ್ನು ಅವಲಂಬಿಸಿ ತಮ್ಮ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದದ್ದು ಸಾಮಾನ್ಯವಾಗಿತ್ತು.

(ಒಂದು ಫೋಟೋ ಮಾತ್ರ)

ಪೋಟೋ 3 : ದಾಬಸ್‍ಪೇಟೆ ಪಟ್ಟಣದ ತುಮಕೂರು ರಸ್ತೆಯಲ್ಲಿ ಖಾಸಗಿ ಬಸ್ ಗಳು ನಿಂತಿರುವುದುಪೋಟೋ 4 : ದಾಬಸ್‍ಪೇಟೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಿಂತಿರುವ ಬಿಎಂಟಿಸಿ ಬಸ್ ಗಳು