ಒಳ್ಳೆಯ ಮಾರ್ಗದಲ್ಲಿ ನಡೆದಾಗ ವ್ಯಕ್ತಿತ್ವ ವಿಕಸನ ಸಾಧ್ಯ

| Published : May 07 2025, 12:45 AM IST

ಒಳ್ಳೆಯ ಮಾರ್ಗದಲ್ಲಿ ನಡೆದಾಗ ವ್ಯಕ್ತಿತ್ವ ವಿಕಸನ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಒಳ್ಳೆಯ ಮಾರ್ಗದಲ್ಲಿ ಹೋಗಿ ಉತ್ತಮ ಪ್ರಜೆಗಳಾದಾಗ ಮಾತ್ರ ನಿಮ್ಮ ವ್ಯಕ್ತಿತ್ವ ವಿಕಸನವಾಗುವುದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ಸಂತೋಷ್ ಹೆಗ್ಡೆ ಅಭಿಮತ । ನಶೆ ಮುಕ್ತ ಭಾರತ, ವ್ಯಕ್ತಿತ್ವ ವಿಕಸನ ಸಂವಾದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಒಳ್ಳೆಯ ಮಾರ್ಗದಲ್ಲಿ ಹೋಗಿ ಉತ್ತಮ ಪ್ರಜೆಗಳಾದಾಗ ಮಾತ್ರ ನಿಮ್ಮ ವ್ಯಕ್ತಿತ್ವ ವಿಕಸನವಾಗುವುದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.ಚಿಕ್ಕಮಗಳೂರು ಯುವ ಸ್ಫೂರ್ತಿ ಅಕಾಡಮಿ, ಸದ್ಗುರು ಜನಸೇವಾ ಫೌಂಡೇಶನ್, ಜಯಕರ್ನಾಟಕ ಸಂಘಟನೆ ತರೀಕೆರೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ನಶೆ ಮುಕ್ತ ಭಾರತ, ವ್ಯಕ್ತಿತ್ವ ವಿಕಸನ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಅಭಿಪ್ರಾಯ ಪಟ್ಟರು.ನೀವು ಈ ದೇಶದ ಮುಂದಿನ ಭವಿಷ್ಯದ ನಾಯಕರು. ಈ ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಲು ಮುಂದಾಗಬೇಕು. ಪ್ರಾಮಾಣಿಕವಾಗಿ ದುಡಿದು ಬದುಕಬೇಕು. ಈ ದೇಶಕ್ಕೆ ಮಾದರಿ ವ್ಯಕ್ತಿಗಳಾಗಿ ನಿಮ್ಮ ತಂದೆ ತಾಯಿಗಳ ಕನಸು ನನಸು ಮಾಡಬೇಕು ಎಂದು ಹೇಳಿದರು.ಬೆಂಗಳೂರು ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಾಧೀಶ ಎಚ್.ಪಿ.ಸಂದೇಶ್ ಮಾತನಾಡಿ ನೀವೇ ನಿಮ್ಮ ಜೀವನದ ಶಿಲ್ಪಿಗಳು. ಒಳ್ಳೆಯ ಶಿಕ್ಷಣ ಸಿಗುತ್ತಿದೆ, ನಿಮ್ಮ ಜೀವನವನ್ನು ಯಾವ ರೀತಿ ರೂಪಿಸಿಕೊಳ್ಳುತ್ತೀರಿ ಎನ್ನುವುದು ಮುಖ್ಯ. ಪ್ರತಿ ಯೊಬ್ಬ ವ್ಯಕ್ತಿಯಲ್ಲಿ ಚೈತನ್ಯ ಇರುತ್ತದೆ. ಅದನ್ನು ಉಪಯೋಗಿಸಿಕೊಳ್ಳಬೇಕು, ಸಮಾಜಕ್ಕೆ ಏನು ಕೊಡುಗೆ ಕೊಟ್ಟಿರಿ ಎನ್ನುವುದು ಮುಖ್ಯ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.ವ್ಯಕ್ತಿ ವಿಕಾಸನ ಶಿಕ್ಷಣದಿಂದ ಸಾಧ್ಯ, ಶಿಕ್ಷಣ ವಿಶ್ವಮಾನವನನ್ನಾಗಿ ಮಾಡುತ್ತದೆ. ನೊಂದವರಿಗೆ ಸಹಾಯ ಮಾಡಬೇಕು, ಪುಸ್ತಕ ಗಳನ್ನು ಓದಿ ಒಳ್ಳೆಯ ಮಾಹಿತಿ ಸಿಗುತ್ತದೆ ಎಂದು ಹೇಳಿದರು.ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು, ಚಿಕ್ಕಮಗಳೂರು ಯುವ ಸ್ಪೂರ್ತಿ ಅಕಾಡೆಮಿ ಅಧ್ಯಕ್ಷ ಸಿ.ಬಿ.ಸುಂದರೇಶ್ ಮಾತನಾಡಿ ಯುವ ಸ್ಫೂರ್ತಿ ಅಕಾಡೆಮಿ ಹಾಗೂ ಸದ್ಗುರು ಜನಸೇವಾ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಯುವಕರು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸಮಾಜದಲ್ಲಿ ಸಮಾಜಮುಖಿಯಾಗಿ ಬದುಕಬೇಕೆಂಬ ಆಶಯದೊಂದಿಗೆ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಡಾ.ಟಿ.ಎನ್.ಜಗದೀಶ್ ಮಾತನಾಡಿ ಒಳ್ಳೆಯ ಮಾರ್ಗದಲ್ಲಿ ಹೋಗಬೇಕು, ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಚಿಕ್ಕಮಗಳೂರು ಯುವ ಸಂಘಗಳ ಒಕ್ಕೂಟ ಜಿಲ್ಲಾಧ್ಯಕ್ಷ ಇಮ್ರಾನ್ ಅಹಮದ್ ಬೇಗ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮಂಜುನಾಥ್, ತರೀಕೆರೆ ಆರಕ್ಷಕ ಉಪಾಧೀಕ್ಷಕ ಹಾಲಮೂರ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಆರ್.ಅನಂತಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ. ಚಂದ್ರಶೇಖರ್, ಜಯಕರ್ನಾಟಕ ಮಹಿಳಾ ಸಂಘಟನೆ ತಾಲೂಕು ಅಧ್ಯಕ್ಷೆ ರೂಪ, ಶಿಕ್ಷಕಿ ಕವಿತ, ಜಯಕರ್ನಾಟಕ ಸಂಘಟನೆ ತಾಲೂಕು ಉಪಾಧ್ಯಕ್ಷ ಕೆ.ವಿ.ದರ್ಶನ್, ತಾಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ್, ಪದಾಧಿಕಾರಿ ರವಿ ಶಾಂತಿಪುರ, ವಿನೋದ್ ಮತ್ತಿತರರು ಭಾಗಹಿಸಿದ್ದರು.5ಕೆಟಿಆರ್.ಕೆ.30ಃ ತರೀಕೆರೆಯಲ್ಲಿ ಚಿಕ್ಕಮಗಳೂರು ಯುವ ಸ್ಫೂರ್ತಿ ಅಕಾಡೆಮಿ, ಸದ್ಗುರು ಜನಸೇವಾ ಫೌಂಡೇಶನ್, ಜಯಕರ್ನಾಟಕ ಸಂಘಟನೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿಲೋಕಾಯುಕ್ತ ವಿಶ್ರಾಂತ ನ್ಯಾಯಾಧೀಶ ಸಂತೋಷ್ ಹೆಗಡೆ, ಉಚ್ಚ ನ್ಯಾಯಾಲಯ ನ್ಯಾ. ಎಚ್.ಪಿ.ಸಂದೇಶ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಡಾ.ಟಿ.ಎನ್.ಜಗದೀಶ್, ಚಿಕ್ಕಮಗಳೂರು ಯುವ ಸ್ಫೂರ್ತಿ ಅಕಾಡೆಮಿ ಅಧ್ಯಕ್ಷ ಸಿ.ಬಿ.ಸುಂದರೇಶ್ ಮತ್ತಿತರರು ಇದ್ದರು.