ಅಂಬೇಡ್ಕರ್‌ ಭಾವಚಿತ್ರಕ್ಕೆ ಚಪ್ಪಲಿ ಹಾರ, 11 ಜನರ ವಿರುದ್ಧ ಪ್ರಕರಣ

| Published : May 07 2025, 12:45 AM IST

ಅಂಬೇಡ್ಕರ್‌ ಭಾವಚಿತ್ರಕ್ಕೆ ಚಪ್ಪಲಿ ಹಾರ, 11 ಜನರ ವಿರುದ್ಧ ಪ್ರಕರಣ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದ ಅಂಬೇಡ್ಕರ ವೃತ್ತದಲ್ಲಿ ಹಾಕಿರುವ ಅಂಬೇಡ್ಕರ್‌ ಭಾವಚಿತ್ರಕ್ಕೆ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಚಪ್ಪಲಿ ಹಾರ ಹಾಕಿದ್ದಾರೆ. ಈ ಘಟನೆ ಖಂಡಿಸಿ ಮಂಗಳವಾರ ಬೆಳಗ್ಗೆ ದಲಿತ ಸಮುದಾಯದವರು ಪ್ರತಿಭಟನೆ ನಡೆಸಿ, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕುಕನೂರು:

ತಾಲೂಕಿನ ಕವಳಗೇರಿಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಹಾಗೂ ಜಗಜೀವನರಾಮ್‌ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಸ್ಥಳಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಂಸದ ರಾಜಶೇಖರ ಹಿಟ್ನಾಳ, ಎಸ್ಪಿ, ಎಸಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಆಗಿದ್ದೇನು?

ಗ್ರಾಮದ ಅಂಬೇಡ್ಕರ ವೃತ್ತದಲ್ಲಿ ಹಾಕಿರುವ ಅಂಬೇಡ್ಕರ್‌ ಭಾವಚಿತ್ರಕ್ಕೆ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಚಪ್ಪಲಿ ಹಾರ ಹಾಕಿದ್ದಾರೆ. ಈ ಘಟನೆ ಖಂಡಿಸಿ ಮಂಗಳವಾರ ಬೆಳಗ್ಗೆ ದಲಿತ ಸಮುದಾಯದವರು ಪ್ರತಿಭಟನೆ ನಡೆಸಿ, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಜತೆಗೆ ಅವರನ್ನು ಗಡೀಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ.

11 ಜನರ ಮೇಲೆ ಪ್ರಕರಣ:ಕವಳಕೇರಿ ಗ್ರಾಮದ ಶಿವಕುಮಾರ ಮುದ್ಲಾಪೂರ, ಶರಣಬಸವ ಮುದ್ಲಾಪೂರ, ಹನುಮಪ್ಪ ಮುದ್ಲಾಪೂರ, ರಾಮಣ್ಣ ಮುದ್ಲಾಪೂರ, ಈರಣ್ಣ ಮುದ್ಲಾಪೂರ, ಈರಪ್ಪ ಮುದ್ಲಾಪೂರ, ಅಮೃತ ಮುದ್ಲಾಪೂರ, ಅರಣು ಅರಕೇರಿ, ವಿರೇಶ ಅರಕೇರಿ, ವೀರಣ್ಣ ಅರಕೇರಿ, ರವಿ ಆಡೀನ ಅಂಬೇಡ್ಕರ್‌ ಭಾವಚಿತ್ರಕ್ಕೆ ಚಪ್ಪಲಿ ಹಾಕಿ ಅವಮಾನಿಸಿದ್ದಾರೆಂದು ಈರಪ್ಪ ನರೇಗಲ್ಲ ಕುಕನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾರಣವೇನು?

ಗ್ರಾಮದಲ್ಲಿ ಉಪ್ಪಾರ ಸಮಾಜದಿಂದ ಬಸ್ ನಿಲ್ದಾಣದ ಹತ್ತಿರ ಭಗೀರಥ ಮಹರ್ಷಿ ಕಟ್ಟೆ ಕಟ್ಟಲು ಮುಂದಾದಾಗ, ಬಸ್ ನಿಲ್ದಾಣ ಬಳಿ ಬೇಡ ಅಂಬೇಡ್ಕರ್ ವೃತ್ತದ ಬಳಿ ಕಟ್ಟಿದರೆ ಬಸ್ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ದಲಿತ ಸಮುದಾಯವದರು ಸೋಮವಾರ ಸಂಜೆ ಹೇಳಿದ್ದಾರೆ. ಈ ವೇಳೆ ಉಪ್ಪಾರ ಸಮಾಜದವರು ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ ರಾತ್ರಿ ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಹಾಕಿ ಅವಮಾನಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

ಕೃತ್ಯಗಳಿಗೆ ಕಡಿವಾಣ ಹಾಕಿ:ಪ್ರತಿಭಟನೆಯಲ್ಲಿ ಮಾತನಾಡಿದ ದಲಿತ ಯುವ ಮುಖಂಡ ದುರಗಪ್ಪ ನಡುವಲಮನಿ, ಸಂವಿಧಾನ ರಚಿಸಿದ ಮಹಾನ್‌ ವ್ಯಕ್ತಿಗೆ ಈ ರೀತಿಯ ಅವಮಾನ ಮಾಡಲಾಗಿದೆ. ಇಂತಹ ಹೇಯ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್‌, ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಮುಖಂಡ ಸಿದ್ದು ಮಣ್ಣಿನವರ ಮಾತನಾಡಿ, ಘಟನೆಗೆ ಕಾರಣವಾದವರ ಕುಟುಂಬಕ್ಕೆ ಹಾಗೂ ಕಿಡಿಗೇಡಿಗಳಿಗೆ ಸರ್ಕಾರದ ಯಾವುದೇ ಸವಲತ್ತು ಸಿಗಬಾರದು. ಅವರನ್ನು ಗಡೀಪಾರು ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಿಗೆ ಕಡಿವಾಣ ಹಾಕಿದಂತೆ ಆಗುತ್ತದೆ ಎಂದರು.ರಾಯರಡ್ಡಿ-ಹಿಟ್ನಾಳ ಭೇಟಿ:ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಂಸದ ರಾಜಶೇಖರ ಹಿಟ್ನಾಳ, ಎಸ್ಪಿ ಡಾ. ಎಲ್. ರಾಮ್ ಅರಸಿದ್ದಿ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಡಿವೈಎಸ್ಪಿ ಎಂ.ಪಿ. ಸರವಗೋಳ, ಸಿಪಿಐ ಮೌನೇಶ್ ಪಾಟೀಲ್, ತಹಸೀಲ್ದಾರ ಎಚ್. ಪ್ರಾಣೇಶ, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್ ಪರಿಸ್ಥಿತಿಯನ್ನು ಅವಲೋಕಿಸಿ ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಈ ವೇಳೆ ಅವರು ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಬಳಿಕ ಅಂಬೇಡ್ಕರ್‌ ವೃತ್ತದಲ್ಲಿ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.ಈ ವೇಳೆ ಪಿಎಸ್ಐ ಟಿ. ಗುರುರಾಜ, ಗ್ರಾಪಂ ಅಧ್ಯಕ್ಷ ಸಕ್ರಪ್ಪ ಚಿನ್ನೂರು, ಪಿಡಿಒ ನೀಲಂ ಚಳಗೇರಿ, ಸಮಾಜ ಕಲ್ಯಾಣಾಧಿಕಾರಿ ಶಶಿಧರ ಸಕ್ರಿ, ಮುಖಂಡರಾದ ವಸಂತ ಬಾವಿಮನಿ, ಹನುಮಂತಪ್ಪ ಮುತ್ತಾಳ, ವಿಜಯ ಜಕ್ಕಲಿ, ಶರಣಪ್ಪ ಹಿರೇಮನಿ, ಸಂಜೀವ್ ಹಿರೇಮನಿ, ಜಗದೀಶ ಸೂಡಿ, ರವಿ ಆಗೋಲಿ, ಭೀಮಣ್ಣ ನಡುಲಮನಿ ಇದ್ದರು.ಕಾನೂನು ಕ್ರಮಘಟನೆಯಲ್ಲಿ ಭಾಗಿಯಾದವರ ಮೇಲೆ ಕಾನೂನಾತ್ಮಕ ಕಠಿಣ ಕ್ರಮಗಳಾಗಬೇಕು. ಗಡೀಪಾರಿಗೆ ಅವಕಾಶವಿದ್ದರೆ ಕೂಡಲೇ ಗಡೀಪಾರು ಮಾಡಿ ಎಂದು ಸಿಎಂ ಆರ್ಥಿಕ ಸಲಗೆಹಾರ ಬಸವರಾಜ ರಾಯರಡ್ಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ ಎಲ್‌ ಅರಸಿದ್ದಿಗೆ ಸೂಚಿಸಿದರು.

ನಾನು ಬಸವ, ಅಂಬೇಡ್ಕರ್‌ ಅನುಯಾಯಿ. ಎಷ್ಟೋ ದೇವಸ್ಥಾನದಲ್ಲಿ ಪ್ರವೇಶ ಇಲ್ಲದಿರುವುದನ್ನು ವಿರೋಧಿಸಿ ನಾನೇ ಪ್ರವೇಶಿಸಿದ್ದೇನೆ. ನಾಯಿ, ಬೆಕ್ಕು ದೇವಸ್ಥಾನಕ್ಕೆ ಹೋಗಬಹುದು. ಮನುಷ್ಯರು ಹೋಗಬಾರದು ಎಂದರೆ ಯಾವ ನ್ಯಾಯ. ವೈದಿಕತೆಯಿಂದ ಮಾನವೀಯತೆ ಮರೆಮಾಚಬಾರದು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದು ಖಂಡನೀಯ. ಅಸ್ಪೃಶ್ಯತೆ ದೊಡ್ಡಶಾಪ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಆಗುವ ಅವಮಾನ ಕೊನೆಯಾಗಬೇಕು. ಸಮಾಜದ ಮುನ್ನೆಲೆಗೆ ಅವರು ಬರಬೇಕು. ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಅಧ್ಯಯನ ಆಗಬೇಕು. ಅವುಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದರು. ಶೀಘ್ರ ಶಿಕ್ಷೆಗೆ ಆಗ್ರಹಘಟನೆ ಸಂಬಂಧಿಸಿದಂತೆ ಆರೋಪಿಗಳಿಗೆ ಶೀಘ್ರ ಶಿಕ್ಷೆ ನೀಡಬೇಕೆಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು. ಆ ನಿಟ್ಟಿನಲ್ಲಿ ನಾವು ಸಹ ಆಗ್ರಹಪಡಿಸುತ್ತೇನೆ. ಸಮಾಜದಲ್ಲಿ ಜಾತಿ ನಿಂದನೆ, ಮಹನೀಯರಿಗೆ ಅವಮಾನ ಮಾಡಬಾರದು. ಸಮಾಜದಲ್ಲಿ ಒಳ್ಳೆಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಒಳ್ಳೆಯವರು ಸೇರಿಕೊಂಡು ಕೆಟ್ಟತನ ಮಾಡುವವರನ್ನು ಹಿಮ್ಮೆಟ್ಟಿಸುವ ಕಾರ್ಯ ಆಗಬೇಕಿದೆ. ಇಂತಹ ಘಟನೆ ಎಂದಿಗೂ ಜರುಗಬಾರದು ಎಂದರು.ಈಗಾಗಲೇ ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ. ಅವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ಆಗಲಿದೆ. ಇದರಲ್ಲಿ ಯಾವುದೇ ಮುಲಾಜಿಲ್ಲ. ಜಿಲ್ಲಾಧಿಕಾರಿಗಳೊಡನೆ ಸ್ವತಃ ಮಾತನಾಡಿ ಇಂತಹ ಘಟನೆ ಜರುಗದಂತೆ ಕ್ರಮ ಸಹ ತೆಗೆದುಕೊಳ್ಳಲಾಗುವುದು.ಡಾ. ರಾಮ ಎಲ್. ಅರಸಿದ್ದಿ ಎಸ್ಪಿಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದು ಖಂಡನೀಯ. ಇದಕ್ಕೆ ಕಾರಣರಾದವರ ಮೇಲೆ ಕಠಿಣ ಶಿಕ್ಷೆ ಆಗುವುದು. ಕಾನೂನಾತ್ಮಕವಾಗಿ ಕ್ರಮ ಜರುಗಿಸಲಾಗುವುದು.ಮಹೇಶ ಮಾಲಗಿತ್ತಿ, ಎಸಿ ಕೊಪ್ಪಳ