ಸಾರಾಂಶ
ಕುಷ್ಟಗಿ ಪಟ್ಟಣದ ಶಾಖಾಪುರ ರಸ್ತೆಯಲ್ಲಿರುವ ಬಿಎಸ್‌ಕೆಪಿ ಸಮುದಾಯ ಭವನದಲ್ಲಿ ಇನ್ನರ್‌ವೀಲ್ ಕ್ಲಬ್‌ನಿಂದ ತಾಲೂಕಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನೇಷನ್ ಬಿಲ್ಡರ್ ಅವಾರ್ಡ್ ಪ್ರದಾನ ಕಾರ್ಯಕ್ರಮ ನಡೆಯಿತು.
ಕುಷ್ಟಗಿ: ಪಟ್ಟಣದ ಶಾಖಾಪುರ ರಸ್ತೆಯಲ್ಲಿರುವ ಬಿಎಸ್‌ಕೆಪಿ ಸಮುದಾಯ ಭವನದಲ್ಲಿ ಇನ್ನರ್‌ವೀಲ್ ಕ್ಲಬ್‌ನಿಂದ ತಾಲೂಕಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನೇಷನ್ ಬಿಲ್ಡರ್ ಅವಾರ್ಡ್ ಪ್ರದಾನ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ ಮಾತನಾಡಿ, ಬದುಕಿನಲ್ಲಿ ವಿದ್ಯೆಯೇ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯೆಗೆ ಎಲ್ಲದಕ್ಕಿಂತ ಬೆಲೆ ಜಾಸ್ತಿ. ಹೀಗಾಗಿ ನಮ್ಮ ಬದುಕಿಗೆ ವಿದ್ಯೆ ಅವಶ್ಯಕ. ಶಿಕ್ಷಕರು ರಾಷ್ಟ್ರ ನಿರ್ಮಾಣ ಮಾಡುವವರಾಗಿದ್ದಾರೆ. ಹಾಗಾಗಿ ಅವರನ್ನು ಸನ್ಮಾನಿಸಿದೆವು ಎಂದರು.ಇದೇ ವೇಳೆ ಶಿಕ್ಷಕರಾದ ವೆಂಕಟೇಶ ಗಂಜಿಹಾಳ, ಶರಣಪ್ಪ ತುಮರಿಕೊಪ್ಪ, ಸಿದ್ದಯ್ಯ ಗುರುವಿನ, ಜೀವನಸಾಬ ಬಿನ್ನಾಳ, ವಿದ್ಯಾ ಕಂಪಾಪುರಮಠ, ಶಿವಾನಂದ ಪಂಪಣ್ಣವರ, ಸಿದ್ರಾಮಪ್ಪ ಅಮರಾವತಿ, ಶ್ವೇತಾ ವಾರದ, ಅರುಂಧತಿ ಗದ್ದಿಗೌಡರ ಸೇರಿದಂತೆ ಒಟ್ಟು ಹದಿನೈದು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅದ್ಯಕ್ಷೆ ಶಾರದಾ ಶೆಟ್ಟರ, ಕಾರ್ಯದರ್ಶಿ ವಂದನಾ ಗೋಗಿ, ಸುವರ್ಣ ಬಳೂಟಗಿ, ಮೇಘಾ ದೇಸಾಯಿ, ಸುಧೀಪ್ತಾ, ಶರಣಮ್ಮ ಅಂಗಡಿ, ಗೌರಮ್ಮ ಕುಡತಿನಿ, ಸುಮಾ ಬ್ಯಾಳಿ, ಡಾ. ಕುಮುದಾ ಪಲ್ಲೇದ ಇದ್ದರು.