ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ: ಡಾ.ಕಾಂತರಾಜು ಕರೆ

| Published : Jun 29 2024, 12:31 AM IST

ಸಾರಾಂಶ

ಸೊಳ್ಳೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮನೆ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಡೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಆರೋಗ್ಯ ಇಲಾಖೆಯ ಜೊತೆ ಸಹಕರಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಪೌರ ಕಾರ್ಮಿಕ ಕಾಲೋನಿಯಲ್ಲಿ ರಾಷ್ಟ್ರೀಯ ಡೆಂಘೀ ದಿವನ್ನು ಆಚರಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಂತ್ರಣಾಧಿಕಾರಿ ಡಾ.ಕಾಂತರಾಜು ಮಾತನಾಡಿ, ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿದೆ. ಇದರ ನಿಯಂತ್ರಣದ ಮೂಲಕ ರಾಜ್ಯಾದ್ಯಂತ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯಿಂದ ಚಾಲನೆ ನೀಡಲಾಗಿದೆ ಎಂದರು.

ಸೊಳ್ಳೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮನೆ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಡೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಆರೋಗ್ಯ ಇಲಾಖೆಯ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಗರದ ಪ್ರಮುಖ ಬೀದಿಗಳಲ್ಲಿ ಡೆಂಘೀ ಮತ್ತು ಚಿಕೂನ್‌ ಗುನ್ಯ ತಡೆಗೆ ಅಗತ್ಯ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಹಾಗೂ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಾ.ಆಶಾಲತಾ, ಡಾ.ಜವರೇಗೌಡ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೋಮಶೇಖರ್, ಡಾ.ಶಶಿಕಲಾ, ಮುಖಂಡರಾದ ವಸಂತ್‌ಕುಮಾರ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.

ರಕ್ತದಾನದಿಂದ ಹಲವು ಆರೋಗ್ಯ ಸಮಸ್ಯೆಗಳು ದೂರ: ವಿನೋದ್

ಕಿಕ್ಕೇರಿ:ರಕ್ತದ ಅವಶ್ಯಕತೆ ಇದ್ದು ಜೀವನ್ಮರಣ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವುದು ಎಲ್ಲ ದಾನಗಳಿಂದ ಶ್ರೇಷ್ಠ ದಾನವಾಗಿದೆ ಎಂದು ಅರ್ಜುನ ಪ್ರಶಸ್ತಿ ಕ್ರೀಡಾಪಟು ಕಿಕ್ಕೇರಿ ಮುಖ್ಯ ಪೇದೆ ವಿನೋದ್‌ ತಿಳಿಸಿದರು.

ಪಟ್ಟಣದಲ್ಲಿ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಹಾಗೂ ಅಭಿಮಾನಿ ಬಳಗದವರು ನಾಡಪ್ರಭು ಕೆಂಪೇಗೌಡ ಜಯಂತಿ ಸ್ಮರಣಾರ್ಥವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಆರೋಗ್ಯವಂತರು ರಕ್ತದಾನವನ್ನು ಯಾವುದೇ ಭಯವಿಲ್ಲದೆ ನೀಡಬಹುದು ಎಂದರು.ರಕ್ತದಾನ ಮಾಡಿದಷ್ಟು ಹೊಸದಾಗಿ ರಕ್ತ ಶೇಖರಣೆಯಾಗಲಿದೆ. ಬಡವ, ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲ ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಕೊಬ್ಬು ನಿವಾರಣೆ, ಜ್ಞಾಪಕ ಶಕ್ತಿ ವೃದ್ಧಿ, ಹೃದಯ ಸಂಬಂಧಿ ಸಮಸ್ಯೆ ದೂರವಾಗಲಿದೆ. ಅಪಘಾತ, ಡೆಂಘೀ, ಶಸ್ತ್ರಚಿಕಿತ್ಸೆಯಂತಹ ತುರ್ತು ಸಮಯದಲ್ಲಿ ರಕ್ತದ ಅವಶ್ಯಕತೆ ಇದೆ ಎಂದರು.

ಕ್ರೀಡಾಪಟುವಾಗಿ ಆರಕ್ಷಕ ಇಲಾಖೆಯಲ್ಲಿ ಸೇವೆ ಮಾಡುತ್ತಿದ್ದು, ಅಪಘಾತ ಮತ್ತಿತರ ವೇಳೆ ಸಾಕಷ್ಟು ಸಾವು ನೋವು ಕಂಡಿರುವೆ. ರಕ್ತದ ಮಹತ್ವ ಬಹಳವಿದ್ದು, ರಕ್ತದಾನ ಮಾಡುವವರು ಜೀವ ರಕ್ಷಕರಾಗಿ ಜೀವ ಉಳಿಸಿದ ಸಂತೃಪ್ತಿ ತಮಗೆ ಸಿಗಲಿದೆ ಎಂದು ರಕ್ತದಾನಿಗಳಿಗೆ ತಿಳಿ ಹೇಳಿದರು.ಮುಖಂಡ ವಡಕಹಳ್ಳಿ ರಾಜೇಶ್ ಮಾತನಾಡಿದರು. ಇದೇ ವೇಳೆ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಉಚಿತವಾಗಿ ತೆಂಗಿನಗಿಡ ವಿತರಿಸಲಾಯಿತು. ಮುಖಂಡರಾದ ಕಡಹೆಮ್ಮಿಗೆರಮೇಶ್, ಗಂಗೇನಹಳ್ಳಿ ರಘು, ವಡಕಹಳ್ಳಿ ಶಿವು, ರಾಜೇಶ್, ವೆಂಕಟೇಶ್, ಮಂಜು, ಪೃಥ್ವಿ, ಯೋಗೇಶ್, ರಾಕೇಶ್, ನವೀನ್, ಅರ್ಜುನ್‌ ಉಪಸ್ಥಿತರಿದ್ದರು.