ಸಾರಾಂಶ
ಗದಗ: ಬಿಸಿಲು ಏರಿದಂತೆ ಕರ್ನಾಟಕದಲ್ಲಿ ಬೆಲೆ ಏರಿಕೆ, ತೆರಿಗೆ ಏರಿಕೆ ಆಗ್ತಿದೆ ಎಂದು ವಿಪ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರಿಗೆ, ಬೆಲೆ ಏರಿಕೆ ದಾಳಿ ನಡೀತಾ ಇದೆ. ಮಾನವೀಯತೆ ಇಲ್ಲದ ಸಿದ್ದರಾಮಯ್ಯ ಸರ್ಕಾರ ಮನುಷ್ಯತ್ವ ಇದ್ದರೆ, ಬೆಲೆ ಏರಿಕೆ, ತೆರಿಗೆ ಏರಿಕೆ ನಿಲ್ಲಿಸಬೇಕು.ಯಾವ ಸಮುದಾಯಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿವೆ ಅನ್ನೋದಕ್ಕೆ ನಿಮಗೆ ಮೂಲ ಡಾಟಾ ಎಲ್ಲಿದೆ. ಮೂಲ ಪ್ರತಿ ಕಳೆದು ಹೋಗಿದೆ ಅಂತಾ ಹೇಳ್ತಾ ಇದ್ದಾರೆ. ಮೂಲ ಪ್ರತಿ ಇಲ್ಲದೇ ನೀವು ಹೇಗೆ ಅಧ್ಯಯನ ವರದಿ ಕೊಡ್ತೀರಿ. ಅದಕ್ಕಾಗಿ ಮಂತ್ರಿಗಳು ಅಷ್ಟೇ ಓದಿಕೊಂಡು ಚರ್ಚೆ ಮಾಡ್ತಾ ಇದ್ದೀರಾ. ಶಾಸಕರಿಗೆ ಕೊಡ್ತಾ ಇಲ್ಲವಾ? ಕಾಂತರಾಜು ವರದಿ, ಜಯಪ್ರಕಾಶ್ ಹೆಗಡೆ ವರದಿ ಯಾರ ವರದಿ ಅನ್ನೋದರ ಬಗ್ಗೆ ಜನ ತಿಳಿದುಕೊಳ್ಳಬೇಕು, ನೀವು ಪಕ್ಕಾ ಹೇಳಿ ಯಾರ ವರದಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವರ್ಷದಲ್ಲಿ ಒಂದು ಲೀ. ಹಾಲಿಗೆ 9 ರುಪಾಯಿ ಬೆಲೆ ಹೆಚ್ಚಿಗೆ ಮಾಡಿದ್ದು, ಸಿದ್ದರಾಮಯ್ಯ ಸರ್ಕಾರದಲ್ಲಿ ದಾಖಲೆ. ಸಿದ್ದರಾಮಯ್ಯ ಮಾನವೀಯತೆ ಪರ ಅಂದುಕೊಂಡಿದ್ದೆ, ಮನುಷ್ಯತ್ವದ, ಮಾನವೀಯತೆಯ ವಿರೋಧಿ. ಕರ್ನಾಟಕದಲ್ಲಿ ಅಲ್ಪಸಂಖ್ಯಾತರಿಗೆ ಎಷ್ಟು ಸವಲತ್ತು ಕೊಡೋದಕ್ಕೆ ಹೋಗ್ತೀರಾ ಹಿಂದುಗಳಲ್ಲಿ ಬಡವರಿಲ್ಲವಾ? ಹಿಂದುಗಳಲ್ಲಿ ಉನ್ನತ ಶಿಕ್ಷಣ ಪಡೆಯಬಾರದಾ? ವಿದೇಶಕ್ಕೆ ಓದೋಕೆ ಹೋಗೊ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವರ್ಷಕ್ಕೆ 30 ಲಕ್ಷ ಕೊಡ್ತೀರಿ ಹಿಂದು ವಿದ್ಯಾರ್ಥಿಗಳಿಗೆ ಚಿಪ್ಪು ಕೊಡ್ತೀರಾ? ಎಂದರು.ನ್ಯಾಷನಲ್ ಹೆರಾಲ್ಡ್ ಕೇಸ್''''''''ನಲ್ಲಿ ತನಿಖೆ ನಡೆಯಬೇಕೋ, ಬೇಡವೋ, ಇಡಿ ತನಿಖೆ ನಡೆಸ್ತಿದೆ. ಸಂವಿಧಾನದ ಮೇಲೆ, ಇಡಿ, ಸಿಬಿಐ ಮೇಲೆ ನಂಬಿಕೆ ಇದ್ದರೆ ತನಿಖೆ ಮಾಡಿಸಲಿ.
ನಿಮ್ಮ ಸರ್ಕಾರ ಅವಧಿಯಲ್ಲೂ ತನಿಖೆ ನಡೆದಿದೆ, ಇದೇ ಮೊದಲ ಬಾರಿ ಅಲ್ವಲ್ಲಾ. ಯುಪಿಎ ಸರ್ಕಾರ ಇದ್ದಾಗಲೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ನೋಟಿಸ್ ಹೋಗಿದೆ. ಎನ್‌ಡಿಎ ಸರ್ಕಾರ ಇದ್ದಾಗ ಮಾತ್ರ ನೋಟಿಸ್ ಹೋಗಿಲ್ಲ. ನ್ಯಾಯಾಲಯದ ಬಗ್ಗೆ ನಿಮಗೆ ಗೌರವ ಇದ್ದರೆ ವಿರೋಧ ಮಾಡಬೇಡಿ, ನ್ಯಾಯಾಲಯದ ತೀರ್ಪು ಏನ್ ಬರುತ್ತೆ ಅದನ್ನ ನಾನು ಒಪ್ಪಿಕೊಳ್ಳುತ್ತೆನೆಂದರು.ವಿದೇಶದಲ್ಲಿ ರಾಹುಲ್ ಟೀಕೆ ವಿಚಾರವಾಗಿ ಪ್ರತಿಕ್ರಿಯೆಸಿದ ಅವರು, ಎಲೆಕ್ಷನ ಕಮಿಷನ್ ಬಗ್ಗೆ ಭಾರತದಲ್ಲಿ ಟೀಕೆ ಮಾಡಲ್ಲ, ವಿದೇಶದಲ್ಲಿ ಏನೂ ಗೊತ್ತಿರಲ್ಲ, ಅಲ್ಲಿ ಹೋಗಿ ರಾಹುಲ್ ಗಾಂಧಿ ಟೀಕೆ ಮಾಡ್ತಾರೆ. ಭಾರತದ ವಿಷಯಗಳನ್ನು ಭಾರತ ನೆಲದಲ್ಲಿ ಚರ್ಚೆ ಮಾಡಿ. ಯಾವುದೇ ವಿಷಯದ ಗಂಧ ಗಾಳಿ ಗೊತ್ತಿಲ್ಲದ ರಾಹುಲ್ ಗಾಂಧಿ ಕಾಂಗ್ರೆಸ್‌ನಲ್ಲಿ ಇರುವುದು ಬಿಜೆಪಿಗೆ ಲಾಭ. ರಾಹುಲ್ ಗಾಂಧಿ ಆಲ್ ಇಂಡಿಯಾ ಪ್ರೆಸಿಡೆಂಟ್ ಆಗಲಿ ಕಾಂಗ್ರೆಸ್ ನಲ್ಲಿ ಇರಲಿ ಅವರು ಇದ್ದಷ್ಟು ಒಳ್ಳೆಯದು ಎಂದರು.