ಸಾರಾಂಶ
ಕನ್ನಡಪ್ರಭ ವಾರ್ತೆ, ಹನೂರು
ಹುಬ್ಬೆ ಹುಣಸೆ ಕೆರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಾವರಿ ಯೋಜನೆಗಳನ್ನು ರೂಪಿಸಲು ಹಾಗೂ ನಾಲಾ ರಾಡಿ ಮತ್ತು ಗಿಡಗಂಟಿಗಳು ತೆರವುಗೊಳಿಸಿ, ರೈತರಿಗೆ ಬರ ಬೇಕಾಗಿರುವ ಪರಿಹಾರ ಹಣ ನೀಡಲು ಡಿಸಿ ಮುಖಾಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.ಸಮೀಪದ ಉದ್ದನೂರು ಗ್ರಾಮದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿ, ಹುಬ್ಬೆ ಹುಣಸೆ ಕೆರೆಗೆ ನೀರು ತುಂಬಿಸುವ ಯೋಜನೆಗೆ 9.8 ಕಿ.ಮೀ. ಪೈಪ್ ಲೈನ್ ಕಾಮಗಾರಿ, ನಾಲೆಗಳ ದುರಸ್ತಿಗೆ ನೀಡಿದ ಜಮೀನಿಗೆ ಪರಿಹಾರ ಉಳಿಕೆ ಇರುವ ರೈತರಿಗೆ ನೇರ ಖರೀದಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಡಿಸಿ ಸಮ್ಮುಖದಲ್ಲಿ 18 ಕೋಟಿ ರು. ವೆಚ್ಚದಲ್ಲಿ ಜಲಾಶಯಕ್ಕೆ ಕಾವೇರಿ ನದಿಯಿಂದ ಬೂದು ಬಾಳು ಗ್ರಾಮದ ಬಳಿ ಬರುವ ಡೆಲಿವರಿ ಪಾಯಿಂಟ್ ಕಾಮಗಾರಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ರೈತರಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಲೋಚನೆ ಮಾಡಿ ನೀರಾವರಿ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ಅನುದಾನದ ಕೊರತೆ ಇದೆ. ಹಾಗಾಗಿ ಹುಬ್ಬೆ ಹುಣಸೆ ಅಚ್ಚು ಕಟ್ಟು ಪ್ರದೇಶ ರೈತರಿಗೆ ಹಾಗೂ ಹನೂರು ಸೇರಿದಂತೆ ನೀರಾವರಿ ಯೋಜನೆಯನ್ನು ಡ್ರೈ ಲ್ಯಾಂಡ್‌ವರೆಗೂ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ರಾಮನಗುಡ್ಡ ಕೆರೆಗೆ ನೀರಾವರಿ ಯೋಜನೆ:
ಬಹುನಿರೀಕ್ಷಿತ ರಾಮನಗುಡ್ಡ ಕೆರೆ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೂತ್ಬಾಳ್ ಡೆಲಿವರಿ ಪಾಯಿಂಟ್‌ನಿಂದ 1.46 ಕಿ.ಮೀ ಪೈಪ್‌ಲೈನ್ ಕಾಮಗಾರಿಗೆ ₹2.50 ಕೋಟಿ ಬಂದಿದೆ. ಟೆಂಡರ್ ಕರೆಯಲು ನೀರಾವರಿ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತಿದೆ ಎಂದರು.ಪತ್ರ ವ್ಯವಹಾರದ ಜೊತೆಗೆ ನೀರಾವರಿ ಯೋಜನೆಗೆ ಮಂಜೂರಾತಿ ಸಿಗುವ ಭರವಸೆ ಇದೆ. ರಾಮನಗುಡ್ಡ ಕೆರೆ ನೀರಾವರಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಸುತ್ತಮುತ್ತ ರೈತರ, ಸರ್ಕಾರಿ ಜಾಗಗಳು ಎಲ್ಲೆಲ್ಲಿದೆ ಎಂಬುದನ್ನು ಗುರುತು ಮಾಡಲಾಗುವುದು. ಅಂತಹ ಸ್ಥಳದಲ್ಲಿ ಕೆರೆ ನಿರ್ಮಾಣ ಮಾಡಿ ರೈತರಿಗೆ ಅಂತರ್ಜಲ ವೃದ್ಧಿಸಲು ನೀರಾವರಿ ಯೋಜನೆಗೆ ನೀಲನಕ್ಷೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ;ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ರಸ್ತೆಗಳ ಅಭಿವೃದ್ಧಿ ಆಗದೆ ನೆನೆಗುದಿಗೆ ಬಿದ್ದಿದೆ. ಗರಿಕೆ ಖಂಡಿ, ಬಂಡಳ್ಳಿ ರಸ್ತೆ ಹಾಗೂ ಹನೂರಿನಿಂದ ರಾಮಾಪುರ ಸೇರಿದಂತೆ ನಾಲ್ ರೋಡ್ ಹೊರಗೆ ಹಾಗೂ ತಾಲೂಕಿನ ವಿವಿಧಡೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿಗಳ ಕಾಮಗಾರಿಗೆ ₹220 ಕೋಟಿ ಅನುದಾನವನ್ನು ವಿನಿಯೋಗಿಸಲಾಗಿದೆ ಎಂದರು.
ಸೋಲಾರ್ ಪ್ಲಾಂಟ್ ಗೆ ವ್ಯವಸ್ಥೆ:18 ರಿಂದ 20 ಮೆಗಾ ವಾಟ್ ವಿದ್ಯುತ್ ಉತ್ಪಾದಿಸಲು ಟೆಂಡರ್ ಪ್ರಕ್ರಿಯೆ ಕಾರ್ಯಕ್ರಮಗಳು ಮುಗಿದಿದೆ. ಹೆಚ್ಚಿನ ವಿದ್ಯುತ್ ಉತ್ಪಾದನೆಗೆ 500 ಎಕರೆ ಜಮೀನು ನೀಡಲು ಗುರುತು ಮಾಡಲಾಗುತ್ತಿದೆ. ತಾಲೂಕಿನ ರೈತರಿಗೆ ಹಗಲಿನಲ್ಲಿ ನೀರು ಜಮೀನಿನಲ್ಲಿ ಹಾಯಿಸಲು ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹುಲುಸುಗುಡ್ಡೆ ಬಳಿ ಪ್ರಜಾಸೌಧ ನಿರ್ಮಾಣ, ಕೋರ್ಟ್, ವಿವಿಧ ಸರ್ಕಾರಿ ಕಟ್ಟಡ, ಹನೂರಿನ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಗುಂಡಲ್ ಜಲಾಶಯ ವ್ಯಾಪ್ತಿಯಲ್ಲಿ 15,000 ಎಕರೆ, ಒಬ್ಬೆ ಹುಣಸೆ ಕೆರೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 967 ಎಕರೆ, ತಳೂರು ಕೆನಾಲ್ ಭಾಗದಲ್ಲಿ 7382 ಎಕರೆ ಒಟ್ಟಾರೆ 45,000 ಎಕರೆ ಪ್ರದೇಶದಲ್ಲಿ ನೀರಾವರಿ ಯೋಜನೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲು ₹330 ಕೋಟಿ ಅನುದಾನ ಬೇಕು ಎಂದರು.ಕಾವೇರಿ ನೀರಾವರಿ ನಿಗಮದ ಎಇಇ ರಾಮಕೃಷ್ಣ ಮಾತನಾಡಿ, ಹುಬ್ಬೆ ಉಣಸೆ ಜಲಾಶಯ ಸೇರಿದಂತೆ ರಾಮನಗುಡ್ಡ ಕೆರೆ ಹಾಗೂ ಗುಂಡಾಲ್ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ರೈತರಿಗೆ ನೀರಾವರಿ ಯೋಜನೆ ಕಲ್ಪಿಸಲು ಇಲಾಖೆಯಿಂದ ಇದ್ದ ಅನುದಾನ ಬಳಸಿಕೊಂಡು ಉಳಿದಂತೆ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್ ಮಾತನಾಡಿ, ಹುಬ್ಬೆ ಹುಣಸೆ ಕೆರೆ ನಿರ್ಮಾಣ ಆಗಿ 2 ತಲೆಮಾರುಗಳು ಕಳೆಯುತ್ತಿದೆ. 3ನೇ ತಲೆಮಾರಿಗೆ ಬರಗಾಲದಿಂದ ತತ್ತರಿಸಿರುವ ರೈತನಿಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ಸದಾಶಿವಮೂರ್ತಿ, ಪ್ರಕಾಶ್, ಮಾದಪ್ಪ, ರಾಜುಗೌಡ, ವಿಜಯಕುಮಾರ್, ಉದ್ನೂರ್ ಗಿರೀಶ್, ಶಾಗ್ಯ, ಬಾಬಣ್ಣ, ಚಿನ್ನಪ್ಪನಾಯ್ಡು ಭಾಗವಹಿಸಿದ್ದರು.