ಸಾರಾಂಶ
ಸಂವಿಧಾನ ಉಳಿಸಿ ಪರಿಸರ ಸಂರಕ್ಷಿಸಿ, ಬಹುರಾಷ್ಟ್ರೀಯ ಕಂಪನಿಗಳ ಲೂಟಿಕೋರ ನೀತಿಯನ್ನು ಕೈಬಿಡಿ ಎಂದು ಒತ್ತಾಯಿಸಿ ಕರ್ನಾಟಕ ಪ್ರಗತಿಪರ ಸಂಘಟನೆ ಜಿಲ್ಲಾ ಘಟಕ ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಸಂವಿಧಾನ ಉಳಿಸಿ ಪರಿಸರ ಸಂರಕ್ಷಿಸಿ, ಬಹುರಾಷ್ಟ್ರೀಯ ಕಂಪನಿಗಳ ಲೂಟಿಕೋರ ನೀತಿಯನ್ನು ಕೈಬಿಡಿ ಎಂದು ಒತ್ತಾಯಿಸಿ ಕರ್ನಾಟಕ ಪ್ರಗತಿಪರ ಸಂಘಟನೆ ಜಿಲ್ಲಾ ಘಟಕ ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಭಾರೀ ಬಂಡವಾಳಗಾರರಿಂದ ಹಾಗೂ ಭೂಗಳ್ಳರಿಂದ ಪ್ರಕೃತಿ ರಕ್ಷಿಸಿ, ಪರಿಸರ ತಜ್ಞ ಡಾ. ಮಾಧವ್ ಗಾಡ್ಗೀಳ್‌ರವರ ವೈಜ್ಞಾನಿಕ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಿ ಕೊಡಗು, ಜಿಲ್ಲೆಯ ಮಲೆನಾಡು ಭಾಗದಲ್ಲಿ, ಕೇರಳದ ವಯನಾಡಿನಲ್ಲಿ ಭೂ ಕುಸಿತದ ದುರಂತಗಳು ಸಂಭವಿಸದಂತೆ ಎಚ್ಚರವಹಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಜೀವನೋಪಾಯಕ್ಕಾಗಿ ಸಾಗುವಳಿ ಮಾಡಿದ ಬಡ ಸಾಗುವಳಿದಾರರನ್ನು ಹೊರತುಪಡಿಸಿ, ಭಾರೀ ಭೂಮಾಲಿಕ ಒತ್ತುವರಿ ದಾರರನ್ನು ತೆರವುಗೊಳಿಸಿ ಅರಣ್ಯ ಮತ್ತು ಕಂದಾಯ ಭೂಮಿ ಜಂಟಿ ಸರ್ವೆ ನಡೆಸಿ ಗಡಿ ಗುರುತಿಸಿ ಗೊಂದಲಕ್ಕೆ ತೆರೆ ಎಳೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಗಿರಿ ಪ್ರದೇಶ ಮತ್ತು ಮುಳ್ಳಯ್ಯನಗಿರಿ ಸುತ್ತಮುತ್ತ ಹೋಂಸ್ಟೇ, ರೆಸಾರ್ಟ್, ಕಲ್ಲುಗಣಿಗಾರಿಕೆ, ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬಾರದು. ಈಗಾಗಲೇ ನೀಡಿರುವ ಅನುಮತಿಯನ್ನು ಕೂಡಲೇ ರದ್ದುಪಡಿಸಬೇಕು ಹಾಗೂ ಯಾವುದೇ ಪರಿಸರ ವಿರೋಧಿ ಚಟುವಟಿಕೆಗಳಿಗೆ ಅನುಮತಿ ನೀಡಬಾರದು ಎಂಬ ಈ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನೆ ನೇತೃತ್ವವನ್ನು ಕರ್ನಾಟಕ ಪ್ರಗತಿಪರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಉಮೇಶ್ ಕುಮಾರ್, ಸದಸ್ಯರಾದ ಸುರೇಶ್, ಪೂರ್ಣೇಶ್, ಹಂಪಯ್ಯ, ಪ್ರೇಂಕುಮಾರ್, ನಿಂಗಯ್ಯ, ಸುರೇಶ್ ಗಾಳಿಪೇಟೆ, ಸುಂದ್ರೇಶ್, ಗುರುವಯ್ಯ, ಪದ್ಮನಾಭ, ಲಕ್ಷ್ಮಣ್ ಹುಣಸೇಮಕ್ಕಿ ವಹಿಸಿದ್ದರು.