ಸಾರಾಂಶ
ಕನ್ನಡಪ್ರಭ ವಾರ್ತೆ ಕಮತಗಿತಂದೆ ತಾಯಿಗಳ ಕನಸನ್ನು ನನಸು ಮಾಡಲು ಮಕ್ಕಳು ಕಷ್ಟಪಟ್ಟು ಓದಿ ಒಳ್ಳೆಯ ಫಲಿತಾಂಶ ಪಡೆಯುವ ಮೂಲಕ ಉನ್ನತ ಹುದ್ದೆಗೇರಬೇಕು. ಇದರಿಂದ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ವಿಜಯಪೂರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಜಶೇಖರ ಬೆನಕನಹಳ್ಳಿ ಹೇಳಿದರು.ಪಟ್ಟಣದ ಹುಚ್ಚೇಶ್ವರ ಕಾಲೇಜಿನಲ್ಲಿ ನಡೆದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಬಿಎ ಮತ್ತು ಬಿಕಾಂ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡೆ, ಸಾಂಸ್ಕೃತಿಕ, ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ತಂದೆ ತಾಯಿಗಳು ಮಕ್ಕಳ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಕಂಡಿರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಅವರ ಕನಸನ್ನು ಈಡೇರಿಸಬೇಕು ಎಂದರು.ಸಾನಿಧ್ಯ ವಹಿಸಿದ್ದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹುಚ್ಚೇಶ್ವರ ಮಹಾಸ್ವಾಮಿಜಿ, ಅಧ್ಯಕ್ಷತೆಯನ್ನು ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿ ವಿದ್ಯಾಧರ ಮಳ್ಳಿ, ಸಂಘದ ನಿರ್ದೇಶಕರಾದ ಅನಿಲಕುಮಾರ ಎಸ್ ಹುಚ್ಚೇಶ್ವರಮಠ, ಆರ್.ಎಸ್.ಭಾಪ್ರಿ, ಎಸ್.ಜಿ.ಗುರಿಕಾರ, ಆಢಳಿತಾಧಿಕಾರಿ ಎ.ಎಸ್.ಕಲ್ಯಾಣಶೆಟ್ಟಿ, ಕಾಲೇಜಿನ ಪ್ರಾಚಾರ್ಯ ಪಿ.ಎಂ.ಗುರಿವಿನಮಠ, ಉಪನ್ಯಾಸನಕಾರದ ಡಿ.ಆರ್.ಕುಬಸದ, ಎಸ್.ಎಂ.ಶೆಟ್ಟರ, ಎನ್.ಪಿ.ಹುಲಮನಿಗೌಡ್ರ, ಎಂ.ಎಂ.ಲಾಯದಗುಂದಿ, ವೈ.ಎಚ್.ಕಂಬಳಿ, ಎಂ.ಎಂ.ಪಾಟೀಲ, ಕೆ.ಜಿ.ಅಂಗಡಿ, ಜೆ.ಎಸ್.ಬಾದವಾಡಗಿ, ಅಮೃತಾ ಪುರಾಣಿಕಮಠ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.