ಸಾರಾಂಶ
ಮುಂಡರಗಿ: ಪ್ರಥಮದರ್ಜೆ ಕಾಲೇಜುಗಳು ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಸರ್ಕಾರ ಇದುವರೆಗೂ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳದೇ ವಿಳಂಬ ನೀತಿ ಅನುಸರಿಸುತ್ತಿದ್ದು, ತಕ್ಷಣವೇ ನೇಮಕ ಮಾಡಬೇಕೆಂದು ತಾಲೂಕು ಎಬಿವಿಪಿ ಕಾರ್ಯಕರ್ತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ಪಟ್ಟಣದ ಕೊಪ್ಪಳ ವೃತ್ತದಿಂದ ಪ್ರತಿಭಟನೆ ಪ್ರಾರಂಭಿಸಿ ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಕೆಲವೇ ತಿಂಗಳು ಕಳೆದರೆ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾಗಲಿವೆ. ಮುಂಡರಗಿ ಪ್ರಥಮದರ್ಜೆ ಕಾಲೇಜಿನಲ್ಲಿ ದಿನಕ್ಕೆ ಒಂದು ಕ್ಲಾಸು ನಡೆಯುವುದೇ ಹೆಚ್ಚು. ವಿದ್ಯಾರ್ಥಿಗಳು ಪ್ರತಿದಿನ ಕಾಲೇಜಿಗೆ ಬಂದು ಕ್ಯಾಂಪಸಿನಲ್ಲಿ ಕುಳಿತುಕೊಂಡು ಹೋಗುವುದಾಗಿದೆ.
ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಜೀವನದ ಜತೆ ಆಟವಾಡುತ್ತಿದೆ. ಕೂಡಲೇ ಅತಿಥಿ ಉಪನ್ಯಾಸಕರನ್ನು ನೇಮಿಸಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡದಿದ್ದರೆ ಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಗ್ರೇಡ್ 2 ತಹಸೀಲ್ದಾರ್ ರಾಧಾ ಕೆ. ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಚಂದು ಪೂಜಾರ, ನಗರ ಸಹಕಾರ್ಯದರ್ಶಿ ಭದ್ರಿನಾಥ ಅಂಗಡಿ, ಸುದೀಪ, ಮುತ್ತುರಾಜ, ಸ್ವಾತಿ, ಬಸು, ಆಕಾಶ, ಭರತ್, ಐಶ್ವರ್ಯ, ಸಂತೋಷ, ಅನಿಲ್, ವಿಶ್ವ, ಸಚಿನ್, ಅರ್ಜುನ್, ರಾಮ, ಆಕಾಶ್, ಭಾರತ, ಮನೋಜ್, ಕಾರ್ತಿಕ್, ಕಿರಣ್, ಮಮತಾ, ಅಶ್ವಿನಿ, ಅಪ್ಸಾನಾ, ಮರಿಗೌಡ, ಅಮೃತ, ಪ್ರಿಯಾಂಕ ಉಪಸ್ಥಿತರಿದ್ದರು.ನಾಳೆಯಿಂದ ಉಚಿತ ಲಸಿಕಾ ಕಾರ್ಯಕ್ರಮ
ನರಗುಂದ: ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಆಶ್ರಯದಲ್ಲಿ ಪಟ್ಟಣದ ಪಶು ಆಸ್ಪತ್ರೆ ಹಾಗೂ ಅದರ ಅಧೀನ ಸಂಸ್ಥೆಗಳಲ್ಲಿ ನಾಯಿ ಹಾಗೂ ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮವನ್ನು ಸೆ. 28ರಿಂದ ಅ. 28ರ ವರೆಗೆ ಹಮ್ಮಿಕೊಳ್ಳಲಾಗಿದೆ. ಶ್ವಾನಪ್ರಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮುಖ್ಯ ಪಶುವೈದ್ಯಾಧಿಕಾರಿ ಡಾ. ಸಂತೋಷ ಕರೆಭರಮಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.