ದಸರಾ ಚಲನಚಿತ್ರೋತ್ಸವ ಅರ್ಥಪೂರ್ಣ-ಕುಲಪತಿ ಪ್ರೊ. ಭಾಸ್ಕರ್

| Published : Sep 27 2025, 12:01 AM IST

ದಸರಾ ಚಲನಚಿತ್ರೋತ್ಸವ ಅರ್ಥಪೂರ್ಣ-ಕುಲಪತಿ ಪ್ರೊ. ಭಾಸ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವಿದ್ಯಾಲಯದಲ್ಲಿ ಪರದೆ ಸಿನೆಮಾ ವೇದಿಕೆಯಿಂದ ಎರಡು ದಿನಗಳ ಕಾಲ ವಿದ್ಯಾರ್ಥಿಗಳ ಮಧ್ಯ ನಡೆದ ದಸರಾ ಚಲನಚಿತ್ರೋತ್ಸವ ಅರ್ಥಪೂರ್ಣವಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ ಎಂ. ಭಾಸ್ಕರ್ ಹೇಳಿದರು.

ಶಿಗ್ಗಾಂವಿ: ವಿಶ್ವವಿದ್ಯಾಲಯದಲ್ಲಿ ಪರದೆ ಸಿನೆಮಾ ವೇದಿಕೆಯಿಂದ ಎರಡು ದಿನಗಳ ಕಾಲ ವಿದ್ಯಾರ್ಥಿಗಳ ಮಧ್ಯ ನಡೆದ ದಸರಾ ಚಲನಚಿತ್ರೋತ್ಸವ ಅರ್ಥಪೂರ್ಣವಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ ಎಂ. ಭಾಸ್ಕರ್ ಹೇಳಿದರು.ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪರದೆ ಸಿನೆಮಾ ವೇದಿಕೆಯಿಂದ ಎರಡು ದಿನಗಳ ಕಾಲ ಆಯೋಜಿಸಲಾದ ದಸರಾ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಿನೆಮಾಗಳು ಸಾಮಾಜಿಕ ಸಂದೇಶ ಸಾರಲಿವೆ, ಜನಾಭಿಪ್ರಾಯ ರೂಪಿಸುವ ಶಕ್ತಿಶಾಲಿ ಮಾಧ್ಯಮ ಈ ಮೂಲಕ ಸದಭಿರುಚಿ ಸಿನೆಮಾಗಳ ಪ್ರದರ್ಶನ ಅತ್ಯಂತ ಸಾರ್ಥಕವಾಗಿದೆ. ಇದನ್ನು ಆಗು ಮಾಡಿದ ಪತ್ರಿಕೋದ್ಯಮ ವಿಭಾಗ ಇನ್ನಷ್ಟು ಸಮೃದ್ಧವಾಗಲಿ ಎಂದರು.ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ವೆಂಕನಗೌಡ ಪಾಟೀಲ ಅವರು ದಸರಾ ಚಲನಚಿತ್ರೋತ್ಸವದ ಎರಡನೇ ದಿನ ಪ್ರದರ್ಶನಗೊಂಡ ಸಿನೆಮಾಗಳ ಕುರಿತು ಮಾತನಾಡಿ, ಸಿನೆಮಾ ಎಂದರೆ ಕೇವಲ ಮನರಂಜನೆಗಲ್ಲ, ಅದು ಸಮಾಜದ ಬದಲಾವಣೆ, ಅಭಿಪ್ರಾಯ ರೂಪಿಸುವಿಕೆ ಹಾಗೂ ಸಂಸ್ಕೃತಿ ಪರಿಚಯಿಸುವ ಶಕ್ತಿಯ ಸಾಧನವಾಗಿದೆ. ವಿಶೇಷವಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಿನೆಮಾ ಕಥನ ಕೌಶಲ್ಯ, ದೃಶ್ಯ ಸಂವೇದನೆ ಮತ್ತು ಸಮಾಜದ ಅಳಲು, ಅಭಿಪ್ರಾಯಗಳನ್ನು ತಿಳಿಯುವ ಸೂಕ್ತ ಮಾಧ್ಯಮವಾಗಿದೆ ಎಂದರು.ಸಂವಾದದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಬಂಡುಸುರೇಶ ಕೆಂಪವಾಡೇಕರ, ಡಾ. ಶಂಕರ ಕುಂದಗೋಳ, ಡಾ.ಉತ್ತಮ ಕೆ.ಎಚ್., ಸಾಹಿದಾ ಖಾದ್ರಿ, ಡಾ.ಸುವರ್ಣ ಶೃಂಗೇರಿ ಅಭಿಪ್ರಾಯ ಹಂಚಿಕೊಂಡರು.ಈ ಸಂದರ್ಭದಲ್ಲಿ ಕುಲಸಚಿವರಾದ ಪ್ರೊ.ಸಿ.ಟಿ. ಗುರುಪ್ರಸಾದ್, ಮೌಲ್ಯಮಾಪನ ಕುಲಸಚಿವರಾದ ಡಾ. ಶಿವಶಂಕರ್ ಕೆ., ಹಿರಿಯ ಸಂಶೋಧನಾಧಿಕಾರಿ ಡಾ. ಕೆ. ಪ್ರೇಮಕುಮಾರ್, ಗ್ರಂಥಪಾಲಕ ಡಾ. ರಾಜಶೇಖರ ಕುಂಬಾರ, ಸಹಾಯಕ ಗ್ರಂಥಪಾಲಕ ಶಂಕರಗೌಡ ಮಾಲೀಪಾಟೀಲ, ಸಹಾಯಕ ಪ್ರಾಧ್ಯಾಪಕ ಡಾ. ಗಿರೇಗೌಡ ಅರಳಿಹಳ್ಳಿ, ಡಾ. ಬಸವರಾಜ ಸಿ, ಡಾ.ಎಚ್. ಎಚ್. ನದಾಫ್, ಡಾ. ರಾಜಶೇಖರ ಸಿ.ಡಿ., ಹಣಮಂತರಾಯಗೌಡ, ಡಾ.ಅರುಣಬಾಬು ಅಂಗಡಿ, ಅಭಿನಯ ಎಚ್., ಡಾ.ರಜಿಯಾ ನದಾಫ್, ಶಿವಾನಂದ ದೊಡ್ಡಮನಿ, ಪ್ರೀತಮ್ ಬಾಯೆರ, ಲೇಖನ ಎಂ.ಯು. ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಪಾಲ್ಗೊಂಡಿದ್ದರು.ಅರ್ಥಪೂರ್ಣವಾಗಿ ನಡೆದ ಸಂವಾದದಲ್ಲಿ ಸಿನೆಮಾಗಳ ಕುರಿತು ವಿಶ್ಲೇಷಣೆ ನಡೆಯಿತು. ಕಥೆ ಹಂದರ, ಸಾಹಿತ್ಯ, ದೃಶ್ಯ ಸನ್ನಿವೇಶಗಳ ಕುರಿತು ಚರ್ಚೆಗಳು ಗಮನ ಸೆಳೆದವು.