ನವಲಗುಂದ:
ಕೇಂದ್ರ ಸರ್ಕಾರದ ಕಾರ್ಮಿಕ ಕಾಯ್ದೆ ಸಂಹಿತೆ ರದ್ದುಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲಿಸಿ ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಕಾರ್ಮಿಕ ಸಂಹಿತೆಗಳು ಕಾರ್ಮಿಕ ವಿರೋಧಿಗಳಾಗಿವೆ. ಇವುಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ವಿವಿಧ ಸ್ಕಿಂಗಳಲ್ಲಿ ದುಡಿಯುವ ಕೋಟ್ಯಂತರ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರಿಗೆ ಸರ್ಕಾರಿ ನೌಕರರ ಸ್ಥಾನಮಾನ ನೀಡಬೇಕು. ಅಲ್ಲಿಯ ವರೆಗೆ ಐಎಲ್‌ಒ ಶಿಫಾರಸಿನಂತೆ ಕಾರ್ಮಿಕರು ಎಂದು ಪರಿಗಣಿಸಿ, ಕನಿಷ್ಠ ವೇತನ ಮತ್ತು ಪಿಎಫ್, ಇಎಸ್‌ಐ, ನಿವೃತ್ತಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಉಪ ತಹಸೀಲ್ದಾರ್ ಗಣೇಶ ಚಳ್ಳಕೆರೆ ಮೂಲಕ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ನೇತೃತ್ವವನ್ನು ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಘಟಕ ವಹಿಸಿತ್ತು. ಅಧ್ಯಕ್ಷೆ ಸರೋಜಾ ಮಡಿವಾಳರ, ಕಾರ್ಯದರ್ಶಿ ಗೀತಾ ಸೂರ್ಯವಂಶಿ, ಶೋಭಾ ಕಿರಗಿ, ಚನ್ನವ್ವ ಶಿವಬಸಪ್ಪನವರ, ಮೈತ್ರಾ ಮಗೆನ್ನವರ, ರೇಖಾ ಗುಗ್ಗುರಿಮಠ, ಸುನಿತಾ ಚಲವಾದಿ, ಸುಮಿತ್ರಾ, ಸರೋಜಾ ಧಾರವಾಡ, ಯಾಶ್ಮಿನ್, ರಾಧಾ, ರೇಣುಕಾ, ಯಲ್ಲವ್ವ ಇದ್ದರು.