ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಮನೋರೋಗ ತಜ್ಞ ಡಾ. ವಿಶ್ವನಾಥ್ ಅಲಮೇಲ ಲಭ್ಯ

| Published : Mar 26 2024, 01:16 AM IST

ಸಾರಾಂಶ

ವಾರದ ಮೂರು ದಿನ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30 ಮತ್ತು ಮಧ್ಯಾಹ್ನ 3.30 ರಿಂದ ಸಂಜೆ 6.30ರ ವರೆಗೆ ಸಮಾಲೋಚನೆಗಳಿಗೆ ಲಭ್ಯವಿರುತ್ತಾರೆ.

ಕಾರ್ಕಳ: ಇಲ್ಲಿನ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಪ್ರತೀ ಮಂಗಳವಾರ, ಬುಧವಾರ ಮತ್ತು ಗುರುವಾರ ಮನೋರೋಗ ತಜ್ಞ ವೈದ್ಯ ಡಾ. ವಿಶ್ವನಾಥ್ ಅಲಮೇಲ ಲಭ್ಯರಿರುವರು.

ವಾರದ ಮೂರು ದಿನ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30 ಮತ್ತು ಮಧ್ಯಾಹ್ನ 3.30 ರಿಂದ ಸಂಜೆ 6.30ರ ವರೆಗೆ ಸಮಾಲೋಚನೆಗಳಿಗೆ ಲಭ್ಯವಿರುತ್ತಾರೆ. ಅಲ್ಲದೆ ಮೂತ್ರ ಶಾಸ್ತ್ರ ತಜ್ಞ ಡಾ.ವಿವೇಕ್ ಪೈ ಅವರು ಪ್ರತೀ ಸೋಮವಾರ ಮತ್ತು ಗುರುವಾರ ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ ಲಭ್ಯವಿರುತ್ತಾರೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ತಿಳಿಸಿದ್ದಾರೆ.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮನೋರೋಗ ತಜ್ಞರಾಗಿರುವ ಡಾ. ವಿಶ್ವನಾಥ್ ಅಲಮೇಲ, ಖಿನ್ನತೆ ಆತಂಕ, ನಡವಳಿಕೆ ಮತ್ತು ಭಾವನಾತ್ಮಕ ಅಸ್ವಸ್ಥತೆ, ಮತಿವಿಕಲ್ಪ, ಮಾನಸಿಕ ಒತ್ತಡ, ತಿನ್ನುವ ಅಸ್ವಸ್ಥತೆ, ಸ್ಕಿಜೋಫ್ರೇನಿಯಾ, ಮದ್ಯ, ಗಾಂಜಾ ಮತ್ತು ಮಾದಕ ವ್ಯಸನಿಗಳಿಗೆ ಚಿಕಿತ್ಸೆ, ನಿದ್ರೆಯ ತೊಂದರೆಗಳು, ಲೈಂಗಿಕ ಸಮಸ್ಯೆಗಳು, ಪ್ಯಾನಿಕ್ ಅಟ್ಯಾಕ್, ವೃದ್ಧಾಪ್ಯದಲ್ಲಿ ಮೆಮೊರಿ ಸಮಸ್ಯೆಗಳು, ಮಕ್ಕಳಲ್ಲಿ ಹಾಸಿಗೆ ಒದ್ದೆ ಮಾಡುವುದು, ಗಮನ ಕೊರತೆ (ಹೈಪರ್‌ಆಕ್ಟಿವ್ ಡಿಸಾರ್ಡರ್), ಆಟಿಸಂ, ಸ್ಪೆಕ್ಟ್ರಮ್ ಡಿಸಾರ್ಡರ್, ಮಕ್ಕಳಲ್ಲಿ ವರ್ತನೆಯ ಸಮಸ್ಯೆಗಳು ಹಾಗೂ ಇತರ ಮನೋರೋಗ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಿತರಾಗಿದ್ದಾರೆ. ಅವರ ಸೇರ್ಪಡೆಯಿಂದ ಕಾರ್ಕಳ ಮತ್ತು ಸುತ್ತ ಮುತ್ತಲಿನ ರೋಗಿಗಳಿಗೆ ಸಕಾಲದಲ್ಲಿ ರೋಗ ನಿರ್ಣಯಮಾಡಿ ಗುಣಮಟ್ಟದ ವೈದ್ಯಕೀಯ ಆರೈಕೆ ನೀಡಲು ಸಹಕಾರಿಯಾಗಲಿದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಖ್ಯಾತ ಮನೋರೋಗ ತಜ್ಞ ಡಾ.ಪಿ.ಎಸ್.ವಿ.ಎನ್. ಶರ್ಮ ಹಾಗೂ ಡಾ.ಅಭಿರಾಮ್ ಪಿ.ಎನ್. ಅವರು ಈಗಾಗಲೇ ಪ್ರತೀ ಶನಿವಾರ ಇಲ್ಲಿ ಸಮಾಲೋಚನೆಗೆ ಲಭ್ಯರಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ, ದೂರವಾಣಿ ಸಂಖ್ಯೆ 9731601150 ಅಥವಾ 08258 230583 ಅನ್ನು ಸಂಪರ್ಕಿಸಬಹುದು.