ಹರಪನಹಳ್ಳಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು. ತಾಲೂಕಿನ ವಿವಿಧ ಕಾಲೇಜುಗಳ ದ್ವಿತೀಯ ಪಿಯು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ನಗರದ ಎಸ್‌ಎಸ್‌ಎಚ್‌ ಜೈನ್‌ ಪಿಯು ಕಾಲೇಜಿನ ಕಲಾ ವಿಭಾಗದಲ್ಲಿ ನೀಲು ಎನ್. ಶೇ. 97.33 ಅಂಕ ಪಡೆದಿದ್ದು, ವಾಣಿಜ್ಯ ವಿಭಾಗದಲ್ಲಿ ಜೆ. ಪ್ರೀತಿ ಶೇ. 96.33 ಅಂಕ ಪಡೆದಿದ್ದಾಳೆ. ಅವರಿಬ್ಬರೂ ಹರಪನಹಳ್ಳಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ ಎಂದು ಆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ. ಕೊಟೇಶ್ವರ ಹಾಗೂ ಪ್ರಾಚಾರ್ಯ ಮಹೇಶ ಎಸ್. ಉಪ್ಪಿನ್‌ ತಿಳಿಸಿದ್ದಾರೆ.

ಕಲಾ ವಿಭಾಗದಲ್ಲಿ ಕೆ. ಭೂಮಿಕಾ ಶೇ. 95.5, ಭಾವನ ಶೇ. 94.16 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ರೇಖಾ ಶೇ. 89.16, ಕೆ. ರಾಜು ಶೇ. 89, ವಿಜ್ಞಾನ ವಿಭಾಗದಲ್ಲಿ ಕೆ. ಆದರ್ಶ ಶೇ. 92.83, ಗುರುಬಸವರಾಜ ಶೇ. 90.83, ಸ್ಪಂದನಾ ಶೇ. 90.83, ಶ್ರುತಿ ಕೆ. ಪೂಜಾರ ಶೇ. 89.66 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಂಗಿ ಬಸಪ್ಪವಿಜ್ಞಾನ ಪಿಯು ಕಾಲೇಜಿಗೆ ಶೇ. 75.94 ಫಲಿತಾಂಶ ಬಂದಿದೆ. ಬಂಗಿ ಬಸಪ್ಪ ವಿಜ್ಞಾನ ಪಿಯು ಕಾಲೇಜಿನಲ್ಲಿ ಒಟ್ಟು ಪರೀಕ್ಷೆಗೆ ಹಾಜರಾಗಿದ್ದು 212 ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿ- 20, ಪ್ರಥಮ ಸ್ಥಾನ -106, ದ್ವಿತೀಯ ಸ್ಥಾನ - 28, ತೃತೀಯ ಸ್ಥಾನ -7 ಪಡೆದಿದ್ದಾರೆ. ಈ ಕಾಲೇಜಿಗೆ ಡಿ. ಮೇಘಾ ಎಂಬಾಕೆ 560 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದು ಪ್ರಾಚಾರ್ಯ ಅರುಣಕುಮಾರ ತಿಳಿಸಿದ್ದಾರೆ.

ಎಸ್‌ಯುಜೆಎಂ ಕಾಲೇಜು ಶೇ. 46.38 ಫಲಿತಾಂಶ: ಇಲ್ಲಿಯ ಎಸ್‌ಯುಜೆಎಂ ಕಾಲೇಜಿನಲ್ಲಿ ಒಟ್ಟು 608 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 282 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 41 ಉನ್ನತ ಶ್ರೇಣಿ, 160 ಪ್ರಥಮ ಸ್ಥಾನ, 60 ದ್ವಿತೀಯ ಸ್ಥಾನ, 21 ತೃತೀಯ ಸ್ಥಾನ ಬಂದಿದೆ. ಕಲಾ ವಿಭಾಗದಲ್ಲಿ ಕುಮಾರ ಹನುಮಂತಪ್ಪ ಡೊಳ್ಳಿನ ಶೇ. 97ರಷ್ಟು ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಬೈರೇಗೌಡ 571 ಅಂಕ, ಕಾಲೇಜಿಗೆ ದ್ವಿತೀಯ, ಎಚ್.ಬಿ. ರೋಹಿಣಿ 570 ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ ಎಂದು ಪ್ರಾಚಾರ್ಯ ಗುರುಸ್ವಾಮಿ ತಿಳಿಸಿದ್ದಾರೆ.


ಸ.ಪ.ಪೂ. ಕಾಲೇಜು-ಶೇ. 53.17: ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು ಪರೀಕ್ಷೆ ಬರೆದವರು 145 ವಿದ್ಯಾರ್ಥಿಗಳು, ಉನ್ನತ ಶ್ರೇಣಿ -7, ಪ್ರಥಮ -47, ದ್ವಿತೀಯ -16, ತೃತೀಯ -7 ಹೀಗೆ ಶೇ. 53.17 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಪ್ರತೀಕ್ಷ -580, ಒಮುಸ್ಲಿಯ 569, ಕೊಟ್ರಮ್ಮ 568 ಅಂಕ ಪಡೆದು ಕಾಲೇಜಿನ ಟಾಪರ್ಸ್‌ ಆಗಿದ್ದಾರೆ ಎಂದು ಪ್ರಾಚಾರ್ಯ ವಿರೂಪಾಕ್ಷಗೌಡ ತಿಳಿಸಿದ್ದಾರೆ.

ನಿಸರ್ಗ ಪಪೂ ಕಾಲೇಜು -ಶೇ.63.63: ಹರಪನಹಳ್ಳಿ ತಾಲೂಕಿನ ನಿಸರ್ಗ ಪಪೂ ಕಾಲೇಜಿನಲ್ಲಿ ಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಅದರಲ್ಲಿ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರಥಮ -11, ದ್ವಿತೀಯ -3, ಶೇ. 63.63 ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ಕಲ್ಯಾಣದವರ್‌ ತಿಳಿಸಿದ್ದಾರೆ.