ಸಾರಾಂಶ
ನಟ ಪುನೀತ್ ಅವರು ನಮ್ಮನ್ನು ಅಗಲಿ ೪ ವರ್ಷಗಳಾಗಿವೆ. ಅವರ ನೆನಪು ಮಾತ್ರ ನೂರು ವರ್ಷ ಇರುತ್ತದೆ ಎಂದರು. ದೊಡ್ಡ ಮನೆಯಲ್ಲಿ ಹುಟ್ಟಿ ಬೆಳೆದು ಅವರು ಮಾಡಿರುವ ನೂರಾರು ಸತ್ಕಾರ್ಯಗಳು ಜನರಲ್ಲಿ ಉಳಿದಿವೆ. ಅಭಿಮಾನಿಗಳಾದ ನಾವು ಅವರ ನೆನಪುಗಳ ಮೂಲಕ ಮುನ್ನೆಡಲು ಮುಂದಾಗಿದ್ದೇವೆ. ಬಡ ಜನರ ಪರವಾಗಿ ನಿಲ್ಲುವ ಕೆಲಸ ಮಾಡುತ್ತೇವೆ. ಇದರಿಂದ ಪುನೀತ್ ಅವರ ಆತ್ಮಕ್ಕೂ ಸಮಾಧಾನ ತರುತ್ತದೆ ಎಂದರು. ಇದಕ್ಕೂ ಮುನ್ನ ನಟ ಪುನೀತ್ ಅಭಿಮಾನಿಗಳು ಪುನೀತ್ ಅವರ ಭಾವಚಿತ್ರ ವಿರಿಸಿ, ಪುಷ್ಪಾಲಂಕಾರ ಮಾಡಿ, ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.
ಚನ್ನರಾಯಪಟ್ಟಣ: ಪುನೀತ್ ರಾಜ್‌ಕುಮಾರ್ ನೆನಪು ಎಂದಿಗೂ ಮಾಸುವುದಿಲ್ಲ. ನೂರು ವರ್ಷದವರೆಗೂ ಉಳಿಯುತ್ತದೆ ಎಂದು ಪುರಸಭಾ ಸದಸ್ಯ ಸಿ. ಎನ್. ಶಶಿಧರ್ ಹೇಳಿದರು.
ಪಟ್ಟಣದ ಮೈಸೂರು ರಸ್ತೆಯ ಟಿವಿಎಸ್ ಶೋರೂಂ ಬಳಿ ನಟ ಪುನೀತ್ ರಾಜಕುಮಾರ್‌ಅವರ ೪ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿ, ನಟ ಪುನೀತ್ ಅವರು ನಮ್ಮನ್ನು ಅಗಲಿ ೪ ವರ್ಷಗಳಾಗಿವೆ. ಅವರ ನೆನಪು ಮಾತ್ರ ನೂರು ವರ್ಷ ಇರುತ್ತದೆ ಎಂದರು. ದೊಡ್ಡ ಮನೆಯಲ್ಲಿ ಹುಟ್ಟಿ ಬೆಳೆದು ಅವರು ಮಾಡಿರುವ ನೂರಾರು ಸತ್ಕಾರ್ಯಗಳು ಜನರಲ್ಲಿ ಉಳಿದಿವೆ. ಅಭಿಮಾನಿಗಳಾದ ನಾವು ಅವರ ನೆನಪುಗಳ ಮೂಲಕ ಮುನ್ನೆಡಲು ಮುಂದಾಗಿದ್ದೇವೆ. ಬಡ ಜನರ ಪರವಾಗಿ ನಿಲ್ಲುವ ಕೆಲಸ ಮಾಡುತ್ತೇವೆ. ಇದರಿಂದ ಪುನೀತ್ ಅವರ ಆತ್ಮಕ್ಕೂ ಸಮಾಧಾನ ತರುತ್ತದೆ ಎಂದರು. ಇದಕ್ಕೂ ಮುನ್ನ ನಟ ಪುನೀತ್ ಅಭಿಮಾನಿಗಳು ಪುನೀತ್ ಅವರ ಭಾವಚಿತ್ರ ವಿರಿಸಿ, ಪುಷ್ಪಾಲಂಕಾರ ಮಾಡಿ, ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.ಈ ವೇಳೆ ಗಂಗಾಧರ್, ಕನ್ನಡವಾಸು, ರಾಹುಲ್, ಲೋಕೇಶ್ ಮತ್ತಿತರಿದ್ದರು.
;Resize=(128,128))
;Resize=(128,128))
;Resize=(128,128))