ಸಾರಾಂಶ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಮಂಗಳೂರು ಇದರ ವತಿಯಿಂದ ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘ ಪುತ್ತೂರು ಸಹಯೋಗದಲ್ಲಿ ಪೆರ್ಣೆ ಶ್ರೀ ಮುಚ್ಚುಲೋಡ್ ಭಗವತೀ ಕ್ಷೇತ್ರಕ್ಕೊಳಪಟ್ಟ ಗಾಣಿಗ ಸಮಾಜದ ಯುವ ಸಮುದಾಯವನ್ನು ಒಟ್ಟುಗೂಡಿಸುವ ಉದ್ದೇಶದಿಂದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ೨೬ ರಂದು ಗಾಣಿಗ ಪ್ರೀಮಿಯರ್ ಲೀಗ್ (ಜಿಪಿಎಲ್-೨೦೨೫) ಆಯೋಜಿಸಲಾಗಿದೆ.
ದ.ಕ.ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ರಾಮ ಮುಗ್ರೋಡಿ ತಿಳಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿ, ವ್ಯವಹಾರ ಪ್ರದರ್ಶನ ಮತ್ತು ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯು ನಡೆಯಲಿದೆ ಎಂದು ಹೇಳಿದರು.ಎಂಟು ತಂಡಗಳ ನಿಗದಿತ ಓವರ್‌ಗಳ ಓವರ್ ಆರ್ಮ್ ಲೀಗ್ ಪಂದ್ಯಾಟ ನಡೆಯಲಿದ್ದು, ಬೆಳಗ್ಗೆ ಗಂಟೆ ೬ಕ್ಕೆ ಪಂದ್ಯಾಟಕ್ಕೆ ಸಮಿತಿ ಗೌರವಾಧ್ಯಕ್ಷ ಶಂಕರ ಪಾಟಾಳಿ ಚಾಲನೆ ನೀಡಲಿದ್ದಾರೆ. ಗಾಣಿಗ ಸಮುದಾಯದ ಉದ್ಯಮಿಗಳಿಗೆ ತಮ್ಮ ವ್ಯವಹಾರವನ್ನು ಪ್ರಚಾರ ಮಾಡುವ ದೃಷ್ಟಿಯಿಂದ ವ್ಯವಹಾರ ಪ್ರದರ್ಶನ ಕೌಂಟರ್ ಒದಗಿಸಿಕೊಡಲಾಗುವುದು. ಸಮುದಾಯದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.ಬೆಳಗ್ಗೆ ಸಭಾ ಕಾರ್ಯಕ್ರಮವನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದಾರೆ. ಉದ್ಯಮಿ ಶಿವಶಂಕರ್ ನೆಕ್ರಾಜೆ ಟ್ರೋಫಿ ಅನಾವರಣ ಮತ್ತು ವಿಜ್ಞಾನ ಮಾದರಿಯ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಸಹಕಾರ ರತ್ನ ಕೆ. ಸೀತಾರಾಮ ರೈ ಸವಣೂರು ಜಿಲ್ಲಾ ಸಂಘದ ವೆಬ್‌ಸೈಟ್ ಅನ್ನು ಅನಾವರಣ ಮಾಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ವ್ಯವಹಾರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಶಾಸಕರಾದ ವೇದವ್ಯಾಸ ಕಾಮತ್, ವೈ. ಭರತ್ ಶೆಟ್ಟಿ, ಮೂಡಬಿದರೆ ಶಾಸಕ ಉಮನಾಥ್ ಕೋಟ್ಯಾನ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ಬೆಂಗಳೂರು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್, ಪಿಡಬ್ಲ್ಯೂಡಿ ಗುತ್ತಿಗೆದಾರ ಬಾಲಚಂದ್ರ ಅಡ್ಕಾರ್ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಸಂಜೆ ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಗಾಣಿಗ ನಿಗಮ ಮಂಡಳಿ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಹಿಂದು ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಸಂಘದ ಗೌರವಾಧ್ಯಕ್ಷ ಶಂಕರ ಪಾಟಾಳಿ, ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಸುಳ್ಯ, ಕೋಶಾಧಿಕಾರಿ ಸುಬ್ಬಪ್ಪ ಪಟ್ಟೆ, ಪುತ್ತೂರು ವಲಯದ ಅಧ್ಯಕ್ಷ ಪ್ರಸಾದ್, ಮಂಗಳೂರು ಶಾಖೆಯ ಅಧ್ಯಕ್ಷ ಕೃಷ್ಣ ಡಿ.ಎಸ್, ಸಂಘದ ನಿರ್ದೇಶಕ ಬಾಲಕೃಷ್ಣ ಕೆ.ಎಸ್. ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))