ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಬೇಕು

| Published : Oct 29 2025, 01:00 AM IST

ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಕ್ಷೇತ್ರವು ಇಂದು ವ್ಯವಹಾರವಾಗಿದೆ. ಇದು ತಪ್ಪು. ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರದಂಥ ಪ್ರಮುಖ ಸೇವೆಗಳ ಮೂಲಕ ಎಲ್ಲರಿಗೂ ನಾವು ಸಮಾನ ಅವಕಾಶಗಳನ್ನು ಕಲ್ಪಿಸುತ್ತಿದ್ದೇವೆ. ಹಣಕಾಸು, ಶಿಕ್ಷಣ, ಸಮಾಜಿಕ ಹಾಗೂ ಆಧ್ಯಾತ್ಮಿಕ ಹೀಗೆ ಯಾವುದೇ ಕ್ಷೇತ್ರವಿರಿಲಿ. ಹುಡುಗರಾಗಲಿ, ಹುಡುಗಿಯರಾಗಿರಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಎಲ್ಲರಿಗೂ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಬೇಕು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ''''ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ''''ದ 73ನೇ ದಿನ ಆಶೀರ್ವಚನ ನೀಡಿ ಮಾತನಾಡಿ, ಈ ಆಶಯವು ಭಾರತೀಯ ಚಿಂತನೆಗೆ ಅನುಗುಣವಾಗಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ವ್ಯಾಪಾರೀಕರಣ ಆರೋಗ್ಯ ಕ್ಷೇತ್ರವು ಇಂದು ವ್ಯವಹಾರವಾಗಿದೆ. ಇದು ತಪ್ಪು. ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರದಂಥ ಪ್ರಮುಖ ಸೇವೆಗಳ ಮೂಲಕ ಎಲ್ಲರಿಗೂ ನಾವು ಸಮಾನ ಅವಕಾಶಗಳನ್ನು ಕಲ್ಪಿಸುತ್ತಿದ್ದೇವೆ. ಹಣಕಾಸು, ಶಿಕ್ಷಣ, ಸಮಾಜಿಕ ಹಾಗೂ ಆಧ್ಯಾತ್ಮಿಕ ಹೀಗೆ ಯಾವುದೇ ಕ್ಷೇತ್ರವಿರಿಲಿ. ಹುಡುಗರಾಗಲಿ, ಹುಡುಗಿಯರಾಗಿರಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂದು ಕಿವಿಮಾತು ಹೇಳಿದರು.ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಚೌಧರಿ ಅವರಿಗೆ ಜಾಗತಿಕ ನಾಯಕತ್ವ ಪುರಸ್ಕಾರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬೆಂಬಲ ನೀಡುತ್ತಿರುವ ಲೆಗ್ರ್ಯಾಂಡ್ ಇಂಡಿಯಾ ಕಂಪನಿಗೆ ಸರ್ಕಲ್ ಆಫ್ ಹಾನರ್ ಪುರಸ್ಕಾರ ಹಾಗೂ ನಮೀಬಿಯಾದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ವೆರೊನಾ ಡು ಪ್ರೀಜ್ ಅವರಿಗೆ ಮಾನವೀಯ ಪುರಸ್ಕಾರ ನೀಡಿ ಗೌರವಿಸಲಾಯಿತು.ಧನ್ವಂತರಿ ಪ್ರತಿಮೆಗೆ ಪೂಜೆಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ 600 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆಯ ಮೇಲೆ ಸ್ಥಾಪಿಸಲಾಗುವ ಧನ್ವಂತರಿ ದೇವರ ಪ್ರತಿಮೆಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಪೂಜಿಸಿದರು. ಪಂಚಲೋಹಗಳಿಂದ ನಿರ್ಮಿಸಲಾಗಿರುವ 21 ಅಡಿ ಎತ್ತರದ ಈ ಪ್ರತಿಮೆಯನ್ನು ಕೇವಲ 40 ದಿನಗಳಲ್ಲಿ ಪಾರಂಪರಿಕ ತಂಜಾವೂರು ಉಲಾವ ಸಿರ್‌ಪಮ್ ವಿಧಾನದಲ್ಲಿ ರೂಪಿಸಲಾಗಿದೆ. ಲೋಹ ಶಿಲ್ಪಗಳನ್ನು ನಿರ್ಮಿಸುವಲ್ಲಿ ಇದೊಂದು ವಿಶೇಷ ತಂತ್ರ ಎನಿಸಿದೆ.

ಆರೋಗ್ಯ ಸೇವೆ ಅತ್ಯುನ್ನತ ಪೂಜೆಔಷಧಿಗಳ ದೇವರು ಎಂದು ಭಾರತೀಯರು ಆರಾಧಿಸುವ ಧನ್ವಂತರಿಯು ಎಲ್ಲರಿಗೂ ಆರೋಗ್ಯ ದಯಪಾಲಿಸುತ್ತಾನೆ ಎನ್ನುವ ನಂಬಿಕೆಯಿದೆ. ಆಸ್ಪತ್ರೆಯ ಮೇಲೆ ಈ ಪ್ರತಿಮೆ ಸ್ಥಾಪಿಸುವುದರಿಂದ ಆರೋಗ್ಯ ಸೇವೆ ಒದಗಿಸುವ ಎಲ್ಲ ವೃತ್ತಿಪರರ ಬದ್ಧತೆಯನ್ನು ಗೌರವಿಸಿದಂತೆ ಆಗುತ್ತದೆ. ಆರೋಗ್ಯ ಸೇವೆಯು ಅತ್ಯುನ್ನತ ಪೂಜೆಯೇ ಆಗಿದೆ.