ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ದಲಿತ ಸಿಎಂ ಜೊತೆಗೆ ಉತ್ತರಾಧಿಕಾರಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಾ.ಪರಮೇಶ್ವರ ಅವರು ಅತ್ಯಂತ ಹಿರಿಯ ನಾಯಕರು, ೮ ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಅತ್ಯುತ್ತಮ ಆಡಳಿತ ನೀಡಿದವರು. ಅಲ್ಲದೆ ಹೆಚ್ವು ಕಾಲ ಕೆಪಿಸಿಸಿಯಲ್ಲಿ ಇದ್ದವರು. ಅವರೆ ಇನ್ನೂ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಹಾಗಾಗಿ ಅವರು ಸೇರಿದಂತೆ ನಾವೆಲ್ಲರೂ ಸೇರಿ ಒಟ್ಟಾಗಿದ್ದು, ಹೈ ಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.5 ವರ್ಷ ಸಿದ್ದರಾಮಯ್ಯ ನವರೇ ಸಿಎಂ
ಸಿಎಂ ಬದಲಾವಣೆ ಕುರಿತು ತೀರ್ಮಾನ ಮಾಡೋದು ಹೈಕಮಾಂಡ್ ಬಿಟ್ಟಿದ್ದು, ಈಗ ನಾನು ಸಿಎಂಗೆ ರೆಡಿ ಇದ್ದೀನಿ ಎಂದು ಬರೆಯಲು ಅವಕಾಶ ಇಲ್ಲ, ಆದರೂ ನೀವೂ ಅದನ್ನೆ ಬರೆಯುತ್ತೀರಿ. ಸಿಎಂ ಆಗೋ ಆಸೆ ಇದ್ದೀಯಾ ಎಂಬ ಪ್ರಶ್ನೆಗೆ ಏನೂ ಇಲ್ಲ, ಹೈಕಮಾಂಡ್ ಏನು ಹೇಳುತ್ತೆ ಅದೇ ತೀರ್ಮಾನ, ಹತ್ತಾರು ಜನರು ಪಕ್ಷಕ್ಕಾಗಿ ಸೇವೆ ಮಾಡಿದವರು ಇದ್ದಾರೆ. ಈಗಿರುವ ಮುಖ್ಯಮಂತ್ರಿಯೇ ಮುಂದೆಯೂ ಮುಂದುವರೆಯುತ್ತಾರೆ, ನವೆಂಬರ್‌ಗೆ ಬದಲಾವಣೆ ಇಲ್ಲ, ೫ ವರ್ಷ ಸಿಎಂ ಸಿದ್ದರಾಮಯ್ಯ ಅವರು ಮುಂದೆವರೆಯುತ್ತಾರೆ ಎಂದರು.ಕೆಪಿಸಿಸಿ ಅಧ್ಯಕ್ಷರಾದಿಯಾಗಿ ಸಾಕಷ್ಟು ಜನ ಅನುಭವಸ್ಥರು, ಅರ್ಹರು ಸಿಎಂ ರೇಸ್‌ನಲ್ಲಿ ಇದ್ದಾರೆ, ಆದರೆ ಬೆಳಗಾದರೆ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ, ಸಿಎಂ ಬದಲಾವಣೆ ನಾವು ತೀರ್ಮಾನ ಮಾಡುವುದಲ್ಲ. ಜೊತೆಗೆ ಬದಲಾವಣೆ ವಿಚಾರ ನಾವು ಮಾತನಾಡುವುದು ಅಪ್ರಸ್ತುತ, ಗೊಂದಲಕ್ಕೆ ಅವಕಾಶ ಬೇಡ, ಎಂದರು.ನಾವು ಪಕ್ಷದ ಶಿಸ್ತಿನ ಸಿಪಾಯಿಗಳು, ೧೩೬ ಜನ ಶಾಸಕರಾಗಿದ್ದೇವೆ, ಅದಕ್ಕೆ ನಾಯಕತ್ವ ಬೇಕು, ಕಡೆಯ ವ್ಯಕ್ತಿಯನ್ನ ಭೇಟಿಯಾಗಿ ಪಕ್ಷಕ್ಕೆ ಓಟ್ ಮಾಡಿಸಿದ್ದಾರೆ. ಒಬ್ಬೊಬ್ಬರೆ ಗೆಲ್ಲಕ್ಕೆ ಆಗಲ್ಲ, ಎಲ್ಲರ ಶ್ರಮ ಇಂದು ಪಕ್ಷ ಅಧಿಕಾರಕ್ಕೆ ಬಂದಿದೆ. ಸತೀಶ್ ಜಾರಿಕಿಹೊಳಿ ಅವರು ಹಿರಿಯ ನಾಯಕರಿದ್ದಾರೆ, ಐಕ್ಯತಾ ಸಮಾವೇಶ ಚಿತ್ರದುರ್ಗದಲ್ಲಿ ಮಾಡಿ ಅಹಿಂದ ಒಗ್ಗಟ್ಟನ್ನ ಪ್ರದರ್ಶನ ಮಾಡಿದ್ದೇವೆ, ಇದರಲ್ಲಿ ಎಲ್ಲರ ಪಾತ್ರವೂ ಇದೆ, ಆದ್ರೆ ಸತೀಶ್ ಜಾರಿಕಿಹೊಳಿಯವರು ಅಹಿಂದಗೆ ನಾಯಕರಾಗುತ್ತಾರೆ ಎಂದು ಯತಿಂದ್ರ ಅವರು ಹೇಳಿದ್ದಾರೆ ಆದರೆ ಸಿಎಂ ಆಗುತ್ತಾರೆ ಎಂದು ಹೇಳಿಲ್ಲವೆಂದು ಸ್ಪಷ್ಟಪಡಿಸಿದರು.
;Resize=(128,128))
;Resize=(128,128))
;Resize=(128,128))