ಮಡಿಕೇರಿ: ಜಿಲ್ಲೆಯಾದ್ಯಂತ ಗುರುವಾರ ಮಳೆ ಪ್ರಮಾಣ ತೀರಾ ಇಳಿಮುಖಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಬಿಡುವು ನೀಡಿ ಮಳೆ ಸುರಿಯಿತು. ಆದರೆ ಪ್ರವಾಬ ಭೀತಿ ಸಂಪೂರ್ಣ ಇಳಿದಿಲ್ಲ.ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ತಲಕಾವೇರಿ, ಬ್ರಹ್ಮಗಿರಿ ಬೆಟ್ಟ ಪ್ರದೇಶ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಸುರಿದ ಹಿನ್ನೆಲೆ ಕರಡಿಗೋಡು, ಚಿಕ್ಕನಹಳ್ಳಿ ಪೈಸಾರಿ ಮತ್ತು ನೆಲ್ಯಹುದಿಕೇರಿ ಭಾಗಗಳಲ್ಲಿ ಪ್ರವಾಹದ ಆತಂಕ ಉಂಟಾಗಿದೆ. ಕರಡಿಗೋಡು ಗ್ರಾಮದಲ್ಲಿ ಐದು ಮನೆಗಳು ಜಲಾವೃತಗೊಂಡಿದೆ.ಮನೆಗಳಿಗೆ ಹೋಗುವ ರಸ್ತೆಯೇ ಸಂಪೂರ್ಣ ಬಂದ್ ಆಗಿದೆ. ರಸ್ತೆ ಮೇಲೆ ಪ್ರವಾಹದ ನೀರು ಎರಡು ಅಡಿಯಷ್ಟು ಹರಿಯುತ್ತಿದೆ. ಚಿಕ್ಕನಹಳ್ಳಿ ಪೈಸಾರಿಗೆ ಹೋಗುವ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದಾರೆ. ರಸ್ತೆಗೆ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧ ಮಾಡಲಾಗಿದೆ. ಮಳೆ ಕೊಂಚ ಬಿಡುವು ನೀಡಿರುವ ಹಿನ್ನೆಲೆ ಪ್ರವಾಹದ ಭೀತಿಯಿಂದ ಜನರು ನಿರಾಳರಾಗಿದ್ದಾರೆ. ಕಾರಿನ ಮೇಲೆ ಉರುಳಿದ ಮರ: ಕೊಡಗಿನ ಐಕೊಳ ಎಂಬಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಭಾರಿ ಗಾತ್ರದ ಮರ ಬಿದ್ದು, ಭಾರಿ ಅನಾಹುತ ತಪ್ಪಿದೆ. ಕೊಂಡಂಗೇರಿಯ ಆಲಿ ಎಂಬುವರು ಪ್ರಯಾಣಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಕೊಂಡಂಗೇರಿಯಿಂದ ಮೂರ್ನಾಡುವಿಗೆ ತೆರಳುತ್ತಿದ್ದಾಗ ಗಾಳಿ ಮಳೆಗೆ ಮರ ಬಿದ್ದಿದೆ. ಕಾರಿನಲ್ಲಿ ಆಲಿ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ. ತಕ್ಷಣವೇ ಸ್ಥಳಕ್ಕೆ ಬಂದು ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 47.16 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 49.80 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 51.95 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ 49.95 ಮಿ.ಮೀ. ಸೋಮವಾರಪೇಟೆ ತಾಲೂಕಿನಲ್ಲಿ 69.82 ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ 14.30 ಮಿ.ಮೀ. ಮಳೆಯಾಗಿದೆ. ಮಡಿಕೇರಿ 28.50, ನಾಪೋಕ್ಲು 68.20, ಸಂಪಾಜೆ 20.50, ಭಾಗಮಂಡಲ 82, ವಿರಾಜಪೇಟೆ 63.40, ಅಮ್ಮತ್ತಿ 40.50, ಹುದಿಕೇರಿ 48, ಶ್ರೀಮಂಗಲ 102, ಪೊನ್ನಂಪೇಟೆ 32, ಬಾಳೆಲೆ 17.80, ಸೋಮವಾರಪೇಟೆ 57.60, ಶನಿವಾರಸಂತೆ 48, ಶಾಂತಳ್ಳಿ 122.50, ಕೊಡ್ಲಿಪೇಟೆ 51.20, ಕುಶಾಲನಗರ 6.60, ಸುಂಟಿಕೊಪ್ಪ 22 ಮಿ.ಮೀ. ಮಳೆಯಾಗಿದೆ.

ಹಾರಂಗಿ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2841.55 ಅಡಿಗಳು. ಇಂದಿನ ನೀರಿನ ಒಳಹರಿವು 3665 ಕ್ಯುಸೆಕ್, ಹೊರ ಹರಿವು ನದಿಗೆ 180 ಕ್ಯುಸೆಕ್.ಕೊಡಗಿನ ಐಕೊಳ ಎಂಬಲ್ಲಿ ಗುರುವಾರ ಚಲಿಸುತ್ತಿದ್ದ ಕಾರಿನ ಮೇಲೆ ಭಾರಿ ಗಾತ್ರದ ಮರ ಬಿದ್ದು, ಭಾರಿ ಅನಾಹುತ ತಪ್ಪಿದೆ. ಕೊಂಡಂಗೇರಿಯ ಆಲಿ ಎಂಬುವರು ಪ್ರಯಾಣಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಕೊಂಡಂಗೇರಿಯಿಂದ ಮೂರ್ನಾಡುವಿಗೆ ತೆರಳುತ್ತಿದ್ದಾಗ ಗಾಳಿ ಮಳೆಗೆ ಮರ ಬಿದ್ದಿದೆ. ಕಾರಿನಲ್ಲಿ ಆಲಿ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ. ತಕ್ಷಣವೇ ಸ್ಥಳಕ್ಕೆ ಬಂದು ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ.